ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ವೈದ್ಯಕೀಯ ಉಪಕರಣಗಳ ಖರೀದಿ ಕುರಿತಂತೆ ಬಿಜೆಪಿ ಮಾಡಿದ ಆರೋಪ ನಿರಾಧಾರ. ಟೆಂಡರ್, ಖರೀದಿ ಪ್ರಕ್ರಿಯೆಗಳು ಸಾರ್ವಜನಿಕ ಸಂಗ್ರಹಣೆಗಳಲ್ಲಿ ಕರ್ನಾಟಕ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಪ್ರಕಾರವೇ ನಡೆದಿವೆ. ಪುರಾವೆಗಳಿಲ್ಲದೆ ಬಿಜೆಪಿ ಇಂತಹ ಆರೋಪಗಳು ಮಾಡುತ್ತಿದೆ ಎಂದರು.