ಶಹಾಪುರ: ‘ಬಸವಣ್ಣನವರ ಮುಖವಾಡ ಹಾಕಿಕೊಂಡು ಹಿಂದೂ ಧರ್ಮ ನಾಶ ಮಾಡುತ್ತಿರುವ ದುಷ್ಟಶಕ್ತಿಗಳ ವಿರುದ್ಧ ಬಸವಾದಿ ಶರಣರ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇನ್ನು ಮುಂದೆಯಾದರೂ ಅನಾವಶ್ಯಕವಾಗಿ ಹಿಂದೂ ಧರ್ಮವನ್ನು ಕೆಣಬಾರದು. ಬಸವ ತಾಲಿಬಾನಿಗಳ ಬಗ್ಗೆ ನಾವು ಎಚ್ಚರದಿಂದ ಇರಬೇಕು’ ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವಾದಿ ಶಿವಶರಣರ ಹಿಂದೂ ಸಮಾವೇಶದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮಗೆ ದೇವತೆಗಳ ಬಗ್ಗೆ ಅಪಾರ ಗೌರವ ಇರುವಾಗ ನೀಚ ಸ್ವಭಾವದವರು ದೇವರ ಬಗ್ಗೆ ಅಪಹಾಸ್ಯ ಮಾಡುವುರಿಗೆ ಬುದ್ಧಿ ಕಲಿಸಬೇಕಾಗಿದೆ. ಕಾಯಕ ದಾಸೋಹ ಹಾಗೂ ಸಮಾನತೆಯ ಪರಂಪರೆ ಮುನ್ನಡೆಸಿಕೊಂಡು ಹೋಗುತ್ತಿರುವ ನಿಜವಾದ ಬಸವ ಅಭಿಮಾನಿಗಳು ಎಂಬುವುದು ನೆನಪಿರಲಿ. ಬಸವಣ್ಣನವರನ್ನುಒಂದೇ ಸಮಾಜಕ್ಕೆ ಸೀಮಿತಗೊಳಿಸುವ ಕಾರ್ಯ ಬೇಡ, ಎಲ್ಲಾ ಸಮಾಜವನ್ನು ಒಗ್ಗೂಡಿಸಿದ ದಾರ್ಶನಿಕರ ವಚನಗಳು ಪ್ರಸ್ತುತವಾಗಿವೆ’ ಎಂದು ಅವರು ಪ್ರತಿಪಾದಿಸಿದರು.

‘ಹಿಂದೂ ಧರ್ಮದ ಬಗ್ಗೆ ಗಂಧಗಾಳಿ ಗೊತ್ತಿಲ್ಲದ ಕಮಿನಿಷ್ಟರು ಜನತೆಯಲ್ಲಿ ವಿಷ ಬೀಜ ಬಿತ್ತುವ ಕೆಲಸ ಸಾಗಿದೆ. ಕಾಯಕವನ್ನು ಮರೆತು ಫೇಸ್ಬುಕ್, ವ್ಯಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಇಲಸಲ್ಲದ ಬರೆದು ಹಾಕಿ ಜನತೆಯಲ್ಲಿ ಗೊಂದಲ ಎಬ್ಬಿಸುವ ದುಷ್ಟಕೂಟದ ಬಳಗವು ಇದೆ. ಮನೆಯಲ್ಲಿ ಮಹಾಮನೆ ಎನ್ನುತ್ತಾ ಬಸವಣ್ಣನವರ ಹೆಸರಿನಲ್ಲಿ ಗಂಜಿ ಗಿರಾಕಿಗಳು ಹೊಟ್ಟೆಪಾಡಿಗೆ ಕಾಯಕ ನಡೆಸಿವೆ’ ಎಂದು ಛೇಡಿಸಿದರು.

ಗುಂಬಾಳಪುರಮಠದ ಸಿದ್ದೇಶ್ವರ ಶಿವಾಚಾರ್ಯರು, ನಾಗಠಾಣ ಮಠದ ಸೋಮೇಶ್ವರ ಸ್ವಾಮೀಜಿ, ಅಣಬಿ ಸೊಪ್ಪಿಮಠದ ಚನ್ನವೀರ ಸ್ವಾಮೀಜಿ, ದೋರನಹಳ್ಳಿ ಚಿಕ್ಕಮಠದ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ, ಪ್ರಮುಖರಾದ ಅಮೀನರಡ್ಡಿ ಪಾಟೀಲ ಯಾಳಗಿ, ಮಹೇಶಗೌಡ ಮುದ್ನಾಳ, ಬಸವರಾಜ ವಿಭೂತಿಹಳ್ಳಿ, ಆರ್.ಎಂ.ಹೊನ್ನಾರಡ್ಡಿ, ಅಡಿವೆಪ್ಪ ಜಾಕಾ, ವೈದ್ಯ ಡಾ.ಚಂದ್ರಶೇಖರ ಸುಬೇದಾರ, ಬಸವರಾಜ ಹಿರೇಮಠ, ರಾಜೂಗೌಡ ಉಕ್ಕಿನಾಳ, ಗುರು ಕಾಮಾ, ಚಂದ್ರಶೇಖರ ಯಾಳಗಿ, ತಿರುಪತಿ ಹತ್ತಿಕಟಗಿ ಸೇರಿದಂತೆ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು ಹಾಗೂ ಸಮಾವೇಶಕ್ಕೆ ಸೋಲಾಪುರ, ವಿಜಯಪುರ, ರಾಯಚೂರು, ಕಲಬುರಗಿ, ಬಳ್ಳಾರಿ, ವಿಜಯಪುರ, ಯಾದಗಿರಿ, ಬೆಳಗಾಂವ, ಬೀದರ ಸೇರಿದಂತೆ ವಿವಿಧ ಜಿಲ್ಲೆಯಿಂದ ಆಗಮಿಸಿದ್ದ ಮಠಾಧೀಶರು ಸಮಾವೇಶಕ್ಕೆ ಸಾಕ್ಷಿಯಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-30-2006648326

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.