ಶಿರಹಟ್ಟಿ: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಸಾರ್ವಜನಿಕರು ಮನೆಯ ಕಸವನ್ನು ಕಡ್ಡಾಯವಾಗಿ ನಾಲ್ಕು ಪ್ರತ್ಯೇಕ ವಿಭಾಗಗಳನ್ನಾಗಿ ವಿಂಗಡಿಸಿ ಕಸದ ವಾಹನಗಳಿಗೆ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಹಸಿ ಕಸ, ನೈಸರ್ಗಿಕವಾಗಿ ಕೊಳೆಯುವ ಮತ್ತು ಗೊಬ್ಬರ ಮಾಡಬಹುದಾದ ಅಡುಗೆ ಮನೆಯ ಹಾಗೂ ತೋಟದ ಕಸ ಒಳಗೊಂಡಿರುವ ವಸ್ತುಗಳು, ಅಡುಗೆ ಮನೆಯ ತ್ಯಾಜ್ಯ, ತರಕಾರಿ, ಹಣ್ಣುಗಳು, ಸಿಪ್ಪೆಗಳು, ಆಹಾರ ಹಾಗೂ ಒಣಕಸವನ್ನು ವಿಂಗಡಿಸಬೇಕು. ಒಣಕಸವನ್ನು ಹಸಿರು ಬಕೆಟ್ನಲ್ಲಿ, ಮರುಬಳಕೆಗೆ ಮಾಡಬಹುದಾದ ವಸ್ತುಗಳು, ಪ್ಲಾಸ್ಟಿಕ್, ಕಾಗದ, ರಟ್ಟಿನ ಬಾಕ್ಸ್, ಲೋಹದ ವಸ್ತುಗಳು, ಬಟ್ಟೆಗಳನ್ನು ನೀಲಿ ಬಕೆಟ್ನಲ್ಲಿ ಹಾಕಬೇಕು.

ಡೈಫರ್, ನ್ಯಾಪಕೀನ್ ಅನ್ನು ಕೆಂಪು ಬಕೆಟ್ನಲ್ಲಿ, ರಾಸಾಯನಿಕ, ಪರಿಸರಕ್ಕೆ ಹಾನಿ ಉಂಟು ಮಾಡುವ ತ್ಯಾಜ್, ಬಣ್ಣದ ಡಬ್ಬ, ಕೀಟನಾಶಕ, ಬಾಟಲಿಗಳು, ಬಲ್ಬ್, ವೈದ್ಯಕೀಯ ತ್ಯಾಜ್ಯ ಮತ್ತು ಹಳೇಯ ಬ್ಯಾಟರಿಗಳಂತಹ ವಸ್ತುಗಳನ್ನು ಕಪ್ಪು ಬಕೆಟ್ನಲ್ಲಿ ಹಾಕಬೇಕು.

ಹೀಗೆ ನಾಲ್ಕು ವಿಭಾಗಗಳಲ್ಲಿ ಕಸ ವಿಭಾಗಿಸಿ ನೀಡದಿದ್ದರೆ ಅಂಥವರಿಗೆ ದಂಡ ವಿಧಿಸಲಾಗುವುದು. ವಿದ್ಯುತ್ ಮತ್ತು ನೀರಿನ ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-23-683623027

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.