ಕಾರ್ಗಲ್: 2025-26ನೇ ಸಾಲಿನಲ್ಲಿ ಕೇಂದ್ರ ವಿದ್ಯುತ್ ಪ್ರಾಧಿಕಾರ ನಿಗದಿಪಡಿಸಿದ್ದ ಗುರಿಗಿಂತಲೂ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದಿಸುವ ಮೂಲಕ ಶರಾವತಿ ಕಣಿವೆ ಯೋಜನೆಯ ಜಲವಿದ್ಯುದಾಗರಗಳು ಅಭೂತಪೂರ್ವ ಸಾಧನೆ ಮಾಡಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ಬಿ. ಆನಂದಕುಮಾರ್ ತಿಳಿಸಿದರು.

ಶರಾವತಿ ಜಲವಿದ್ಯುದಾಗರಕ್ಕೆ ಕೇಂದ್ರ ವಿದ್ಯುತ್ ಪ್ರಾಧಿಕಾರವು 4,800 ದಶಲಕ್ಷ ಯೂನಿಟ್ ಗುರಿಯನ್ನು ನೀಡಿತ್ತು. ಆದರೆ 5,642 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಮಹಾತ್ಮಗಾಂಧಿ ಜಲವಿದ್ಯುದಾಗರ 549 ದಶಲಕ್ಷ ಬದಲಾಗಿ 643 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿದೆ. ಶರಾವತಿ ಟೈಲ್ ರೇಸ್ ಗೇರುಸೊಪ್ಪ ಜಲವಿದ್ಯುದಾಗರ 598 ದಶಲಕ್ಷ ಗುರಿ ಪೈಕಿ 643 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಿ ದಾಖಲೆ ಸೃಷ್ಟಿಸಿದೆ.

ಕಳೆದ ಸಾಲಿನಲ್ಲಿ ಆದ ಉತ್ತಮ ಮಳೆಯಿಂದಾಗಿ ದಾಖಲೆ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಿದೆ. ಕೆಪಿಸಿ ನಿಗಮದ ಕೆಲವು ವಿದ್ಯುದಾಗರಗಳಲ್ಲಿ ನವೀಕರಣ ಕೆಲಸದ ಕಾರಣಕ್ಕೆ ಘಟಕಗಳು ಸ್ಥಗಿತಗೊಂಡಿದ್ದರೂ ಉಳಿದ ಘಟಕಗಳಿಂದ ಸಾರ್ವಕಾಲಿಕ ಗರಿಷ್ಠ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಜಾಗತಿಕ ವಿದ್ಯಮಾನಗಳಲ್ಲಿ ರಾಜ್ಯಕ್ಕೆ ಅಗತ್ಯ ಇಂಧನ ಭದ್ರತೆ ಒದಗಿಸಲಾಗಿದೆ. ಶರಾವತಿ ಮತ್ತು ಮಹಾತ್ಮ ಗಾಂಧಿ ಜಲವಿದ್ಯುದಾಗರಗಳು ರಾಜ್ಯದ ಹಳೆಯ ಜಲವಿದ್ಯುತ್ ಕೇಂದ್ರಗಳಾಗಿದ್ದರೂ ಈ ಘಟಕಗಳ ಕಾರ್ಯಕ್ಷಮತೆ ಗಮನಾರ್ಹವಾಗಿದೆ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-42-1794478883

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.