lನನಗೆ ವಿಪರೀತ ಸಿಟ್ಟು ಬರುತ್ತದೆ. ಸಣ್ಣ ಸಣ್ಣ ಕಾರಣಕ್ಕೂ ಸಿಡುಕುತ್ತೀನಿ. ಆಫೀಸ್ನಲ್ಲಿಯೂ ಸಿಡುಕಿ ದ್ವೇಷ ಕಟ್ಟಿಕೊಂಡಿದ್ದೀನಿ. ಮನೆಯಲ್ಲಿಯೂ ನೆಮ್ಮದಿ ಇಲ್ಲದಂತಾಗಿದೆ. ಹೇಳಿಕೊಳ್ಳಲು ಸ್ನೇಹಿತರು ಯಾರೂ ಇಲ್ಲ. ಕೋಪ ನಿಯಂತ್ರಿಸುವುದು ಹೇಗೆ?

ಹೆಸರು, ಊರು ತಿಳಿಸಿಲ್ಲ.

ಸಿಟ್ಟಿನಿಂದ ಸಂಬಂಧಗಳು ಹಾಳಾಗುತ್ತಿರುವ ನೋವನ್ನು ಅನುಭವಿಸುತ್ತಾ ಅದನ್ನು ದ್ವೇಷಿಸುತ್ತಿದ್ದೀರಲ್ಲವೇ? ಸಿಟ್ಟು ನಿಮ್ಮ ವ್ಯಕ್ತಿತ್ವದ ಒಂದು ಭಾಗ. ಅದು ನೋವನ್ನು ಕೊಡುತ್ತಿದೆ ಎನ್ನುವುದು ನಿಜವಾದರೂ ನಮ್ಮ ವ್ಯಕ್ತಿತ್ವದ ಅಂಶಗಳನ್ನೇ ನಾವು ದ್ವೇಷಿಸಿದರೆ ಅಂತರಂಗದಲ್ಲಿ ನಮ್ಮ ಕುರಿತೇ ಕೀಳು ಭಾವನೆಗಳನ್ನು ಮೂಡಿಸಿಕೊಂಡು ನೋವನ್ನು ಹೆಚ್ಚು ಮಾಡಿಕೊಳ್ಳುತ್ತೇವಲ್ಲವೇ? ಬದಲಾಗಿ ಸಿಟ್ಟಿನ ಬಗೆಗೆ ಸಹಾನುಭೂತಿಯನ್ನು ಮೂಡಿಸಿಕೊಂಡು ಅದರ ಆಳಕ್ಕೆ ಇಳಿದು ಅರ್ಥಮಾಡಿಕೊಂಡು ಪಳಗಿಸಬಹುದಲ್ಲವೇ? ಅದನ್ನು ಮಾಡುವುದಾದರೂ ಹೇಗೆ?

ಸುಮ್ಮನೆ ಏಕಾಂತದಲ್ಲಿ ಕಣ್ಣುಮುಚ್ಚಿ ದೇಹವನ್ನು ಸಡಿಲಬಿಟ್ಟು ಕುಳಿತು ನೀವು ಸಿಟ್ಟಾದ ಒಂದು ಘಟನೆಯನ್ನು ನೆನಪಿಸಿಕೊಳ್ಳಿ. ಸಾಧ್ಯವಾಗುವಷ್ಟು ಆ ಘಟನೆಯನ್ನು ಈಗಲೇ ಅನುಭವಿಸುತ್ತಿರುವಂತೆ ಕಲ್ಪಿಸಿಕೊಳ್ಳಿ. ಆಗ ನಿಮ್ಮ ದೇಹದ ಯಾವ ಭಾಗಗಳು ಬಿಗಿಯಾಗಿರುತ್ತವೆ ಅಥವಾ ತೀವ್ರವಾಗಿ ಪ್ರತಿಕ್ರಿಯೆ ತೋರಿಸುತ್ತಿರುತ್ತದೆ ಎನ್ನುವುದನ್ನು ಗಮನಿಸಿ. ದೇಹದ ಆ ಭಾಗಗಳನ್ನು ಗಮನಿಸುತ್ತಲೇ ದೀರ್ಘವಾಗಿ ಉಸಿರಾಡುತ್ತಿರಿ. ನಿಮ್ಮ ಸಿಟ್ಟು ಏನೋ ಸಂದೇಶವನ್ನು ಕೊಡುತ್ತಿರುತ್ತದೆ ಎನ್ನುವುದನ್ನು ಗಮನಿಸಿ. ಸಿಟ್ಟು ನಿಮ್ಮ ಯಾವುದೋ ಮಾನಸಿಕ ಕಹಿ ನೋವು ಹಿಂಜರಿಕೆ ಕೀಳರಿಮೆ ಮುಂತಾದವುಗಳ ಹೊರರೂಪವಾಗಿರುತ್ತದೆ. ಸಿಟ್ಟು ಹೀಗೇನನ್ನೋ ಹೇಳುತ್ತಿರ ಬಹುದು. ‘ಬೇರೆಯವರು ನನ್ನನ್ನು ಗೌರವಿಸುತ್ತಿಲ್ಲ, ನನ್ನನ್ನು ಕಡೆಗಣಿಸುತ್ತಿದ್ದಾರೆ, ಅವರ ಮಾತು ವರ್ತನೆಗಳ ಮೂಲಕ ನನ್ನ ವ್ಯಕ್ತಿತ್ವದ ಮೇಲೆ ಆಕ್ರಮಣ ಮಾಡುತ್ತಿದ್ದಾರೆ, ನನ್ನನ್ನು ಅವಮಾನಿಸುತ್ತಿದ್ದಾರೆ’ – ಮುಂತಾಗಿ.

ನಿಮ್ಮ ಈ ಎಲ್ಲಾ ಅನಿಸಿಕೆಗಳ ಹೊರರೂಪವೇ ಸಿಟ್ಟು. ಅಂದರೆ ಸಿಟ್ಟಿನ ಮೂಲಕ ನಿಮ್ಮ ವ್ಯಕ್ತಿತ್ವವನ್ನು ರಕ್ಷಣೆ ಮಾಡಿಕೊಳ್ಳಲು ನೀವು ಪ್ರಯತ್ತಿಸುತ್ತ ಇರುತ್ತೀರಲ್ಲವೇ? ಹಾಗಾಗಿ ಸಿಟ್ಟು ಒಂದು ರೀತಿಯಲ್ಲಿ ನಿಮಗೆ ಸಹಾಯ ಮಾಡುತ್ತಿರುತ್ತದೆ. ಆದರೆ ಇದು ನಿಮ್ಮ ಸ್ನೇಹಸಂಬಂಧಗಳನ್ನು ಹಾಳುಮಾಡುತ್ತಾ ಮಾನಸಿಕ ನೋವನ್ನು ಕೊಡುತ್ತಿದೆ. ಹೀಗೆ ಮಾನಸಿಕ ನೋವು ಅವಮಾನಗಳನ್ನು ಸಿಟ್ಟಿನ ರೂಪದಲ್ಲಿ ಹೊರಹಾಕುವುದನ್ನು ಬಾಲ್ಯದಲ್ಲಿಯೇ ಕಲಿತಿರುತ್ತೀರಿ ಅಥವಾ ಬಾಲ್ಯದಲ್ಲಿ ಅನುಭವಿಸಿದ ಹಿಂಸೆ ನೋವು ಅವಮಾನಗಳು ಆಗಿನ ನಿಮ್ಮ ಪರಿಸ್ಥಿತಿಗಳಿಂದಾಗಿ ಸಿಟ್ಟಾಗಿ ಬದಲಾಗುವುದು ಸಾಧ್ಯವಿರಲಿಲ್ಲ. ಆಗ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳುವುದು ಸಾಧ್ಯವಾಗಿರಲಿಲ್ಲ. ಈ ಕಹಿ ನಿಮ್ಮ ದೇಹ ಮನಸ್ಸುಗಳಲ್ಲಿ ಆಳವಾಗಿ ದಾಖಲಾಗಿರುತ್ತದೆ. ಹಾಗಾಗಿ ಈಗ ಅಪಾಯವೇ ಇಲ್ಲದಿದ್ದರೂ ನಿಮ್ಮ ಮನಸ್ಸು ಅನಗತ್ಯವಾಗಿ ತೀವ್ರವಾಗಿ ಪ್ರತಿಕ್ರಿಯೆ ತೋರಿಸುತ್ತಿರುತ್ತದೆ. ಮುಂದಿನ ಹಂತದಲ್ಲಿ ಸಿಟ್ಟುಮಾಡದೆ ನನ್ನನ್ನು ರಕ್ಷಿಸಿಕೊಳ್ಳುವುದು ಹೇಗೆ? ನನ್ನ ಅನಿಸಿಕೆಗಳನ್ನು ನೇರವಾಗಿ ಸರಳವಾಗಿ ಹೇಳುವುದು ಹೇಗೆ? ಎಂದು ಯೋಚಿಸಿ.

ಉದಾಹರಣೆಗೆ ನಿಮ್ಮ ಮಾತುಗಳಿಂದ ನನಗೆ ನೋವಾಗುತ್ತಿದೆ, ಅವಮಾನವಾದಂತೆ ಅನ್ನಿಸುತ್ತಿದೆ ಎಂದು ಹೇಳಬಹುದಲ್ಲವೇ? ನಿಮ್ಮ ಅನಿಸಿಕೆಗಳೇ ಸರಿಯೆಂದು ವಾಗ್ವಾದಕ್ಕೆ ಇಳಿಯಬೇಡಿ. ಸಿಟ್ಟು ಬರುತ್ತಿದೆ ಎನ್ನುವುದು ಗಮನಕ್ಕೆ ಬಂದ ಕೂಡಲೇ ದೀರ್ಘವಾಗಿ ಉಸಿರಾಡುತ್ತಾ ದೇಹವನ್ನು ಸಡಿಲಬಿಟ್ಟು ಸಿಟ್ಟನ್ನು ತೋರಿಸದೆ ಗೌರವ ಘನತೆಗಳಿಂದ ಹೇಗೆ ಪ್ರತಿಕ್ರಿಯೆ ತೊರಿಸಬಹುದು ಎಂದು ಯೋಚಿಸಿ. ಕೆಲವೊಮ್ಮೆ ನಿಮ್ಮ ಸಿಟ್ಟು ಹಿಡಿತ ಮೀರಿ ಹೊರಬಂದರೆ ಸಮಾಧಾನವಾದ ನಂತರ ಪ್ರಾಮಾಣಿಕವಾಗಿ ಅವರಲ್ಲಿ ಕ್ಷಮೆ ಕೇಳಿ. ಈ ಅಭ್ಯಾಸವನ್ನು ಆಗಾಗ ಮಾಡುತ್ತಲೇ ಇದ್ದರೆ ನಿಧಾನವಾಗಿ ನಿಮ್ಮ ದೇಹ ಮನಸ್ಸುಗಳು ಹಗುರಾಗಿ ಸಿಟ್ಟು ಕಡಿಮೆಯಾಗುತ್ತದೆ. ಜೊತೆಗೆ ಯಾರಾದರೂ ನಿಮಗೆ ನೋವುಂಟು ಮಾಡಿದರೆ ಅದನ್ನು ಸ್ಪಷ್ಟವಾಗಿ ಆದರೆ ಗೌರವದಿಂದ ಹೇಳುವುದನ್ನು ಕಲಿಯಬಹುದು. ನಮ್ಮೆಲ್ಲರಲ್ಲಿ ನಾವೇ ಇಷ್ಟಪಡದ ಹಲವಾರು ಅಂಶಗಳಿರುತ್ತವೆ. ಅವುಗಳನ್ನು ದ್ವೇಷಿಸಿದೆ ಸಹಾನುಭೂತಿಯಿಂದ ಸಮಾಧಾನಪಡಿಸಬೇಕು. ಆಗ ನಮ್ಮೊಳಗಿರುವ ಹಲವಾರು ಉತ್ತಮ ಅಂಶಗಳು ಹೊರಬರುತ್ತವೆ. ಹೀಗೆ ನಿಮ್ಮೊಳಗಿರುವ ಪ್ರಾಮಾಣಿಕತೆ ಸರಳತೆ ಕಾಳಜಿ ಸ್ನೇಹಪರತೆ ಮುಂತಾದವುಗಳೆಲ್ಲವನ್ನೂ ನಿಧಾನವಾಗಿ ಹೊರತನ್ನಿ.

ಏನಾದ್ರೂ ಕೇಳ್ಬೋದು:ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.