ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಪುರ ಸ್ಮಾರಕ ಜೀರ್ಣೋದ್ಧಾರಕ್ಕೆ ₹2 ಕೋಟಿ ಬಿಡುಗಡೆಗೆ ಸಿದ್ದರಾಮಯ್ಯ ಆದೇಶ

Published : 17 ಸೆಪ್ಟೆಂಬರ್ 2024, 15:34 IST
Last Updated : 17 ಸೆಪ್ಟೆಂಬರ್ 2024, 15:34 IST
ಫಾಲೋ ಮಾಡಿ
Comments

ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರ ಧ್ವಜ ಸತ್ಯಾಗ್ರಹ ಸ್ಮಾರಕ ಸೌಧದ ಜೀರ್ಣೋದ್ಧಾರಕ್ಕೆ ₹2 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.

ಮೈಸೂರು–ಬೆಂಗಳೂರು ಹೆದ್ದಾರಿಗೇ ಹೊಂದಿಕೊಂಡಿರುವ ಸ್ಮಾರಕ ಸೌಧವು ಪಾಳು ಬಿದ್ದಿದೆ. ಅದರ ಜೀರ್ಣೋದ್ಧಾರಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ದಿನೇಶ್ ಗೂಳಿಗೌಡ ಅವರು ಇದೇ 9ರಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.

‘ಸ್ಮಾರಕ ಭವನಕ್ಕೆ ಬೀಗ ಹಾಕಲಾಗಿದ್ದು, ಪ್ರವಾಸಿಗರು ಭೇಟಿ ನೀಡಿದರೂ ಒಳ ಪ್ರವೇಶಿಸಲಾರದೆ ವಾಪಸಾಗುತ್ತಾರೆ. ನಿರ್ವಹಣೆ ಇಲ್ಲದೇ ಇರುವ ಕಾರಣ ಭವನದ ಒಳಗೆ ಮತ್ತು ಆವರಣದಲ್ಲಿ ದೂಳು ತುಂಬಿದೆ. ಒಳಗಿನ ಚಿತ್ರಪಟಗಳು ಹಾಳಾಗಿವೆ. ಸಂಗೀತ ಕಾರಂಜಿಯೂ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಅವರು ಮನವಿ ಪತ್ರದಲ್ಲಿ ವಿವರಿಸಿದ್ದರು.

‘ಕಟ್ಟಡ ದುರಸ್ತಿ, ಚಿತ್ರಗಳ ಬದಲಾವಣೆ, ಆವರಣದಲ್ಲಿನ ಉದ್ಯಾನ ನಿರ್ವಹಣೆ, ಕಾವಲುಗಾರರ ನೇಮಕ ಮತ್ತಿತರ ಕಾರ್ಯಗಳಿಗಾಗಿ ₹2 ಕೋಟಿ ಅನುದಾನ ಬಿಡುಗಡೆ ಮಾಡಿ’ ಎಂದು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT