ಬೆಂಗಳೂರು: 'ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎನ್ನುವುದು ಊಹಾಪೋಹ. ರಾಜೀನಾಮೆ ಪ್ರಶ್ನೆಯೇ ಉದ್ಭವ ಆಗುವುದಿಲ್ಲ' ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, 'ವೇಣುಗೋಪಾಲ, ಸಿಎಂ, ಡಿಸಿಎಂ ಸುದ್ದಿಗೋಷ್ಟಿಯಲ್ಲಿ ಮಾತಾಡಿದ್ದಾರೆ. ಅವರ ಹೇಳಿಕೆ ನಿಮ್ಮ ಮಾಧ್ಯಮಗಳಲ್ಲೇ ಬಂದಿದೆ. ಅವರು ಹೇಳಿದ್ದೇನು, ರಾಜ್ಯಸಭೆ , ಎಂಎಲ್ಸಿ ಚುನಾವಣೆ ಬಗ್ಗೆ ಮಾತ್ರ ಚರ್ಚೆ ಎಂದು. ಬೇರೆಯದ್ದೆಲ್ಲಾ ಊಹಾಪೋಹ ಎಂದಿದ್ದಾರೆ. ನಿನ್ನೆ ಬೇರೆ ಯಾವುದೇ ವಿಚಾರದ ಬಗ್ಗೆ ಚರ್ಚೆ ಆಗಿಲ್ಲ' ಎಂದರು.

'ನಾವು ಬೆಳಿಗ್ಗೆ, ರಾತ್ರಿ ಕೆ.ಜೆ. ಜಾರ್ಜ್ ಮನೆಯಲ್ಲಿ ಇದ್ದೆವು. ಒಳ್ಳೆಯ ಊಟ ಕೊಟ್ಟರು. ನಾವೆಲ್ಲ ಸಿದ್ದರಾಮಯ್ಯ ಜೊತೆಯೇ ಇದ್ದೆವು. ಒಟ್ಟಿಗೆ ದೆಹಲಿಗೆ ಹೋಗಿ ಬಂದಿದ್ದೇವೆ' ಎಂದರು.

'ವೇಣುಗೋಪಾಲ, ಸುರ್ಜೇವಾಲಾ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸಾರ್ವಜನಿಕ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯಸಭೆ ಚುನಾವಣೆ ಬಗ್ಗೆ ನಮ್ಮನ್ನು ಕರೆಸಿದ್ದಾರೆ ಅಂತ ಹೇಳಿದ್ದಾರೆ. ಬೇರೆ ಯಾವುದೇ ವಿಚಾರ ಚರ್ಚೆ ಆಗಿಲ್ಲ. ನಾವು ಸಿದ್ದರಾಮಯ್ಯ ಹೋದಾಗ ಜೊತೆಗೆ ಹೋಗಿದ್ದೇವೆ ಎಂದರು.

'ಬ್ರೆಕ್ ಫಾಸ್ಟ್ ನಂತರ ರಾಜೀನಾಮೆ ಕೊಡುವುದು ಊಹಾಪೋಹ' ಎಂದೂ ಹೇಳಿದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, 'ಸಿದ್ದರಾಮಯ್ಯ ಅವರನ್ನು ಮುಂದುವರೆಸಿ ಎಂದು ಒತ್ತಾಯ ಯಾಕೆ ಮಾಡಲಿ? ನಾವೆಲ್ಲ ಸಿದ್ದರಾಮಯ್ಯ ಅವರ ಜೊತೆ ಇದ್ದೇವೆ ಅಷ್ಟೆ. ಬದಲಾವಣೆ ಮಾಡೋ ಆಗಿದ್ರೆ ಒತ್ತಾಯ ಮಾಡಬಹುದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.