ಬೆಂಗಳೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ, ಕಾವೇರಿ ನಿವಾಸದ ಬಳಿ ಅವರ ಅಭಿಮಾನಿಗಳು ಬೆಳಗ್ಗಿನಿಂದಲೇ ಸೇರತೊಡಗಿದರು.

ಹೈಕಮಾಂಡ್ ನಾಯಕರ ಜತೆಗೆ ಮಂಗಳವಾರದ ಭೇಟಿಯ ನಂತರ ಸಿದ್ದರಾಮಯ್ಯ ಅವರು ಮೌನಕ್ಕೆ ಜಾರಿದರು.

ಜವಾಹರಲಾಲ್ ನೆಹರೂ ಪುಣ್ಯ ಸ್ಮರಣೆಯಲ್ಲಿ ಭಾಗಿಯಾದ ನಂತರ ಸಿದ್ದರಾಮಯ್ಯ ಅವರು ನಾಡಿನ ಜನತೆಗೆ ಕೃತಜ್ಞತೆ ಹೇಳಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು. ಸುದ್ದಿ ಮಾಧ್ಯಮಗಳು ಆ
ಪೋಸ್ಟ್ಗಳನ್ನು, ‘ವಿದಾಯ ಸಂದೇಶ’ ಎಂದು ವರದಿ ಮಾಡಿದವು. ಅದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಅಭಿಮಾನಿಗಳು ರಾಜ್ಯದ ವಿವಿಧ ಭಾಗಗಳಿಂದ ವಿಧಾನಸೌಧ, ಕಾವೇರಿ ನಿವಾಸದ ಬಳಿಗೆ
ಬಂದಿಳಿಯತೊಡಗಿದರು.

ಮಧ್ಯಾಹ್ನದ ಹೊತ್ತಿಗೆ ತಂಡ–ತಂಡವಾಗಿ ಬಂದ ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಜನರು, ಕಾವೇರಿ ನಿವಾಸದ ಎದುರು ಜಮೆಗೊಂಡರು. ಬೀದರ್ನಿಂದ ಬಂದ ಮತ್ತೊಂದು ಗುಂಪು
ಅವರಿಗೆ ಜತೆಯಾಯಿತು. ಹೀಗೆ ಬರುವವರ ಸಂಖ್ಯೆ ಸಂಜೆ ವೇಳೆಗೆ ಹೆಚ್ಚಾದ ಕಾರಣ, ವಿಂಡ್ಸರ್ ವೃತ್ತದ ಬಳಿ ಸಂಚಾರ ದಟ್ಟಣೆ ಉಂಟಾಯಿತು.

ಹಲವು ಸಚಿವರು ಬಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹೊರಬಂದು, ‘ರಾಜೀನಾಮೆ ನೀಡುತ್ತಾರಂತೆ. ನಾವು ಎಷ್ಟು ಹೇಳಿದರೂ ಕೇಳುತ್ತಿಲ್ಲ’ ಎಂದು ಹೇಳಿಕೆ ನೀಡಿದರು. ಒಬ್ಬೊಬ್ಬ ಸಚಿವರೂ ಇಂತಹ ಮಾತು ಹೇಳುತ್ತಿದ್ದಂತೆ ಸಿದ್ದರಾಮಯ್ಯ ಅವರ ಅಭಿಮಾನಿಗಳ ದುಗುಡ ಹೆಚ್ಚಿಸಿತು.

ಸಂಜೆಯ ವೇಳೆಗೆ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ತೆರಳಿದಾಗ ಅವರ ಕಚೇರಿಯ ಸಿಬ್ಬಂದಿ, ಕಣ್ಣೀರಿಟ್ಟು ತಮ್ಮ ಅಭಿಮಾನ ತೋರಿದರು. ಜತೆಗೆ ರಾಜೀನಾಮೆ ನೀಡಬೇಡಿ ಎಂದು ಒತ್ತಾಯಿಸಿದರು. ಅದಕ್ಕೂ ಅವರು ಮೌನದಿಂದಲೇ ಪ್ರತಿಕ್ರಿಯಿಸಿದರು
ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ಇತ್ತ ಕಾವೇರಿ ನಿವಾಸದ ಬಳಿ ಅಭಿಮಾನಿಗಳು ತಮ್ಮ ಆಕ್ರೋಶ, ಅಸಮಾಧಾನ ಹೊರಹಾಕಲಾರಂಭಿಸಿದರು.

ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಕಾವೇರಿ ನಿವಾಸಕ್ಕೆ ಬರುತ್ತಿದ್ದಂತೆಯೇ, ಅಲ್ಲಿ ಸೇರಿದ್ದ ಜನರ ಆಕ್ರೋಶದ ಕಟ್ಟೆ ಒಡೆಯಿತು. ‘ಅನ್ಯಾಯ, ಅನ್ಯಾಯ. ಕಾಂಗ್ರೆಸ್ ಹೈಕಮಾಂಡ್ನಿಂದ ಅನ್ಯಾಯ’, ‘ಸಿದ್ದರಾಮಯ್ಯ ಇಳಿಸಲು ಹೈಕಮಾಂಡ್ ಯಾರು’ ಎಂದು ಘೋಷಣೆ ಕೂಗತೊಡಗಿದರು. ಅಷ್ಟರಲ್ಲೇ ಪೊಲೀಸರು, ಅವರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.

ವಿವಿಧ ಸಚಿವರ ಭೇಟಿ

ಸಚಿವರಾದ ಎಚ್.ಕೆ.ಪಾಟೀಲ, ಜಮೀರ್ ಅಹಮದ್ ಖಾನ್, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ, ಸಂತೋಷ್ ಲಾಡ್, ಶಿವರಾಜ ತಂಗಡಗಿ ಸೇರಿದಂತೆ ಹಲವು ಸಚಿವರು, ಶಾಸಕರು ಭೇಟಿ ನೀಡಿ, ಸಿದ್ದರಾಮಯ್ಯ ಅವರ ಜತೆ ಮಾತನಾಡಿದರು. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿದರು.

‘ರಾಜೀನಾಮೆ ನೀಡಲು ಆತುರ ಮಾಡಬಾರದು, ಸಮಯ ತೆಗೆದುಕೊಂಡು ನಿಧಾನವಾಗಿ ತೀರ್ಮಾನ ಮಾಡಬೇಕು’ ಎಂದು ಹಲವು ಸಚಿವರು, ಶಾಸಕರು ಧೈರ್ಯ ತುಂಬಿದರು. ಆದರೆ, ಅವರ ಮಾತುಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದ ಸಿದ್ದರಾಮಯ್ಯ ಇಡೀ ದಿನ ಮೌನಕ್ಕೆ ಶರಣಾಗಿದ್ದರು. ‘ರಾಜೀನಾಮೆ ನೀಡದಂತೆ ಸೂಚಿಸಬೇಕು. ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕು’ ಎಂದು ಹೈಕಮಾಂಡ್ ಒತ್ತಾಯಿಸಲು ಕೆಲ ಸಚಿವರು, ಶಾಸಕರು ಸಹಿ ಸಂಗ್ರಹಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ ಜಾತಿಗಣತಿ ವರದಿಯನ್ನು ಸ್ವೀಕರಿಸಲು ಸಿದ್ಧರಾಮಯ್ಯ ವಿಧಾನಸೌಧಕ್ಕೆ ಆಗಮಿಸಿದಾಗ ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಎನ್.ಚಲುವ ರಾಯಸ್ವಾಮಿ, ಶಿವರಾಜ ತಂಗಡಗಿ ಜತೆಗಿದ್ದರು. ವಾಪಸ್ ಹೊರಡುವಾಗ ವಿಧಾನಸೌಧದದ ಹೊರಗೆ ಜಮಾಯಿಸಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು. ರಾಜೀನಾಮೆ ನೀಡಬಾರದು ಎಂದು ಮತ್ತೆ ಆಗ್ರಹಿಸಿದರು. ಮುಖ್ಯಮಂತ್ರಿ ಸಚಿವಾಲಯದ ಸಿಬ್ಬಂದಿ ಕಣ್ಣುಗಳು ಒದ್ದೆಯಾದವು. ಇಷ್ಟೆಲ್ಲ ಬೆಳವಣಿಗೆ ನಡೆದರೂ ಸಿದ್ದರಾಮಯ್ಯ ಅವರದು ಮೌನವೇ ಉತ್ತರವಾಗಿತ್ತು.

ಕಚೇರಿಗಳಲ್ಲೂ ನೀರವ ಮೌನ

ವಿಧಾನಸೌಧದಲ್ಲಿ ಸಂಜೆಯವರೆಗೂ ನೀರವಮೌನ ಆವರಿಸಿತ್ತು. ಬಹುತೇಕ ಸಚಿವರು ತಮ್ಮ ಕಚೇರಿಗಳತ್ತ ಸುಳಿಯಲಿಲ್ಲ. ಅವರ ಆಪ್ತಸಹಾಯಕರ ಕಚೇರಿಗಳೂ ಬಣಗುಡುತ್ತಿದ್ದವು.

ವರ್ಗಾವಣೆಯ ಸಮಯವಾದ ಕಾರಣ ಕೆಲ ಸಚಿವರ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಗಳಲ್ಲೇ ಕುಳಿತು ವರ್ಗಾವಣೆ ಪಟ್ಟಿ ಅಂತಿಮಗೊಳಿಸಲು ಕಸರತ್ತು ನಡೆಸಿದರು. ವರ್ಗಾವಣೆ ವಿಚಾರವಾಗಿ ವಿಧಾನಸೌಧ, ವಿಕಾಸಸೌಧಕ್ಕೆ ಶಿಫಾರಸು ಪತ್ರಗಳೊಂದಿಗೆ ಬಂದಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸವಾಗದೆ ನಿರಾಸೆಯಿಂದ ಹಿಂದಿರುಗುತ್ತಿದ್ದ ದೃಶ್ಯ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.