ಬೆಂಗಳೂರು: 16ನೇ ಬಾರಿ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಮಾರ್ಚ್.6) 17ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಕರ್ನಾಟಕ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ನಾಯಕ ಹಾಗೂ ರಾಷ್ಟ್ರಮಟ್ಟದಲ್ಲಿ ಅತ್ಯಧಿಕ ಬಾರಿ ಬಜೆಟ್ ಮಂಡಿಸಿದ ಎರಡನೇ ನಾಯಕ ಎಂಬ ಸಾಧನೆ ಮಾಡಿದ್ದಾರೆ.

ಶುಕ್ರವಾರ ಬಜೆಟ್ ಭಾಷಣ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟದಲ್ಲಿ ಅತೀ ಹೆಚ್ಚು ಬಾರಿ ಮತ್ತು ಅತ್ಯಧಿಕ ಸಮಯ ಬಜೆಟ್ ಮಂಡಿಸಿದ ನಾಯಕ ಎಂಬ ಸಾಧನೆ ಮಾಡಿದ್ದಾರೆ.

ಸಿದ್ದರಾಮಯ್ಯನವರು ಶುಕ್ರವಾರ 3 ಗಂಟೆ 31 ನಿಮಿಷಗಳ ಸುಧೀರ್ಘ ಬಜೆಟ್ ಭಾಷಣ ಮಂಡಿಸಿದ್ದಾರೆ. ಆ ಮೂಲಕ ಸುಧೀರ್ಘ ಬಜೆಟ್ ಮಂಡಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಬೆಳಿಗ್ಗೆ 10:20ಕ್ಕೆ ಬಜೆಟ್ ಓದಲು ಆರಂಭಿಸಿದ ಅವರು ಮಧ್ಯಾಹ್ನ 1:51ರ ವೇಳೆಗೆ ಮುಕ್ತಾಯಗೊಳಸಿದರು. ಅವರ ಬಜೆಟ್ ಮಂಡಣೆಯ ಒಟ್ಟು ಸಮಯ 3:31 ನಿಮಿಷಗಳು.

ಈ ಹಿಂದೆ 2025ರಲ್ಲಿ 3 ಗಂಟೆ 26 ನಿಮಿಷಗಳ ಕಾಲ ಬಜೆಟ್ ಭಾಷಣ ಮಂಡಿಸಿದ್ದರು. ಅದು ಈ ಹಿಂದಿನ ದಾಖಲೆಯಾಗಿತ್ತು. 2024ರಲ್ಲಿ ಅವರು 3:10 ನಿಮಿಷಗಳ ಕಾಲ ಬಜೆಟ್ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.