ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನ ವಿರೋಧಿಸಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳ ಆಶ್ರಯದಲ್ಲಿ ಮಂಗಳವಾರ ಅಹೋರಾತ್ರಿ ಧರಣಿ ಆರಂಭವಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಗಾರಮಕ್ಕಿಯ ಮಾರುತಿ ಗುರೂಜಿ, ‘ನಮಗಾಗಿ ಈ ಹೋರಾಟ ನಡೆಸುತ್ತಿಲ್ಲ. ಬದಲಿಗೆ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಈ ಹೋರಾಟ. ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಕೃತಿಗೆ ವಿರುದ್ಧವಾದ ಕಾರ್ಯ ಆಗಿರುವುದರಿಂದ ಅದು ಆಗಬಾರದು’ ಎಂದರು. ‘ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಜವಾಬ್ದಾರಿ ದೇಶದ ಎಲ್ಲಾ ನಾಗರಿಕರ ಮೇಲಿದೆ. ಪರಿಸರದ ಮೇಲೆ ಆಗುತ್ತಿರುವ ಅವ್ಯಾಹತ ದಾಳಿ ತಡೆಯಬೇಕಾಗಿದೆ. ಪ್ರಜ್ಞೆ ಇರುವವರು ಪರಿಸರ ನಾಶಕ್ಕೆ ಮುಂದಾಗುವುದಿಲ್ಲ. ನಮಗೆ ಪ್ರಜ್ಞಾವಂತ ಸರ್ಕಾರ ಬೇಕಾಗಿದೆ’ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ಹೇಳಿದರು.

‘ವಿಶ್ವದ ಎಂಟು ಪಾರಂಪರಿಕ ತಾಣಗಳಲ್ಲಿ ಪಶ್ಚಿಮ ಘಟ್ಟವು ಒಂದು ಎಂದು ಯುನೆಸ್ಕೋ ಹೇಳಿದೆ. ಹೀಗಾಗಿ ಘಟ್ಟವನ್ನು ಸಂರಕ್ಷಿಸಲೇಬೇಕು. ಯೋಜನೆ ವಿರೋಧಿಸಿ 24 ಗಂಟೆಗಳ ಹೋರಾಟ ಕೇವಲ ಸಾಂಕೇತಿಕ ಮಾತ್ರ’ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.

‘ಪರಿಸರದ ಮೇಲಿನ ದೌರ್ಜನ್ಯದ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಹವಾಮಾನದ ವೈಪರಿತ್ಯದ ಪರಿಣಾಮ ಆಲಿಕಲ್ಲು ಮಳೆ ನೋಡಿದ್ದೇವೆ. ಪ್ರಕೃತಿ ತಾಳಮೇಳ ಕಳೆದುಕೊಂಡಿದೆ’ ಎಂದು ಹೇಳಿದರು.

‘ಯೋಜನೆಗೆ ಮುಖ್ಯ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಜೈಲಿಗೆ ಕಳುಹಿಸಬೇಕು. ಇಲ್ಲವಾದರೆ ಮಲೆನಾಡು ಮರುಭೂಮಿಯಾಗುತ್ತದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಪಶ್ಚಿಮಘಟ್ಟದ ಸಸ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಚಿತ್ರಪಟದಲ್ಲಿ ತೋರಿಸಬೇಕಾಗುತ್ತದೆ’ ಎಂದು ಕೆ.ಈ. ಕಾಂತೇಶ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖರಾದ ಬಿ.ಎಂ.ಕುಮಾರಸ್ವಾಮಿ, ಶ್ರೀಪತಿ, ಜನಾರ್ದನ ಪೈ, ಎಸ್.ಬಿ. ಅಶೋಕ್ಗಾಂಧಿ, ಶ್ರೀಕಾಂತ್, ನವ್ಯಶ್ರೀ ನಾಗೇಶ್, ಈ. ವಿಶ್ವಾಸ್, ದುಮ್ಮಳ್ಳಿ ಶಿವಮ್ಮ ಮತ್ತು ಹುಬ್ಬಳ್ಳಿಯ ಅಕ್ಕ ಫೌಂಡೇಷನ್ ಟ್ರಸ್ಟ್ನ ವೀರಪ್ಪ ಅರಕೇರಿ, ಕವಿತಾ ಎ.ಎಸ್., ವಿಜಯಲಕ್ಷ್ಮಿ, ರಾಜಶೇಖರ್, ಮಿಥಲಗಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-42-948478616

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.