ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ವಿವಿಧ ಘಟಕಗಳಿಗೆ ಸಂದರ್ಶನ ನಡೆಸಿ ಅಧ್ಯಕ್ಷರ ಆಯ್ಕೆ

ಯುವ ಕಾಂಗ್ರೆಸ್‌ಗೆ 25 ಲಕ್ಷ ನೋಂದಣಿ * ಪದಾಧಿಕಾರಿಗಳ ಆಯ್ಕೆಗೆ ಮತದಾನ ಮುಕ್ತಾಯ
Published : 22 ಸೆಪ್ಟೆಂಬರ್ 2024, 16:27 IST
Last Updated : 22 ಸೆಪ್ಟೆಂಬರ್ 2024, 16:27 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಘಟಕ, ವಿಧಾನಸಭಾ ಕ್ಷೇತ್ರ ಘಟಕ, ಬ್ಲಾಕ್ ಘಟಕಕ್ಕೆ ಕಳೆದ ಒಂದು ತಿಂಗಳಿನಿಂದ ನಡೆದ ಚುನಾವಣಾ ಪ್ರಕ್ರಿಯೆ ಭಾನುವಾರ ಕೊನೆಗೊಂಡಿದೆ. ಒಂದು ತಿಂಗಳ ಬಳಿಕ ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಅತೀ ಹೆಚ್ಚು ಮತಗಳನ್ನು ಪಡೆದ ಮೂವರನ್ನು ಎಐಸಿಸಿ ಪ್ರತಿನಿಧಿಗಳು ಸಂದರ್ಶನ ನಡೆಸಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿದ್ದಾರೆ. ಉಳಿದ ಇಬ್ಬರಿಗೆ ಅಧ್ಯಕ್ಷರ ನಂತರದ ಸ್ಥಾನದ ಹೊಣೆ ನೀಡಲಾಗುತ್ತದೆ.

ಅಧ್ಯಕ್ಷ ಸ್ಥಾನಕ್ಕೆ ಎಚ್.ಎಸ್. ಮಂಜುನಾಥ ಗೌಡ, ದೀಪಿಕಾ ರೆಡ್ಡಿ, ಅಬ್ದುಲ್ ದೇಸಾಯಿ ಸೇರಿ 14 ಮಂದಿ ಸ್ಪರ್ಧೆಯಲ್ಲಿದ್ದಾರೆ. ರಾಜ್ಯ ಘಟಕದಲ್ಲಿ 47 ಪ್ರಧಾನ ಕಾರ್ಯದರ್ಶಿಗಳ ಸ್ಥಾನವಿದ್ದು, 170 ಮಂದಿ ಸ್ಪರ್ಧೆಯಲ್ಲಿದ್ದಾರೆ. ಜೊತೆಗೆ, 41 ಜಿಲ್ಲಾ ಘಟಕ, 224 ವಿಧಾನಸಭಾ ಕ್ಷೇತ್ರ ಘಟಕ, 464 ಬ್ಲಾಕ್ ಘಟದ ಅಧ್ಯಕ್ಷ ಸ್ಥಾನಗಳಿಗೂ ಮತದಾನ ನಡೆದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ 25,84,770 ಮಂದಿ ಯುವ ಕಾಂಗ್ರೆಸ್ ಸದಸ್ಯತ್ವ ಪಡೆಯುವ ಜೊತೆಗೆ ಮತದಾನ ಪ್ರಕ್ರಿಯೆಯಲ್ಲಿಯೂ ಭಾಗವಹಿಸಿದ್ದಾರೆ. ಮುಂದಿನ ಒಂದು ತಿಂಗಳಲ್ಲಿ ಸದಸ್ಯತ್ವ ಪಡೆದವರ ದಾಖಲೆ ಪರಿಶೀಲನೆ ನಡೆಯಲಿದೆ. ಚುನಾವಣೆ ಆಯೋಗ ನೀಡಿದ ಮತದಾರರ ಗುರುತಿನ ಚೀಟಿ, ಸದಸ್ಯತ್ವ ಪಡೆದವರ ಭಾವಚಿತ್ರ, ಹುಟ್ಟಿದ ದಿನ ಎಲ್ಲವನ್ನೂ ಪರಿಶೀಲಿಸಿ ಸದಸ್ಯತ್ವ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಯುವ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT