ಬೆಂಗಳೂರು: ‘ಪ್ರಸ್ತಾವಿತ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವೇಳೆ ದಕ್ಷಿಣದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ತಗ್ಗಿಸುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ರಾಜಕೀಯ ಮುತ್ಸದ್ದಿತನಕ್ಕಿಂತ ಹೆಚ್ಚಾಗಿ, ಮುಂಬರುವ ಕೇರಳ ಮತ್ತು ತಮಿಳುನಾಡು ಚುನಾವಣೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೆಣೆದ ಚುನಾವಣಾ ತಂತ್ರದಂತೆ ಕಾಣುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಕುರಿತು ‘ಎಕ್ಸ್’ ಮಾಡಿರುವ ಸಿದ್ದರಾಮಯ್ಯ, ‘ದಕ್ಷಿಣದ ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿರುವ ಮೋದಿ ಸರ್ಕಾರ, ಈಗ ಪ್ರಾತಿನಿಧ್ಯದ ಪುನರ್ರಚನೆಯ ಮೂಲಕ ದಕ್ಷಿಣದ ಧ್ವನಿ ದುರ್ಬಲಗೊಳಿಸಲು ಯತ್ನಿಸುತ್ತಿದೆ’ ಎಂದು ದೂರಿದ್ದಾರೆ.

‘ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ಹಲ್ಲೆ. ಇಂತಹ ರಚನಾತ್ಮಕ ಬದಲಾವಣೆಯನ್ನು ಸಾರ್ವಜನಿಕ ಚರ್ಚೆ ಮತ್ತು ಸಮಾಲೋಚನೆ ಇಲ್ಲದೆ ಜಾರಿಗೊಳಿಸಬಾರದು. ಕನ್ನಡಿಗರ ಧ್ವನಿ ಅಡಗಿಸುವ ಯಾವುದೇ ಯತ್ನವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ’ ಎಂದೂ ಎಚ್ಚರಿಕೆ ನೀಡಿದ್ದಾರೆ.

‘ಸಮಸ್ಯೆ ಇರುವುದು ದಕ್ಷಿಣದ ರಾಜ್ಯಗಳ ಲೋಕಸಭಾ ಸೀಟುಗಳು ಹೆಚ್ಚಾಗುತ್ತವೆ ಎಂಬುದರಲ್ಲಲ್ಲ. ಬದಲಾಗಿ, ಸೀಟುಗಳು ಹೇಗೆ ಹೆಚ್ಚಾಗುತ್ತವೆ ಮತ್ತು ಇದರಿಂದ ಅಸಮಾನವಾಗಿ ಯಾರಿಗೆ ಲಾಭವಾಗುತ್ತದೆ ಎಂಬುದರಲ್ಲಿದೆ. ಪ್ರಸ್ತಾವಿತ ವಿಸ್ತರಣೆಯಡಿ, ಪ್ರತಿ ರಾಜ್ಯದಲ್ಲೂ ಸೀಟುಗಳು ಹೆಚ್ಚಾದರೂ, ಅದರ ದರ ಮತ್ತು ಪ್ರಮಾಣ ಸ್ಪಷ್ಟವಾಗಿ ಬಿಜೆಪಿ ಪ್ರಾಬಲ್ಯವಿರುವ ಉತ್ತರದ ರಾಜ್ಯಗಳಿಗೆ ಅತಿ ಹೆಚ್ಚು ಲಾಭ ತಂದುಕೊಡಲಿದೆ’ ಎಂದಿದ್ದಾರೆ.

‘ಕರ್ನಾಟಕದ ಸೀಟುಗಳು 28ರಿಂದ 42ಕ್ಕೆ (+14), ತಮಿಳುನಾಡು 39 ರಿಂದ 58-59ಕ್ಕೆ (+20), ಆಂಧ್ರಪ್ರದೇಶ 25ರಿಂದ 37-38ಕ್ಕೆ (+12-13), ತೆಲಂಗಾಣ 17 ರಿಂದ 25-26ಕ್ಕೆ (+8-9) ಮತ್ತು ಕೇರಳ 20ರಿಂದ 30ಕ್ಕೆ (+10) ಏರಿಕೆಯಾಗಲಿವೆ. ಐದು ದಕ್ಷಿಣದ ರಾಜ್ಯಗಳು ಒಟ್ಟಾಗಿ ಕೇವಲ 63ರಿಂದ 66 ಹೆಚ್ಚುವರಿ ಸೀಟುಗಳನ್ನು ಪಡೆದರೆ, ಉತ್ತರದ ಏಳು ಹಿಂದಿ-ಭಾಷಿಕ ರಾಜ್ಯಗಳು 128ರಿಂದ 131 ಸೀಟುಗಳನ್ನು ಪಡೆಯುತ್ತವೆ’ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-51-619348844

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.