ದಾವಣಗೆರೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಷ್ಟು ಪ್ರವೀಣ, ಸೋಮಾರಿ ನಾನಲ್ಲ. ತಕ್ಕಮಟ್ಟಿಗೆ ಬುದ್ಧಿ ಇದ್ದು ಕೆಲಸವನ್ನೂ ಮಾಡಿದ್ದೇನೆ. ಅನುಮಾನವಿದ್ದರೆ ಒಂದೆರಡು ಗಂಟೆ ದೆಹಲಿಯ ನನ್ನ ಕಚೇರಿಗೆ ಭೇಟಿ ನೀಡಲಿ’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದರು.

‘ಕೆಲಸವಿಲ್ಲದ ಸಚಿವ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಶನಿವಾರ ಪ್ರತಿಕ್ರಿಯೆ ನೀಡಿದ ಸೋಮಣ್ಣ, ರಾಜ್ಯಕ್ಕೆ ತಂದಿರುವ ಅನುದಾನ, ಮಾಡಿದ ಕೆಲಸಗಳ ಬಗ್ಗೆ ವಿವರಣೆ ನೀಡಿದರು. ‘ಕುಕ್ಕೆಸುಬ್ರಹ್ಮಣ್ಯ ಸಮೀಪದ ರೈಲ್ವೆ ಹಳಿಯ ಸುರಂಗವನ್ನಾದರೂ ಒಮ್ಮೆ ವೀಕ್ಷಿಸಿ’ ಎಂದು ಸವಾಲು ಹಾಕಿದರು.

‘ಸಿದ್ದರಾಮಯ್ಯ ಹಾಗೂ ನಾನು ಒಂದೇ ಗರಡಿಯಲ್ಲಿ ಬೆಳೆದವರು. ಒಟ್ಟಿಗೆ ಸಚಿವರಾಗಿ ಕೆಲಸ ಮಾಡಿದ್ದೇವೆ. ಅವರ ಇತ್ತೀಚಿನ ನಡವಳಿಕೆಗಳು ಬೇಸರ ತರಿಸುತ್ತಿವೆ. ದೇಶದಲ್ಲಿ ಆಗಿರುವ ತಾಂತ್ರಿಕ ಬದಲಾವಣೆಗಳು ಅವರಿಗೆ ಅರ್ಥವಾಗಿಲ್ಲ. ಈಗ ಅವರು ಕೇವಲ ನಿದ್ದೆ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ರೈಲ್ವೆ ಸಚಿವನಾದ ಬಳಿಕ ದಕ್ಷಿಣ ಭಾರತದಲ್ಲಿ 18 ಹೊಸ ರೈಲು ಸಂಚಾರ ಆರಂಭಿಸಿವೆ. 62 ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ವ್ಯವಸ್ಥೆ ಮಾಡಿದ್ದೇನೆ. 24 ರೈಲುಗಳ ಸಂಚಾರ ಮತ್ತೊಂದು ಸ್ಥಳಕ್ಕೆ ವಿಸ್ತರಣೆಯಾಗಿವೆ. ಭದ್ರಾವತಿ–ಚಿಕ್ಕಜಾಜೂರು ರೈಲ್ವೆ ಮಾರ್ಗಕ್ಕೆ ಸಮೀಕ್ಷೆ ನಡೆಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದೆ. ಚಿಕ್ಕಜಾಜೂರು–ಬಳ್ಳಾರಿ ಜೋಡಿರೈಲು ಮಾರ್ಗ ನಿರ್ಮಾಣ ಶೀಘ್ರ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು.

‘ನನೆಗುದಿಗೆ ಬಿದ್ದಿದ್ದ 11 ರೈಲ್ವೆ ಯೋಜನೆಗಳಿಗೆ ₹ 58,000 ಕೋಟಿ ಅನುದಾನ ನೀಡಲಾಗಿದೆ. ರಾಜ್ಯದ 61 ರೈಲು ನಿಲ್ದಾಣಗಳನ್ನು ₹ 1,900 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ. ರಾಜ್ಯದಲ್ಲಿ 11 ವರ್ಷದಲ್ಲಿ 1,657 ಕಿ.ಮೀ ರೈಲು ಮಾರ್ಗ ನಿರ್ಮಾಣ ಮಾಡಲಾಗಿದೆ. ರೈಲು ಮಾರ್ಗಗಳ ವಿದ್ಯುದೀಕರಣ ಶೇ 97 ರಷ್ಟು ಪೂರ್ಣಗೊಂಡಿದೆ. ಇನ್ನೊಬ್ಬರ ಬಗ್ಗೆ ಟೀಕೆ ಮಾಡುವಾಗ ಹಗುರವಾಗಿ ಮಾತನಾಡಬೇಡಿ’ ಎಂದು ಎಚ್ಚರಿಕೆ ನೀಡಿದರು.

‘ಮಾರ್ಚ್ಗೆ ಚಿತ್ರದುರ್ಗಕ್ಕೆ ರೈಲು’

‘ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, 2027ರ ಮಾರ್ಚ್ ವೇಳೆಗೆ ದಾವಣಗೆರೆ–ಚಿತ್ರದುರ್ಗ ನಡುವೆ ರೈಲು ಸಂಚರಿಸಲಿದೆ’ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.

‘ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಹಳಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಚಿತ್ರದುರ್ಗ ತಾಲ್ಲೂಕಿನ ಕೆಲವೆಡೆ ಕೊಂಚ ವಿಳಂಬವಾಗುತ್ತಿದೆ. ಹಂತಹಂತವಾಗಿ ಕಾಮಗಾರಿ ಮುಗಿಸಿ ತುಮಕೂರಿನವರೆಗೆ ರೈಲು ಸಂಚರಕ್ಕೆ ಮುಕ್ತಗೊಳಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.