ಸಾಕ್ಷಿಗಳಿಗೆ ರಕ್ಷಣೆ ನೀಡಿ: ಪೀಠ ತಾಕೀತು
ಪ್ರಕರಣದ ಎಲ್ಲ ಸಾಕ್ಷಿಗಳಿಗೆ ಕೂಡಲೇ ರಕ್ಷಣೆ ನೀಡಬೇಕೆಂದು ಕರ್ನಾಟಕ ಸರ್ಕಾರಕ್ಕೆ ಪೀಠ ತಾಕೀತು ಮಾಡಿದೆ. ಸಂತ್ರಸ್ತರ ಕುಟುಂಬದ ಪರವಾಗಿ ಹಾಜರಾದ ಹಿರಿಯ ವಕೀಲರಾದ ಶೋಭಾ ಗುಪ್ತಾ, ಆನಂದ್ ಸಂಜಯ್ ಎಂ. ನುಲಿ ಮತ್ತು ಶೇಖರ್ ಜಿ ದೇವಸ, ‘ಪ್ರಕರಣದ ಹಲವಾರು ಸಾಕ್ಷಿಗಳು ನಿಗೂಢವಾಗಿ ಮೃತಪಟ್ಟಿದ್ದಾರೆ’ ಎಂದರು. ಆಗ ಪೀಠವು, ಸಾಕ್ಷಿಗಳಿಗೆ ರಕ್ಷಣೆ ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿತು.