ಶಹಾಪುರ: ‘ಸೂಫಿ ಸಂತರ ನಾಡಿನಲ್ಲಿ ಸಾಮರಸ್ಯ ಕದಡಿದರೆ ವೇದಿಕೆಯ ಮೇಲೆ ಅಂತಹವರನ್ನು ಬಂಧಿಸಬೇಕು’ ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ತಿಳಿಸಿದರು.

ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ ಜಾಗತಿಕ ಲಿಂಗಾಯತ ಮಹಾಸಭೆ, ಕಲ್ಯಾಣ ಕರ್ನಾಟಕ, ಬಸವಪರ ಸಂಘಟನೆಗಳು, ಕಾಯಕ ಶರಣರ ಒಕ್ಕೂಟ,ಸೌಹಾರ್ದ ಕರ್ನಾಟಕ, ದಲಿತ, ಹಿಂದುಳಿದ, ಪ್ರಗತಿಪರ, ರೈತ, ಕಾರ್ಮಿಕ, ಮಹಿಳಾ ಹಾಗೂ ಯುವ ಜನ ವಿದ್ಯಾರ್ಥಿ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವಾದಿ ಶರಣರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ತನ್ನ ನಾಲಿಗೆಯನ್ನು ಹರಿಬಿಟ್ಟು ಸುಪ್ರಿಂಕೋರ್ಟ್ನಲ್ಲಿ ವಾಗ್ದಂಡನೆ ವಿಧಿಸಿಕೊಂಡ ಒಬ್ಬ ಸ್ವಾಮೀಜಿಗೆ ಆತ್ಮಗೌರವ ಮಾನ ಮರ್ಯಾದೆ ಇದ್ದರೆ ಧ್ಯಾನ ಮಾಡಲಿ. ಯುವಕರನ್ನು ಹುರುದುಂಬಿಸಿ ಪ್ರಚೋದನಾಕಾರಿ ಭಾಷಣ ಮಾಡಿದರೆ ಪೊಲೀಸರು ಸುಮ್ಮನೆ ಕೈಕಟ್ಟಿಕುಳಿತುಕೊಳ್ಳಬಾರದು’ ಎಂದು ಕನೇರಿ ಸ್ವಾಮೀಜಿ ಹೆಸರನ್ನು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದರು.

ಪ್ರಗತಿಪರ ಚಿಂತಕಿ ಮೀನಾಕ್ಷಿ ಬಾಳಿ ಮಾತನಾಡಿ, ‘ಬಸವ ತತ್ವವನ್ನು ಚಾಚು ತಪ್ಪದೆ ಪಾಲಿಸುವ ಶ್ರಮಿಕ ವರ್ಗ ನಮ್ಮದಾಗಿದೆ. ಕೋಮುವಾದ ಹೆಸರಿನಲ್ಲಿ ಬೆಂಕಿ ಇಡುವ ಕೆಲಸ ನಿಲ್ಲಿಸಿ. ಧರ್ಮದ ಹೆಸರಿನಲ್ಲಿ ಸೀಟಿ ಊದಿ ಯುವಕರನ್ನು ಪ್ರಚೋದನೆ ಮಾಡುವುದು ಬೇಡ. ನಿಮ್ಮ ಆರ್ಎಸ್ಎಸ್ ಅಜೆಂಡಾ ಸಗರನಾಡಿನಲ್ಲಿ ನಡೆಯುವುದಿಲ್ಲ. ಬಸವಾದಿ ಶರಣರ ಹಿಂದೂ ಸಮಾವೇಶ ಠುಸ್ ಆಗಿದೆ’ ಎಂದು ಛೇಡಿಸಿದರು.

ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯರು, ಬಸಯ್ಯ ಶರಣರು ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು ಹಾಗೂ ಪ್ರಗತಿಪರ ಚಿಂತಕರಾದ ಪ್ರೊ.ಆರ್.ಕೆ.ಹುಡಗಿ, ಗುಂಡಪ್ಪ ಕಲಬುರಗಿ, ಗಿರೆಪ್ಪಗೌಡ ಬಾಣತಿಹಾಳ, ಚೆನ್ನಪ್ಪ ಆನೇಗುಂದಿ, ತಿಮ್ಮಯ್ಯ ಪುರ್ಲೆ, ಸಿದ್ರಾಮ ಹೊನ್ಕಲ್, ವಿಶ್ವಾರಾಧ್ಯ ಸತ್ಯಂಪೇಟೆ, ಅಯ್ಯಣ್ಣ ಕನ್ಯಾಕೊಳ್ಳುರ, ಆರ್.ಚೆನ್ನಬಸ್ಸು ವನದುರ್ಗ, ರವೀಂದ್ರನಾಥ ಹೊಸಮನಿ, ದಾವಲಸಾಬ ನದಾಫ್, ಎಸ್.ಎಂ.ಸಾಗರ, ಶಿವಣ್ಣ ಇಜೇರಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ, ಜೈಲಾಲ ತೋಟದಮನೆ, ಮಲ್ಲಿಕಾರ್ಜುನ ಹಿರೇಮಠ, ಶೇಖರ ದೊರೆ, ಶರಣಬಸಪ್ಪ ಪಾಟೀಲ, ಸಯ್ಯದ ಉದ್ದಿನ ಖಾದ್ರಿ, ಯೂಸುಫ್ ಸಿದ್ದಿಕಿ, ರಾಮು ಸಗರ, ಭೀಮರಾಯ ಪೂಜಾರಿ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-30-34380615

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.