‘ನಾನು ಹೈಕಮಾಂಡ್ ಮಾತನ್ನು ಮಾತ್ರವೇ ಕೇಳುವುದು, ಅವರು ಹೇಳಿದರೆ ಐದು ವರ್ಷವೂ ಮುಖ್ಯಮಂತ್ರಿ ಆಗಿರುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಬುಧವಾರ ಮಾತನಾಡಿದ ಅವರು, ‘ಐದು ವರ್ಷವೂ ಕಾಂಗ್ರೆಸ್ ಸರ್ಕಾರ ಇರುತ್ತದೆ. ನೀವೇ ಇರಿ ಎಂದರೆ ಇರುತ್ತೇನೆ. ಎಲ್ಲಾ ತೀರ್ಮಾನವನ್ನೂ ಮಾಡುವುದು ಹೈಕಮಾಂಡ್. ಬೇರೆ ಯಾರೇ ಏನೇ ಹೇಳಿದರೂ ಅವರ ವೈಯಕ್ತಿಕ ಅಭಿಪ್ರಾಯವಷ್ಟೆ’ ಎಂದರು.‘ರಾಹುಲ್ ಗಾಂಧಿ ನನ್ನನ್ನು ಈವರೆಗೂ ನವದೆಹಲಿಗೆ ಕರೆದಿಲ್ಲ. ಅವರಾಗಿಯೇ ಕರೆದರೆ ಹೋಗುತ್ತೇನೆ. ನಾನಾಗಿಯೇ ಹೋಗಬೇಕಾದಲ್ಲಿ ರಾಹುಲ್ ಗಾಂಧಿ ಅವರು ಸಮಯ ಕೊಟ್ಟಾಗ ಹೋಗುತ್ತೇನೆ. ಸಚಿವ ಸಂಪುಟ ಪುನರ್ರಚನೆಯೋ, ವಿಸ್ತರಣೆಯೋ ಎಂಬುದನ್ನು ಅವರು ಸಮಯ ಕೊಟ್ಟ ಮೇಲೆ ಚರ್ಚಿಸಿ ತೀರ್ಮಾನಿಸುತ್ತೇನೆ. ಯಾವಾಗ ಕರೆಯುತ್ತಾರೆಯೋ ಗೊತ್ತಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.