ಸಿಂಧನೂರು: ‘ಬೀದಿಬದಿ ವ್ಯಾಪಾರಸ್ಥರಿಗೆ ಜಾಗದ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಬೀದಿಬದಿ ವ್ಯಾಪಾರಸ್ಥರ ಹೋರಾಟ ಸಮಿತಿಯಿಂದ ಕಳೆದ 26 ದಿನಗಳಿಂದ ಸ್ಥಳೀಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹಿಂಪಡೆಯಲಾಗುವುದು’ ಎಂದು ಸಮಿತಿಯ ಸಂಚಾಲಕ ಹಾಗೂ ಸಿಪಿಐಎಂಎಲ್ ಮಾಸ್ಲೈನ್ ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಚ್.ಪೂಜಾರ್ ತಿಳಿಸಿದರು.

ಶುಕ್ರವಾರ ಧರಣಿ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮೇ5 ರಂದು ಬೀದಿಬದಿ ವ್ಯಾಪಾರಿಗಳ ಹೋರಾಟ ಸಮಿತಿಯ ನಿಯೋಗ ಶಾಸಕ ಹಂಪನಗೌಡ ಬಾದರ್ಲಿಯವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪಾಳು ಬಿದ್ದಿರುವ ತೋಟಗಾರಿಕೆ ಇಲಾಖೆಯ ಜಾಗದ ಕುರಿತು ಚರ್ಚಿಸಲಾಯಿತು. ಮುಖ್ಯವಾಗಿ ಗಂಗಾವತಿ ರಸ್ತೆಯ ಬಲಭಾಗದ 15 ಮೀಟರ್ ರಸ್ತೆ ಹಾಗೂ ಪುಟ್ಫಾತ್ ಜಾಗ ಬಿಟ್ಟು ಇನ್ನೂ 25 ಫೀಟ್ ಜಾಗ ಉಳಿಯುತ್ತದೆ. ಎಡ ಭಾಗದಲ್ಲಿ 40 ಫೀಟ್ ಅಂತರದಲ್ಲಿ ಕಟ್ಟಡಗಳಿವೆ. ಆದರೂ ವಾಹನಗಳು ತೊಂದರೆ ಇಲ್ಲದೆ ಓಡಾಡುತ್ತಿವೆ. ಬಲ ಭಾಗದಲ್ಲಿ 10 ಫೀಟ್ ಜಾಗ ಕೊಟ್ಟರೆ ಇನ್ನೂ 60 ಫೀಟ್ ರಸ್ತೆಗೆ ಉಳಿಯುತ್ತದೆ. ಸಿಂಧನೂರಿನಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಯೋಜನೆ ಇರುವುದರಿಂದ ಮುಂದಿನ ದಿನಗಳಲ್ಲಿ ನಗರದಲ್ಲಿ ವಾಹನಗಳ ಓಡಾಟ ಕಡಿಮೆ ಆಗುತ್ತದೆ. ಹೀಗಾಗಿ ತೋಟಗಾರಿಕೆ ಇಲಾಖೆಯ ಕಂಪೌಂಡ್ ಪಕ್ಕದಲ್ಲಿ 10*10 ಜಾಗವನ್ನು ತಿಂಗಳ ಬಾಡಿಗೆ ನಿಗದಿ ಮಾಡಿ ಬೀದಿಬದಿ ವ್ಯಾಪಾರಿಗಳಿಗೆ ಕೊಡಬೇಕು ಎಂದು ಮನವಿ ಮಾಡಲಾಗಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದ ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಅವರಿಂದ ಮಾಹಿತಿ ಪಡೆದುಕೊಂಡು, ಆದಷ್ಟು ಬೇಗ ಜಾಗವನ್ನು ತಾತ್ಕಾಲಿಕವಾಗಿ ಬಾಡಿಗೆ ಕೊಡುವ ಆದೇಶ ಮಾಡುವ ಭರವಸೆ ನೀಡಿದರು. ತೋಟಗಾರಿಕೆ ಇಲಾಖೆಯವರು ತಮ್ಮ ಇಲಾಖೆಯ ಕುರಿತು ಕಾನೂನು ಸಲಹೆ ಪಡೆದು ಮುಂದಿನ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು. ಸಾಲಬಾಧೆಯಿಂದ 3 ಜನ ಬೀದಿ ವ್ಯಾಪಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಸ್ತವ ಸ್ಥಿತಿಯನ್ನು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಮನವರಿಕೆ ಮಾಡಲಾಗಿದೆ. ಮುಖ್ಯಮಂತ್ರಿಗಳು ನಮ್ಮ ಎಲ್ಲ ಬೇಡಿಕೆಗಳನ್ನು ಪರಿಹರಿಸಲು ಒಪ್ಪಿಕೊಂಡು ಸ್ಪಂದಿಸಿದ್ದಾರೆ. ಹೀಗಾಗಿ ತಾತ್ಕಾಲಿಕವಾಗಿ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಗುವುದು. ಮುಂದಿನ 15 ದಿನಗಳೊಳಗೆ ಬೀದಿಬದಿ ವ್ಯಾಪಾರಸ್ಥರಿಗೆ ಜಾಗದ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ತಿಳಿಸಿದರು.

ಸಂಚಾಲಕರಾದ ಚಂದ್ರಶೇಖರ ಗೊರಬಾಳ, ಟಿ.ಹುಸೇನಸಾಬ್, ಬಸವರಾಜ ಬಾದರ್ಲಿ, ಮುಖಂಡರಾದ ಸೈಯ್ಯದ್ ಹಾರೂನ್ಪಾಷಾ ಜಾಗೀರದಾರ್, ರಮೇಶ ಪಾಟೀಲ ಭೇರಿಗಿ, ಬಿ.ಎನ್.ಯರದಿಹಾಳ, ಖಾಸಿಂಸಾಬ್ ಕಾರ್ಪೇಂಟರ್, ಅಸ್ಲಾಂಪಾಷಾ, ರಹೀಮ್ಸಾಬ್, ಜಾಬೀರ್ಪಾಷಾ, ರಸೂಲ್ಸಾಬ್, ಬಸವರಾಜ, ಯಾಕೂಬ್ಸಾಬ್, ರಮೇಶ ರೇಡಿಯಂ, ರವೂಫ್, ಶ್ಯಾಮೀದ್, ಶೇಖ್ಸಾಬ್, ಮೌಲಾಸಾಬ್, ಹಾಜೀಮ್ ಸೇರಿದಂತೆ ಅನೇಕರು ಭಾಗವಹಿಸಿ ದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-32-68628206

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.