ಮೈಸೂರು: ‘ಹೈಕಮಾಂಡ್ ಬಿಡು ಅಂದ್ರೆ ಬಿಡ್ತೀನಿ, ಮುಂದುವರಿಯಿರಿ ಎಂದರೆ ಮುಂದುವರಿಯುತ್ತೇನೆ. ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ವರುಣ ಹೋಬಳಿಯ ಪಿಲ್ಲಹಳ್ಳಿಯ ಹೆಲಿಪ್ಯಾಡ್ನಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ನನಗೆ ಬಜೆಟ್ನ ದಾಖಲೆಗಳನ್ನು ಮುರಿಯುವು ದರ ಮೇಲೆ ನಂಬಿಕೆ ಇಲ್ಲ’ ಎಂದರು. ‘ಯಾರೋ ಏನೋ ಹೇಳುವುದು ನನಗೆ ಮುಖ್ಯವಲ್ಲ. ಹೈಕಮಾಂಡ್ ತೀರ್ಮಾನವಷ್ಟೇ ಮುಖ್ಯ. ಹೈಕಮಾಂಡ್ ಮೇಲೆ ನನಗೆ ಯಾವಾಗಲೂ ವಿಶ್ವಾಸವಿದೆ. ನಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಇಡೀ ನಾಡಿನ ಜನ ಬಯಸಿದ್ದಾರೆ. ಆದರೆ, ಅಂತಿಮ ತೀರ್ಮಾನ ಹೈಕಮಾಂಡ್ನದ್ದೇ’ ಎಂದರು.
.ಗ್ಯಾರಂಟಿ ನಿರಾತಂಕ, ಅಭಿವೃದ್ಧಿಗೂ ಅಂಕ: ಇದು ಸಿದ್ದರಾಮಯ್ಯ ಅರ್ಥಲೋಕ.ಸಿದ್ದರಾಮಯ್ಯ ಅವರ ದಾಖಲೆಯ ಬಜೆಟ್ ಭಾಷಣದಲ್ಲಿ ಭಾವನೆಗಳೇ ಇರಲಿಲ್ಲ: ಸುರೇಶ್ ಕುಮಾರ್.
ಸಾಲ ಮಾಡಿದ್ದೇವೆ, ಹೊರೆಯಾಗಿಲ್ಲ: ‘ಅಭಿವೃದ್ಧಿಗಾಗಿ ಆರ್ಥಿಕ ಶಿಸ್ತಿನ ಇತಿಮಿತಿಯಲ್ಲೇ ಸಾಲ ಮಾಡಿದ್ದೇವೆ. ಅದರಿಂದ ರಾಜ್ಯದ ಜನರಿಗೆ ಹೊರೆಯಾಗಿಲ್ಲ’ ಎಂದು ಸಮರ್ಥಿಸಿ ಕೊಂಡರು. ‘ಸಾಲ ಮಾಡದೇ ಅಭಿವೃದ್ಧಿ ಸಾಧ್ಯವಿಲ್ಲ. ಆರ್ಥಿಕ ಹೊಣೆಗಾರಿಕೆ ಕಾಯ್ದೆ ತಿಳಿಸಿರುವ ಮಾನದಂಡಗಳ ಮಿತಿ ಯಲ್ಲಿಯೇ ನಮ್ಮ ಸಾಲದ ಪ್ರಮಾಣವಿದೆ. ಆರ್ಥಿಕ ಹೊಣೆಗಾರಿಕೆ ಕಾಯ್ದೆಯಂತೆ ಸಾಲವು ಶೇ 25ರ ಮಿತಿಯಲ್ಲಿ ಇರಬೇಕು. ನಮ್ಮ ಸಾಲದ ಪ್ರಮಾಣ ಶೇ 24.94ರಷ್ಟಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರದ ಸಾಲದ ಪ್ರಮಾಣ ₹ 218 ಲಕ್ಷ ಕೋಟಿಯಾಗಿದೆ. ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ₹ 165 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದು ಈ ಕಾಯ್ದೆಯ ಪ್ರಕಾರ ಶೇ 55.6ರಷ್ಟಿದೆ. ದೇಶದ ವಿತ್ತೀಯ ಕೊರತೆ ಶೇ 4.4ರಷ್ಟಿದ್ದು, ಶೇ 3ರೊಳಗೆ ಇರಬೇಕಾಗಿತ್ತು. ರಾಜ್ಯದ ವಿತ್ತೀಯ ಕೊರತೆ ಶೇ 2.95 ರಷ್ಟಿದ್ದು, ಕಾಯ್ದೆಯು ಸೂಚಿಸಿರುವ ಜಿಡಿಪಿಯ ಶೇ 3ರ ಮಿತಿಯೊಳಗೇ ಇದೆ. ಹೀಗಾಗಿ, ನಾವು ಹೆಚ್ಚಾಗಿ ಸಾಲ ಮಾಡಿದ್ದೇವೆ ಎನ್ನುವ ಬಿಜೆಪಿಯವರ ಹೇಳಿಕೆ ಸತ್ಯಕ್ಕೆ ದೂರವಾದುದು’ ಎಂದು ಸಮರ್ಥಿಸಿ ಕೊಂಡರು. ‘ಈ ಎಲ್ಲ ಮಾಹಿತಿಗಳು ಆರ್.ಅಶೋಕ ಹಾಗೂ ಬಿಜೆಪಿಯವರಿಗೆ ಗೊತ್ತಾ? ಅವರೆಲ್ಲರೂ ಆರ್ಥಿಕ ಹೊಣೆಗಾರಿಕೆ ಕಾಯ್ದೆಯನ್ನು ಚೆನ್ನಾಗಿ ಓದಿಕೊಳ್ಳಲು ಹೇಳಿ’ ಎಂದರು.
.ಸಿಎಂ ಸಿದ್ದರಾಮಯ್ಯ ಮಂಡಿಸಿದ 17ನೇ ಬಜೆಟ್ಗೆ ವಿರೋಧ ಪಕ್ಷಗಳ ಆಕ್ಷೇಪ.
ಎಲ್ಲ ವರ್ಗದವರಿಗಾಗಿ: ‘ನಾನು ಒಂದು ವರ್ಗದ ಪರವಾಗಿ ಬಜೆಟ್ ಮಂಡಿಸಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿ, ಸಾಮಾಜಿಕ ನ್ಯಾಯವನ್ನು ಕೇಂದ್ರೀಕರಿಸಿ ರೂಪಿಸಿದ್ದು. ಎಲ್ಲರಿಗೂ ಸಮಾನ ಅವಕಾಶ ನೀಡುವುದೇ ಉದ್ದೇಶ’ ಎಂದರು. ‘ಕೇಂದ್ರದಿಂದ ರಾಜ್ಯಕ್ಕೆ ₹ 10ಸಾವಿರ ಕೋಟಿ ನಷ್ಟವಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಾಗಿದ್ದ ಅನುದಾನ ಕೊಡದ ಕಾರಣ ರಾಜ್ಯದ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ’ ಎಂದು ದೂರಿದರು.

ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸಿರುವುದು ಜನಸಾಮಾನ್ಯರು ಸೇರಿ ಎಲ್ಲರ ಮೇಲೂ ಹೊರೆಯಾಗಿ ಪರಿಣಮಿಸಿದೆ.
– ಸಿದ್ದರಾಮಯ್ಯ,ಮುಖ್ಯಮಂತ್ರಿ
.ಕೇಂದ್ರದ ಅಸಹಕಾರವೇ ದೊಡ್ಡ ತೊಡಕು: ಮುಖ್ಯಮಂತ್ರಿ ಸಿದ್ದರಾಮಯ್ಯ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.