ಮೈಸೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೆಲ್ಲಾ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ, ಭರಪೂರ ಅನುದಾನವನ್ನೂ ಒದಗಿಸುತ್ತಿದ್ದರು. ‘ಜನತಾ ದಸರಾ’ಕ್ಕಾಗಿ ತಮ್ಮ ಪ್ರೋತ್ಸಾಹ ಇದ್ದೇ ಇದೆ ಎಂದು ನಿರೂಪಿಸುತ್ತಿದ್ದರು.

‘ಮುಖ್ಯಮಂತ್ರಿಯಾಗಿ’ ಎಂಟು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದೂ ಅವರ ‘ದಾಖಲೆ’ಯೇ.

2013ರಿಂದ 2018ರವರೆಗೆ ಸತತ ಐದು ದಸರಾ ಮಹೋತ್ಸವದಲ್ಲೂ ಭಾಗವಹಿಸಿದ್ದರು. 2023ರಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಮೂರು ಬಾರಿ ದಸರಾ ಮಹೋತ್ಸವವನ್ನು ಸಂಭ್ರಮದಿಂದ ಮುನ್ನಡೆಸಿದ್ದಾರೆ. ಇದರೊಂದಿಗೆ, ಈಚಿನ ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ ಒಟ್ಟು ಎಂಟು ಬಾರಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ, ಜಂಬೂಸವಾರಿ (ವಿಜಯದಶಮಿ ಮೆರವಣಿಗೆ) ಉದ್ಘಾಟಿಸಿದ ಪ್ರಮುಖ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 5 ಬಾರಿ, ಎನ್.ಧರಂಸಿಂಗ, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಅವರು ತಲಾ 2 ಬಾರಿ, ಡಿ.ವಿ. ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ತಲಾ ಒಂದು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

‘ನಾಡಹಬ್ಬವನ್ನು ಈ ಬಾರಿಯೂ ವಿಜೃಂಭಣೆಯಿಂದ ನಡೆಸಲಾಗುವುದು’ ಎಂದು ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಹೋದ ವರ್ಷ (2025) ಘೋಷಿಸಿದ್ದರು. ಅದರಂತೆ, ಅನುದಾನವನ್ನೂ ಒದಗಿಸಿದ್ದರು. ಸರ್ಕಾರದಿಂದಲೇ ₹ 30 ಕೋಟಿ ಅನುದಾನವನ್ನು ಜಿಲ್ಲಾಡಳಿತಕ್ಕೆ ನೀಡಲಾಗಿತ್ತು.
.ಮಾಸ್ ಲೀಡರ್ ಸಿದ್ದರಾಮಯ್ಯ: ಮರಳಿನ ಮೇಲೆ ಅಕ್ಷರಾಭ್ಯಾಸದಿಂದ ಸಿಎಂ ಗಾದಿವರೆಗೆ....ಸಂಪಾದಕೀಯ | ಸಿದ್ದರಾಮಯ್ಯ ರಾಜೀನಾಮೆ ಪರ್ವ: ಉಳಿಯಲಿದೆ ಛಾಪು, ಹೆಜ್ಜೆಗುರುತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.