ಸೋಲಾಪುರ: ನರೇಂದ್ರ ಕಾಳೆ ಮಿತ್ರ ಪರಿವಾರದ ವತಿಯಿಂದ ಆಯೋಜಿಸಲಾದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 10 ಜೋಡಿಗಳು ಸತಿ–ಪತಿ ಆದರು.

ಪುಣ್ಯಶ್ಲೋಕ ರಾಜಮಾತಾ ಅಹಿಲ್ಯಾದೇವಿ ಹೊಳ್ಕರ್ ಅವರ 301ನೇ ಜಯಂತಿ ನಿಮಿತ್ತ ಸೋಲಾಪುರ ಮಹಾನಗರ ಪಾಲಿಕೆಯ ಸಭಾಗೃಹ ನಾಯಕ ನರೇಂದ್ರ ಕಾಳೆ ಹಾಗೂ ಮಿತ್ರ ಪರಿವಾರದ ವತಿಯಿಂದ ಗುರುವಾರ ಸಾಯಂಕಾಲ ಗೋಧೂಳಿ ಮುಹೂರ್ತದಲ್ಲಿ ಟಾಕಳೀಕರ ಮಂಗಳ ಕಾರ್ಯಾಲಯದಲ್ಲಿ ಈ ವಿವಾಹ ಸಮಾರಂಭ ನಡೆಯಿತು. ಮದುವೆಯ ಸಂದರ್ಭದಲ್ಲಿ ತುಂತುರು ಮಳೆ ಸುರಿಯಿತು.

ಗುರುವಾರ ಬೆಳಿಗ್ಗೆ ವಧು-ವರರ ದೇವಾಕ್ಷತೆ ಕಾರ್ಯಕ್ರಮ ನಡೆಯಿತು. ಈ ವೇಳೆ ವಧು-ವರರಿಗೆ ಸಫಾರಿ ಉಡುಪು, ಶಾಲು, ಮಣಿ ಮಂಗಳಸೂತ್ರ, ಜೋಡವೆ, ಚಪ್ಪಲಿ, ಬೂಟುಗಳು, ಗೃಹೋಪಯೋಗಿ ಪಾತ್ರೆಗಳು ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು. ಕಿಟ್ ವಿತರಣೆ ಬಳಿಕ ಎಲ್ಲಾ ವಿವಾಹ ವಿಧಿವಿಧಾನಗಳು ನೆರವೇರಿಸಲಾಯಿತು. ನಂತರ ಎಲ್ಲಾ ಅತಿಥಿಗಳು ಭೋಜನ ಸವಿದರು.

ಸಂಜೆ ನಾಗರಿಕರ ಸಮ್ಮುಖದಲ್ಲಿ ಗೋಧೂಳಿ ಮುಹೂರ್ತದಲ್ಲಿ ಅಕ್ಷತೆ ಸಮಾರಂಭ ನೆರವೇರಿತು. ಈ ವೇಳೆ ಪಾಲಕ ಸಚಿವ ಜಯಕುಮಾರ ಗೋರೆ ಮಾತನಾಡಿ, ನರೇಂದ್ರ ಕಾಳೆ ಅವರು ನಿಜವಾದ ಸಾಮಾಜಿಕ ಕಾರ್ಯಕರ್ತರು. ಜನ್ಮದಿನದಂದು ಅನಾವಶ್ಯಕ ವೆಚ್ಚ ಮಾಡುವ ಬದಲು ಅವರು ಆಯೋಜಿಸಿರುವ ಸಾಮೂಹಿಕ ವಿವಾಹ ಸಮಾರಂಭ ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ನರೇಂದ್ರ ಕಾಳೆ ಅವರನ್ನು ಸಚಿವ ಜಯಕುಮಾರ್ ಗೋರೆ ಸನ್ಮಾನಿಸಿದರು. ಶಾಸಕ ಸಚಿನ ಕಲ್ಯಾಣಶೆಟ್ಟಿ, ಶಾಸಕ ದೇವೇಂದ್ರ ಕೊಠೆ ಮಾತನಾಡಿದರು. ನರೇಂದ್ರ ಕಾಳೆ ಪ್ರಾಸ್ತಾವಿಕ ಭಾಷಣ ಮಾಡಿದರು. ಮಂಗೇಶ್ ಲಾಮಕಾನೆ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಪಾಲಕ ಸಚಿವ ಜಯಕುಮಾರ ಗೋರೆ, ಶಾಸಕ ವಿಜಯಕುಮಾರ ದೇಶಮುಖ, ಶಾಸಕರಾದ ಸಚಿನ ಕಲ್ಯಾಣಶೆಟ್ಟಿ, ದೇವೇಂದ್ರ ಕೊಠೆ, ಮಾಜಿ ಶಾಸಕ ದಿಲೀಪ ಮಾನೆ, ಸೋಮಲಿಂಗ ಘುಳಿ ಮಹಾರಾಜ, ಸಿದ್ಧಲಿಂಗ ಮಹಾರಾಜ, ಉಪಮಹಾಪೌರ ಜ್ಞಾನೇಶ್ವರಿ ದೇವಕರ್, ಮನೋರಮಾ ಪರಿವಾರದ ಮುಖ್ಯಸ್ಥ ಶ್ರೀಕಾಂತ ಮೋರೆ, ಮಹಾನಗರ ಪಾಲಿಕೆಯ ಆಯುಕ್ತ ಡಾ. ಸಚಿನ ಓಂಬಾಸೆ, ಉಪ ಆಯುಕ್ತ ವೀಣಾ ಪವಾರ, ಸ್ಥಾಯಿ ಸಮಿತಿಯ ಅಧ್ಯಕ್ಷೆ ರಂಜಿತಾ ಚಾಕೋತೆ, ಬಿಜೆಪಿ ನಗರಾಧ್ಯಕ್ಷೆ ರೋಹಿಣಿ ತಡವಳ್ಕರ್, ಮಾಜಿ ಮಹಾಪೌರ ಶ್ರೀಕಾಂಚನಾ ಯನ್ನಂ, ಉದ್ಯೋಗವರ್ಧಿನಿ ಸಂಸ್ಥಾಪಕಿ ಚಂದ್ರಿಕಾ ಚವ್ಹಾಣ, ಶಿವಸೇನೆ ಜಿಲ್ಲಾ ಮುಖ್ಯಸ್ಥ ಅಮರ ಪಾಟೀಲ, ಕಾಂಗ್ರೆಸ್ ನಗರಾಧ್ಯಕ್ಷ ಚೇತನ ನರೋಟೆ, ಗೋವಿಂದ ಕಾಳೆ, ಸುಮನ್ ಕಾಳೆ, ಕಾರ್ಯಕ್ರಮದ ಆಯೋಜಕ ಹಾಗೂ ಸಭಾಗೃಹ ನಾಯಕ ನರೇಂದ್ರ ಕಾಳೆ, ರಜನಿ |ಕಾಳೆ ಸೇರಿದಂತೆ ಅನೇಕ ಗಣ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-26-798605352

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.