ಬೆಂಗಳೂರು: ಶಾಸಕರ ಲಿಖಿತ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರ ಮಂಡಿಸಲು ವಿಫಲರಾದ ಸಚಿವರು, ಅಧಿಕಾರಿಗಳ ನಡೆಯ ವಿರುದ್ಧ ಅಸಮಾಧಾನಗೊಂಡ ಸಭಾಧ್ಯಕ್ಷ ಯು.ಟಿ. ಖಾದರ್, ಸಭಾತ್ಯಾಗ ಮಾಡಿದ ಪ್ರಸಂಗ ವಿಧಾನಸಭೆಯಲ್ಲಿ ಸೋಮವಾರ ನಡೆಯಿತು.

ಪ್ರಶ್ನೋತ್ತರ ಕಲಾಪದ ಬಳಿಕ ಲಿಖಿತ ರೂಪದಲ್ಲಿರುವ ಉತ್ತರಗಳನ್ನು ಮಂಡಿಸಿದ ಗೃಹ ಸಚಿವ ಜಿ. ಪರಮೇಶ್ವರ, ‘230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡಿಸಲಾಗಿದೆ’ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಸಚಿವರ ಪೈಕಿ, ಸದನದಲ್ಲಿ ಶೇ 15ರಷ್ಟು ಮಾತ್ರ ಹಾಜರಾಗಿದ್ದಾರೆ. ಕಲಾಪದಲ್ಲಿ ಯಾರೂ ಭಾಗವಹಿಸುವುದಿಲ್ಲ’ ಎಂದರು.

‘ನೀವು (ಸಭಾಧ್ಯಕ್ಷರು) ನಾಲ್ಕು ಬಾರಿ ಎಚ್ಚರಿಕೆ ನೀಡಿದ್ದೀರಿ. ಐದನೇ ಬಾರಿ ಎಚ್ಚರಿಕೆ ನೀಡಿ. ನೀವು ಹೇಳಿದರೂ ಯಾರೂ ಎಚ್ಚೆತ್ತುಕೊಂಡಿಲ್ಲ. ದೇವರ ತರಹ ಬರುತ್ತಾರೆ, ದೇವರ ತರಹವೇ ಮನೆಗೆ ಹೋಗುತ್ತಾರೆ. ಸರ್ಕಾರ ಸತ್ತು ಹೋಗಿದೆ. ತಿಥಿ ಮಾಡಿ, ಆ ಊಟಕ್ಕೆ ಹೋಗಬೇಕು’ ಎಂದು ಅಶೋಕ ಆಕ್ರೋಶದಿಂದ ಹೇಳಿದರು.

ಸಚಿವರ ಅನುಪಸ್ಥಿತಿಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸಭಾಧ್ಯಕ್ಷರು, ‘ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಹೇಳಿಕೊಳ್ಳುವುದಕ್ಕೆ ನಾವು ಸದನ ನಡೆಸುತ್ತೇವೆ. ಮೂರು ತಿಂಗಳಿಗೊಮ್ಮೆ ಶಾಸಕರು ಸಭೆ ಸೇರಬೇಕು ಎಂದು ಅಧಿವೇಶನ ನಡೆಸುತ್ತೇವೆ. ಪ್ರಶ್ನೆ ಕೇಳಿದರೆ ಉತ್ತರ ಇರುವುದಿಲ್ಲ. ಗಂಭೀರತೆಯಿಂದ ಇರಬೇಕು ಎಂದು ಹೇಳಿದ್ದೇನೆ. ಆದರೆ, ಯಾರೂ ಹಾಜರಾಗುತ್ತಿಲ್ಲ. ಈ ಬಗ್ಗೆ ಮೊನ್ನೆಯೇ ಸಚಿವರು, ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದ್ದೇನೆ’ ಎಂದರು.

‘ಸರಿಯಾದ ಸಮಯಕ್ಕೆ ಮಂತ್ರಿಗಳು ಬರುವುದಿಲ್ಲ. ನಾನು ಹಿಂದೆಯೂ ಈ ಬಗ್ಗೆ ಸೂಚನೆ ನೀಡಿದ್ದೇನೆ. ಈಗಾಗಲೇ ನಾಲ್ಕು ಬಾರಿ ಸೂಚನೆ ನೀಡಿದ್ದೇನೆ. ಐದನೇ ಬಾರಿಯೂ ಸುಧಾರಿಸದಿದ್ದರೆ ಏನು ಮಾಡುವುದು. ಸುಧಾರಣೆ ಕಾಣಲೇ ಇಲ್ಲ. ಸಚಿವರು ಹಾಗೂ ಕಾರ್ಯದರ್ಶಿಗಳು ಈ ಬಗ್ಗೆ ಸ್ಪಷ್ಟನೆ ನೀಡುವವರೆಗೆ ಸದನ ನಡೆಸುವುದಿಲ್ಲ’ ಎಂದು ಕಟು ಪದಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಭಾಧ್ಯಕ್ಷರು, ತಮ್ಮ ಪೀಠದಿಂದ ಎದ್ದು ಹೊರಹೋದರು.

ಮನವೊಲಿಸಿದ ಸಿ.ಎಂ: ಸಭಾಧ್ಯಕ್ಷರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಚಿವರಾದ ಸತೀಶ ಜಾರಕಿಹೊಳಿ, ಜಿ. ಪರಮೇಶ್ವರ, ಎಚ್.ಕೆ. ಪಾಟೀಲ ಮತ್ತಿತರರು ಚರ್ಚೆ ನಡೆಸಿದರು. ಲಿಖಿತ ಉತ್ತರ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಚರ್ಚೆ ನಡೆಸಿದರು. ಸದನವನ್ನು ಸರಿಯಾದ ರೀತಿಯಲ್ಲಿ ನಡೆಸಲು ಸಂಪೂರ್ಣ ಸಹಕಾರ ನೀಡುವುದಾಗಿ ಇದೇ ವೇಳೆ ಸಚಿವರು ಭರವಸೆ ನೀಡಿದರು.

ಮನವೊಲಿಕೆಯ ಬಳಿಕ ಮತ್ತೆ ಕಲಾಪ ಆರಂಭಿಸಿದ ಖಾದರ್, ‘ಲಿಖಿತ ಪ್ರಶ್ನೆಗಳಿಗೆ ಉತ್ತರ ನೀಡುವ ಕುರಿತಂತೆ ಮುಖ್ಯಮಂತ್ರಿ, ಸಚಿವರು ಮತ್ತು ವಿರೋಧ ಪಕ್ಷದ ನಾಯಕರ ಜೊತೆ ಚರ್ಚಿಸಿ ತೀರ್ಮಾನಿಸಲಾಗಿದೆ. ಭೋಜನ ವಿರಾಮದ ಬಳಿಕ ಸರ್ಕಾರ ಈ ಬಗ್ಗೆ ಉತ್ತರ ನೀಡಲಿದೆ’ ಎಂದು ಕಲಾಪವನ್ನು ಮುಂದೂಡಿದರು.

‘ಅಧಿಕಾರಿಗಳ ಅಮಾನತಿಗೆ ಸಿ.ಎಂ ಸೂಚನೆ’

‘ಶಾಸಕರ ಲಿಖಿತ ಪ್ರಶ್ನೆಗಳಿಗೆ ಉತ್ತರ ನೀಡದೇ ಪ್ರಶ್ನೆಗಳನ್ನು ಉಳಿಸಿಕೊಂಡಿದ್ದರೆ, ಅಂತಹ ಅಧಿಕಾರಿಗಳನ್ನು ಅಮಾನತುಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ವಿಧಾನಸಭೆಗೆ ತಿಳಿಸಿದರು.

ಲಿಖಿತ ಪ್ರಶ್ನೆಗಳಿಗೆ ಉತ್ತರ ಸಿಗದ ಕಾರಣ ಅಸಮಾಧಾನಗೊಂಡ ಸಭಾಧ್ಯಕ್ಷ ಯು.ಟಿ.ಖಾದರ್ ಹೊರ ನಡೆದ ಘಟನೆಯ ಬಳಿಕ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ವಿರೋಧಪಕ್ಷದ ನಾಯಕ ಆರ್.ಅಶೋಕ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲೀನಿ ರಜನೀಶ್ ಪಾಲ್ಗೊಂಡಿದ್ದರು.

ಬಳಿಕ ಕಲಾಪ ಶುರುವಾದಾಗ ಸರ್ಕಾರದ ಪರವಾಗಿ ಪರಮೇಶ್ವರ ಉತ್ತರ ನೀಡಿದರು. ‘ಈ ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಯಾವ ಇಲಾಖೆಗಳು ಉತ್ತರ ನೀಡಲು ವಿಫಲವಾಗಿವೆಯೋ, ಆ ಇಲಾಖೆಗಳ ಕಾರ್ಯದರ್ಶಿಗಳನ್ನು ಕರೆಯಿಸಿ ಸೂಚನೆ ನೀಡಿ, ನೋಟಿಸ್ ಜಾರಿ ಮಾಡಬೇಕು, ಇನ್ನು ಮುಂದೆ ಈ ರೀತಿ ಆಗಬಾರದು ಎಂದೂ ಮುಖ್ಯಮಂತ್ರಿಯವರು ಕಟ್ಟುನಿಟ್ಟಿನ ಸಂದೇಶ ನೀಡಿದ್ದಾರೆ’ ಎಂದು ಹೇಳಿದರು.

ಕಲಾಪ ನಡೆಸುವುದು ಮಂತ್ರಿಗಳಿಗಾಗಿ ಅಲ್ಲ. ಶಾಸಕರ ಸಮಸ್ಯೆಗಳಿಗೆ. ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡುವು ದಿಲ್ಲವೆಂದರೆ ಹೇಗೆ? ಹೀಗಾದರೆ ಶಾಸಕರು ಸದನಕ್ಕೆ ಯಾಕೆ ಬರಬೇಕು.
-ಯು.ಟಿ. ಖಾದರ್, ಸಭಾಧ್ಯಕ್ಷ

ವಿಧಾನಸಭೆಯ ಇತಿಹಾಸದಲ್ಲಿ ಇಂಥ ಘಟನೆ 2–3 ಬಾರಿ ನಡೆದಿರಬಹುದು. ಇದರ ಗಂಭೀರತೆ ನಮಗೆ ಅರ್ಥವಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ.
-ಜಿ. ಪರಮೇಶ್ವರ, ಗೃಹ ಸಚಿವ
.ವಿಧಾನಸಭೆ: ಪ್ರಶ್ನೆಗಳಿಗೆ ಉತ್ತರಿಸದ ಸಚಿವರ ವಿರುದ್ಧ ಸಭಾಧ್ಯಕ್ಷ ಖಾದರ್ ಗರಂ.ರಾಮನಗರ | ಸಮಾಜಕ್ಕೆ ಸಾಮೂಹಿಕ ವಿವಾಹ ಆದರ್ಶ: ಯು.ಟಿ. ಖಾದರ್.ಸದನದಲ್ಲಿ ಅಶಿಸ್ತು ತೋರುವವರು ಹೆಬಿಚುವಲ್ ಒಫೆಂಡರ್ಸ್: ಸ್ಪೀಕರ್ ಯು.ಟಿ. ಖಾದರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.