ಶಿರಸಿ: ‘ಎರಡನೇ ಮತ್ತು ಮೂರನೇ ದರ್ಜೆಯ ನಗರಗಳಲ್ಲಿ ಸುಸಜ್ಜಿತ ಖಾಸಗಿ ಆಸ್ಪತ್ರೆಗಳನ್ನು ನಿರ್ಮಿಸಲು ಮುಂದೆ ಬರುವ ಉದ್ಯಮಿಗಳು ಹಾಗೂ ವೈದ್ಯರಿಗೆ ಕನಿಷ್ಠ 10 ವರ್ಷಗಳ ಕಾಲ ತೆರಿಗೆಯಿಂದ ಮುಕ್ತಿ ನೀಡಲು ಸರ್ಕಾರಗಳು ನೀತಿ ರೂಪಿಸಬೇಕು’ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ ಪ್ರತಿಪಾದಿಸಿದರು.

ನಗರದ ಹೊಸಪೇಟೆ ರಸ್ತೆಯಲ್ಲಿ ಭಾನುವಾರ ವೆಲ್ನೆಸ್ಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೃದ್ರೋಗ ವಿಭಾಗ ಹಾಗೂ ಕ್ಯಾತ್ಲ್ಯಾಬ್ ಉದ್ಘಾಟಿಸಿ ಮಾತನಾಡಿ,‘ಆಧುನಿಕ ಜೀವನಶೈಲಿಯಿಂದಾಗಿ ಇಂದು ಶೇ. 65ರಷ್ಟು ಸಾವುಗಳು ಸಂಭವಿಸುತ್ತಿವೆ. ವಿಶೇಷವಾಗಿ ಶೇ. 35ರಷ್ಟು ಮಂದಿ ಪಾರ್ಶ್ವವಾಯು ಹಾಗೂ ಹೃದಯಾ ಘಾತಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಕ್ಕರೆ ಮಾತ್ರ ಜೀವ ಉಳಿಸಲು ಸಾಧ್ಯ. ಆದ್ದರಿಂದ ಗ್ರಾಮೀಣ ಹಾಗೂ ಅರೆ ಪಟ್ಟಣ ಪ್ರದೇಶಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳ ಅಗತ್ಯವಿದ್ದು, ಸರ್ಕಾರ ಇಂತಹ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ‘ಉತ್ತರ ಕನ್ನಡ ಜಿಲ್ಲೆಯಂತಹ ಭೌಗೋಳಿಕವಾಗಿ ವಿಸ್ತಾರವಾದ ಪ್ರದೇಶದ ವೈದ್ಯಕೀಯ ಕೊರತೆ ನೀಗಿಸಲು ಕನಿಷ್ಠ ಎರಡ್ಮೂರು ವೈದ್ಯಕೀಯ ಕಾಲೇಜುಗಳ ಅವಶ್ಯಕತೆ ಯಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈದ್ಯಕೀಯ ಕಾಲೇಜು ಸ್ಥಾಪನೆಯ ಮಾರ್ಗಸೂಚಿಗಳನ್ನು ಸರಳೀಕರಣಗೊಳಿಸಬೇಕು. ಕಠಿಣ ನಿಯಮಗಳನ್ನು ಸಡಿಲಗೊಳಿಸಿದರೆ ಮಾತ್ರ ಜನಸಾಮಾನ್ಯರ ಮತ್ತು ರೈತರ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆದು ಗ್ರಾಮೀಣ ಸೇವೆಯಲ್ಲಿ ತೊಡಗಲು ಸಾಧ್ಯವಾಗುತ್ತದೆ’ ಎಂದು ಆಗ್ರಹಿಸಿದರು. ‘ಹೊರ ಜಿಲ್ಲೆಯ ದೊಡ್ಡ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆ ಈಗ ತಾಲ್ಲೂಕು ಮಟ್ಟದಲ್ಲಿ ಲಭ್ಯವಾಗುತ್ತಿರುವುದು ಜನಸಾಮಾ ನ್ಯರಿಗೆ ದೊಡ್ಡ ವರದಾನ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಾರ್ಯಕ್ರಮ ಉದ್ಘಾಟಿಸಿದರು. ಹೊರ ರೋಗಿ, ತುರ್ತು ಚಿಕಿತ್ಸಾ, ಔಷಧ ವಿಭಾಗವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು. ಮಂಗಳೂರಿನ ಸಜೀಫ್ ಭಾರತ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಮುಸ್ತಫ.ಎಸ್.ಎಂ, ಬೆಂಗಳೂರಿನ ಎಕನಾಮಿಕ್ ಅಫೆನ್ಸಸ್ ಸಿಐಟಿಯ ಡಿಐಜಿ ಡಾ.ಭೀಮಶಂಕರ ಗುಳೇದ, ಎಚ್ಕೆಎಚ್ ಸಂಸ್ಥೆಗಳ ನಿರ್ದೇಶಕ ಹಾಜಿ ಕೆ.ಅಬ್ದುಲ್ ಕರೀಂ ಮತ್ತಿತರರು ಉಪಸ್ಥಿತರಿದ್ದರು. ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು. ಡಾ.ಮಧುಕೇಶ್ವರ.ಜಿ.ವಿ ಸ್ವಾಗತಿಸಿದರು..

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-20-2058192148

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.