ಶಿರಸಿ: ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯತೆಗಾಗಿ ಮೂರು ದಶಕಗಳಿಂದ ಶ್ರಮಿಸುತ್ತಿರುವ ಸಮಗ್ರ ವಿಕಾಸ ಟ್ರಸ್ಟ್ ಅಧ್ಯಕ್ಷ ಉಮಾಪತಿ ಭಟ್ ಕೆ.ವಿ. ಅವರಿಗೆ ಕರ್ನಾಟಕ ಸರ್ಕಾರದ ಕರ್ನಾಟಕ ಜೀವವೈವಿಧ್ಯ ಪ್ರಶಸ್ತಿ ಒಲಿದಿದೆ. ಮೇ 22ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿರುವ ವಿಶ್ವ ಜೀವವೈವಿಧ್ಯ ದಿನಾಚರಣೆ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಯುವಕರಿಗಾಗಿ ಪರಿಸರ ಪ್ರಶಿಕ್ಷಣ ಹಾಗೂ ಮಕ್ಕಳಿಗಾಗಿ ಹಸಿರು ಪಯಣದಂತಹ ನೂತನ ಜ್ಞಾನ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಇವರು, ಜಿಲ್ಲೆಯಾದ್ಯಂತ ಸುಮಾರು 140 ಕಡೆಗಳಲ್ಲಿ ನವಗ್ರಹ ವನ, ತೀರ್ಥಂಕರರ ವನ, ಮಾರಿಕಾಂಬಾ ವನ ಸೇರಿದಂತೆ ಹತ್ತಾರು ವೈವಿಧ್ಯಮಯ ವನಗಳನ್ನು ನಿರ್ಮಿಸಿದ್ದಾರೆ. ಜೌಗು ಭೂಮಿ ಉಳಿಸಿ ಆಂದೋಲನ, ದೇವರಕಾಡು ನಿರ್ಮಾಣ ಹಾಗೂ ಪ್ರಮುಖ ಜಲಮೂಲಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಇವರು, ಶಿರಸಿ ಸೇರಿದಂತೆ ಹಲವು ಭಾಗಗಳ ಜೀವವೈವಿಧ್ಯ ದಾಖಲಾತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಪರಿಸರ ಸಾಹಿತ್ಯ ರಚನೆ, ಸಸ್ಯಪುರಾಣ ಅಂಕಣ ಬರಹ ಹಾಗೂ ರಾಜ್ಯದಲ್ಲೇ ಮೊದಲ ಬಾರಿಗೆ ಕಾಡು ಹಣ್ಣು ಮೇಳ ಆಯೋಜಿಸಿದ ಖ್ಯಾತಿ ಇವರದ್ದಾಗಿದೆ. ಪ್ರಸ್ತುತ ಶಿರಸಿ ನಗರಸಭೆಯ ಜೀವವೈವಿಧ್ಯ ಸಮಿತಿ ಸದಸ್ಯರಾಗಿರುವ ಉಮಾಪತಿ ಭಟ್ ಸಂಕಲ್ಪದಂತೆ ಮೂಡಿಬರುತ್ತಿರುವ ವಿಶಿಷ್ಟ ಸಂಗೀತ ಸ್ವರ ವನ ಶಿರಸಿಯಲ್ಲಿ ಸದ್ಯದಲ್ಲೇ ಲೋಕಾರ್ಪಣೆಯಾಗಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-20-1090122611

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.