ತೀರ್ಥಹಳ್ಳಿ: ‘ತಾಲ್ಲೂಕಿನ ದಬ್ಬಣಗದ್ದೆ ಸರ್ಕಾರಿ ಕ್ವಾರಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮರಳು ಕಳವು ನಡೆದಿದೆ. ಅಕ್ರಮದಲ್ಲಿ ತಹಶೀಲ್ದಾರ್ ಕೂಡ ಶಾಮೀಲಾಗಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು’ ಎಂದು ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.

‘ದಬ್ಬಣಗದ್ದೆ ಕ್ವಾರಿಗೆ ಬೆಳಿಗ್ಗೆ ಭೇಟಿ ನೀಡಿದ್ದ ತಹಶೀಲ್ದಾರ್, ಮರಳು ದಂಧೆ ನಡೆಸುತ್ತಿದ್ದವರ ಜತೆ ಚರ್ಚಿಸಿ ವಾಪಸಾಗಿದ್ದಾರೆ. ಮಧ್ಯಾಹ್ನ ನಾನು ಸ್ಥಳಕ್ಕೆ ಭೇಟಿ ಕೊಟ್ಟು ಕಳವು ಪ್ರಕರಣ ಬಯಲು ಮಾಡಿದ್ದೇನೆ. ತಹಶೀಲ್ದಾರ್ ಬೆಳಿಗ್ಗೆ ಭೇಟಿ ಕೊಟ್ಟು ಕಾನೂನು ಕ್ರಮ ಜರುಗಿಸದೆ ವಾಪಸ್ಸಾಗಿದ್ದು ಏಕೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘57 ಟನ್ ಮರಳಿಗೆ ಮಾತ್ರ ಪರ್ಮಿಟ್ ಪಡೆದು ಕಳೆದ ವರ್ಷ ದಬ್ಬಣಗದ್ದೆ ಕ್ವಾರಿಯಲ್ಲಿ 28 ಸಾವಿರ ಟನ್ ಮರಳು ಸಾಗಣೆ ಮಾಡಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಗುತ್ತಿಗೆದಾರನಿಗೆ ₹1.8 ಕೋಟಿ ದಂಡ ವಿಧಿಸಿದೆ. ಸರ್ಕಾರಕ್ಕೆ ದಂಡ ಪಾವತಿಸದಿದ್ದರೂ ಈ ವರ್ಷ ಮರಳು ಸಾಗಣೆಗೆ ಗಣಿ ಇಲಾಖೆ ಅವಕಾಶ ನೀಡಿದೆ. ಮಾಳೂರು ಠಾಣೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮರಳು ಕಳವು ದಂಧೆಯಲ್ಲಿ ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟು ಉಂಟುಮಾಡುತ್ತಿದ್ದಾರೆ’ ಎಂದು ದೂರಿದರು.

‘ತುಂಗಾ ನದಿ ಪಾತ್ರದಲ್ಲಿ ನಡೆಯುತ್ತಿರುವ ಮರಳು ಕಳವು ದಂಧೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ದಬ್ಬಣಗದ್ದೆ, ಮುಂಡುವಳ್ಳಿ ಕ್ವಾರಿಯಲ್ಲಿ ಅಪಾರ ಪ್ರಮಾಣದಲ್ಲಿ ಮರಳು ಸಾಗಣೆ ಮಾಡಲಾಗಿದೆ. ಸರ್ಕಾರಕ್ಕೆ ಅತ್ಯಲ್ಪ ಹಣ ಪಾವತಿ ಮಾಡಲಾಗಿದ್ದು, ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ. ಈ ಹಗರಣದ ಕುರಿತು ಜಿಲ್ಲಾಧಿಕಾರಿ ತಕ್ಷಣ ತನಿಖೆ ನಡೆಸಬೇಕು. ಜಿಲ್ಲಾಧಿಕಾರಿ ನಿರ್ಲಕ್ಷ್ಯವಹಿಸಿದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತೇನೆ’ ಎಂದು ಎಚ್ಚರಿಸಿದರು.

‘ಬಗರ್ ಹುಕುಂ ಸಾಗುವಳಿದಾರರಿಗೆ 2024ರಿಂದ ಈವರೆಗೂ ಒಂದೇ ಒಂದು ಹಕ್ಕುಪತ್ರ ಕೊಡಲೂ ಸಾಧ್ಯವಾಗಿಲ್ಲ. ಭೂ ಮಂಜೂರಾತಿ ಸಮಿತಿಯ ನಾಮನಿರ್ದೇಶಿತ ಕಾಂಗ್ರೆಸ್ ಸದಸ್ಯರು ಈ ಕುರಿತು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಮಿತಿ ಸಭೆಗೆ ರೈತರ ಅರ್ಜಿಯ ಯಾವುದೇ ಕಡತ ತರುತ್ತಿಲ್ಲ’ ಎಂದು ಬೇಸರಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹೆದ್ದೂರು ನವೀನ್, ಮುಖಂಡರಾದ ಬೇಗುವಳ್ಳಿ ಸತೀಶ್, ಚಂದವಳ್ಳಿ ಸೋಮಶೇಖರ್, ಸಂದೇಶ ಜವಳಿ, ಸಂತೋಷ್ ದೇವಾಡಿಗ, ಸೊಪ್ಪುಗುಡ್ಡೆ ರಾಘವೇಂದ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-42-1152072377

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.