ಬೆಂಗಳೂರು: ಎಲೆ ಚುಕ್ಕೆ ರೋಗದ ಕುರಿತು ತಾವು ನೀಡಿದ ಉತ್ತರವನ್ನು ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ವಾಪಸ್ ಪಡೆದರು.

ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಭೀಮಣ್ಣ ನಾಯಕ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು. ಅದರಲ್ಲಿನ ಮಾಹಿತಿಯ ಬಗ್ಗೆ ಬಿಜೆಪಿಯ ವಿ.ಸುನಿಲ್ಕುಮಾರ್ ಆಕ್ಷೇಪ ಎತ್ತಿದರು.

‘ರಾಜ್ಯದಲ್ಲಿ 16 ಸಾವಿರ ರೈತರು ಎಲೆ ಚುಕ್ಕೆ ರೋಗದಿಂದ ಬಾಧಿತರಾಗಿದ್ದಾರೆ ಎಂದು ಹೇಳುತ್ತೀರಿ, ಮತ್ತೊಂದು ಕಡೆ ಉತ್ತರಕನ್ನಡ ಜಿಲ್ಲೆಯೊಂದರಲ್ಲೇ 22,167 ಬಾಧಿತರಾಗಿದ್ದಾರೆ ಎನ್ನುತ್ತೀರಿ. ಇದರಲ್ಲಿ ಯಾವುದು ಸರಿ? ಎಲೆಚುಕ್ಕೆ ರೋಗಕ್ಕೆ ₹62 ಕೋಟಿಯನ್ನು ಒದಗಿಸಿರುವುದಾಗಿ ತಿಳಿಸಿದ್ದೀರಿ. 10,272 ರೈತರಿಗೆ ₹5.53 ಕೋಟಿ ಪರಿಹಾರ ಕೊಟ್ಟಿದ್ದಾಗಿಯೂ ಹೇಳಿದ್ದೀರಿ. ಇದರಲ್ಲಿ ಯಾವುದನ್ನು ನಂಬಬೇಕು. ನೀವು ಸುಳ್ಳು ಹೇಳುತ್ತಿದ್ದೀರಿ’ ಎಂದು ಸುನಿಲ್ಕುಮಾರ್ ದೂರಿದರು.

‘ಸುಳ್ಳು ಲೆಕ್ಕವನ್ನು ನೀಡುತ್ತಿಲ್ಲ. ಒಂದು ಬಾರಿ ಅಧಿಕಾರಿಗಳನ್ನು ವಿಚಾರಿಸಿ ತಿಳಿಸುತ್ತೇನೆ. ₹8.61 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈವರೆಗೆ 16,866 ರೈತರಿಗೆ ಸಹಾಯಧನ ನೀಡಲಾಗಿದೆ. ಈಗ ಜಿಲ್ಲಾವಾರು ನೀಡಿರುವ ಪ್ರಸ್ತಾವನೆಯನ್ನು ಕಳಿಸಿದ್ದೇವೆ ’ ಎಂದು ಮಲ್ಲಿಕಾರ್ಜುನ ಸಮಜಾಯಿಷಿ ನೀಡಿದರೂ ಸುನಿಲ್ ಒಪ್ಪಲ್ಲಿಲ್ಲ.

ಆಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ‘ಮಾಹಿತಿ ಪಡೆದು ಗೊಂದಲ ಬಗೆಹರಿಸಿ’ ಎಂದು ಸಚಿವರಿಗೆ ಸಲಹೆ ನೀಡಿದರು.

‘ಸರಿಯಾದ ಉತ್ತರ ನೀಡುವವರೆಗೆ ಪ್ರಶ್ನೆಯನ್ನು ತಡೆ ಹಿಡಿಯಬೇಕು’ ಎಂದು ಸುನಿಲ್ ಒತ್ತಾಯಿಸಿದರು. ತಡೆ ಹಿಡಿಯಲು ಮಲ್ಲಿಕಾರ್ಜುನ ಅವರು ಸಮ್ಮತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.