ಸಿಂದಗಿ: ನಗರದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸರ್ಕಾರ ನೂತನ ವಾಹನ ನೀಡಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಲಯದ ಆವರಣದಲ್ಲಿ ಬುಧವಾರ ಶಾಸಕ ಅಶೊಕ ಮನಗೂಳಿ ಅವರು ಕುಂಬಳಕಾಯಿ ಒಡೆದು ವಾಹನಕ್ಕೆ ಪೂಜೆ ಸಲ್ಲಿಸಿದರು.

ಶಾಸಕ ಅಶೋಕ ಮನಗೂಳಿ ಮಾತನಾಡಿ, ಹಲವಾರು ವರ್ಷಗಳಿಂದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಒಂದು ಸರ್ಕಾರ ವಾಹನ ಇರಲಿಲ್ಲ. ವಾಹನ ಖರೀದಿಸಲು ಹಲವು ಅಡಚಣೆಗಳು ಇದ್ದಾಗ್ಯೂ ಮೇಲಧಿಕಾರಿಗಳ ಗಮನಕ್ಕೆ ತಂದು ಸುಗಮ ಆಡಳಿತ ಹಿತದೃಷ್ಠಿಯಿಂದ ತುರ್ತಾಗಿ ವಾಹನ ದೊರಕುವಂತೆ ಕ್ರಮ ಜರುಗಿಸಿದ್ದಾಗಿ ತಿಳಿಸಿದರು.

ದಶಕಗಳಿಂದ ನಮ್ಮ ಕಾರ್ಯಾಲಯಕ್ಕೆ ಸರ್ಕಾರಿ ವಾಹನವಿಲ್ಲದ ಕಾರಣ ಬಾಡಿಗೆ ವಾಹನ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿತ್ತು. ಆದರೆ, ಈಗ ಶಾಸಕರು ಮುತವರ್ಜಿ ವಹಿಸಿ ಸರ್ಕಾರಿ ವಾಹನ ಸಿಗುವಂತೆ ಮಾಡಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಇಒ ರಾಮು ಜಿ.ಅಗ್ನಿ ಶಾಸಕರಿಗೆ ಅಭಿನಂದಿಸಿದರು.

ಪುರಸಭೆ ಮಾಜಿ ಉಪಾಧ್ಯಕ್ಷ ಸಂದೀಪ ಚೌರ, ಪಂಚಾಯತ ರಾಜ್ ಸಹಾಯಕ ನಿರ್ದೇಶಕ ಎ.ಎ.ದುರ್ಗದ, ಅಕ್ಷರದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಅರವಿಂದ ಡೋಣೂರ, ಕಾರ್ಯಾಲಯದ ವ್ಯವಸ್ಥಾಪಕಿ ಎ.ಎಚ್.ಯಾಳಗಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-26-1663801567

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.