ಬೆಂಗಳೂರು: ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಿದ್ದರಾಮಯ್ಯ ಅವರನ್ನೇ ಪೂರ್ಣಾವಧಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಅಹಿಂದ ಚಳವಳಿ ಆಗ್ರಹಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಳವಳಿಯ ರಾಜ್ಯ ಘಟಕದ ಅಧ್ಯಕ್ಷ ಸಿದ್ದಯ್ಯ ಮೂರ್ತಿ, ‘ದೇಶದಲ್ಲಿ ಬಹುಸಂಖ್ಯಾತರಾಗಿರುವ ಅಹಿಂದ ಸಮುದಾಯದವರು ಸಮ ಸಮಾಜದೆಡೆಗೆ ಬರಲು, ಮುಂದಿನ ಪೀಳಿಗೆಗೆ ಈ ಸಮಾನತೆಯ ದೇಶವನ್ನು ಉಳಿಸಲು ಸಿದ್ದರಾಮಯ್ಯ ಅವರಂತಹ ಪ್ರಾಮಾಣಿಕ, ಬದ್ಧತೆಯ ರಾಜಕಾರಣಿಯ ಅಗತ್ಯತೆ ಇದೆ’ ಎಂದು ತಿಳಿಸಿದರು.

‘ಪಕ್ಷದ ಒತ್ತಡ, ರಾಜಕಾರಣ ಸೇರಿದಂತೆ ಇತರೆ ತಂತ್ರಗಾರಿಕೆಗೆ ಮಣಿದು ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಲು ಸಿದ್ದರಾಮಯ್ಯ ಮುಂದಾದರೆ, ಕಾಂಗ್ರೆಸ್ ಹೈಕಮಾಂಡ್ ಅನುಮತಿ ನೀಡಬಾರದು. ಒಂದು ವೇಳೆ ರಾಜ್ಯದಲ್ಲಿ ರಾಜಕೀಯ ದುಃಸ್ಥಿತಿ ಎದುರಾದರೆ ಕಾಂಗ್ರೆಸ್ ಹೈಕಮಾಂಡ್ ಅಹಿಂದದ ಮತ್ತೊಬ್ಬ ನಾಯಕ ಕೆ.ಎನ್. ರಾಜಣ್ಣ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಬೇಕು’ ಎಂದು ಒತ್ತಾಯಿಸಿದರು.

‘ಅಹಿಂದ ಸಮುದಾಯಗಳು ಕಾಂಗ್ರೆಸ್ ಪಕ್ಷದ ಕಾಯಂ ಮತಬ್ಯಾಂಕ್ ಆಗಿವೆ. ಈ ಸಮುದಾಯಗಳ ಹಿತ ರಕ್ಷಣೆಯನ್ನು ಕಾಪಾಡಬೇಕು’ ಎಂದರು.

ಅಹಿಂದ ಸಮುದಾಯದ ವಿವಿಧ ಮುಖಂಡರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.