ಬೆಂಗಳೂರು: ‘ಹೈಕಮಾಂಡ್ ನಾಯಕರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಉಪಾಹಾರ ಸಭೆಯಲ್ಲಿ ಅವರು ಆ ವಿಷಯವನ್ನು ನಮ್ಮ ಜೊತೆ ಹಂಚಿಕೊಳ್ಳಬಹುದು’ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇವತ್ತು ನಮ್ಮನ್ನು (ಸಚಿವರನ್ನು) ಅವರು (ಸಿದ್ದರಾಮಯ್ಯ) ಉಪಾಹಾರ ಸಭೆಗೆ ಕರೆದಿದ್ದಾರೆ’ ಎಂದರು.

‘ಈಗಾಗಲೇ ಹೈಕಮಾಂಡ್ ಜೊತೆ ಮುಖ್ಯಮಂತ್ರಿ ಮಾತನಾಡಿದ್ದಾರೆ. ಏನು ಮಾತುಕತೆ ಆಗಿದೆ ಎನ್ನುವುದಷ್ಟೆ ಅವರಿಗೆ ಗೊತ್ತಿಲ್ಲ. ಇವತ್ತಿನ ಸಭೆಯಲ್ಲಿ ನಮಗೆ ಮಾಹಿತಿ ಕೊಡಬಹುದು’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಆಯೋಜಿಸಿರುವ ಉಪಾಹಾರ ಕೂಟಕ್ಕೆ ಸಚಿವರು ಬಂದಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವರು ‘ಕಾವೇರಿ’ಗೆ ತಲುಪಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ಕಾಲಿಗೆ ಎರಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.