ಬೆಂಗಳೂರು: ಬಿಜೆಪಿಯಿಂದ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ‘ಬೂಟ್ ನೆಕ್ಕುವ ಸಂಸ್ಕೃತಿ ನಿಮ್ಮ ಪಕ್ಷದಲ್ಲಿ ಇದೆಯೇ’ ಎಂದು ಪ್ರಶ್ನಿಸಿದ್ದಾರೆ.

‘ಬಜೆಟ್ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ನಾನು ನೈಸ್ ರಸ್ತೆ ಯೋಜನೆ ಸಂತ್ರಸ್ತ ರೈತರ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದೆ. ನಿಮ್ಮ ಮತ್ತು ನಿಮ್ಮ ಮಗ ಬಿ.ವೈ.ವಿಜಯೇಂದ್ರ ಅವರ ಹಿಂಬಾಲಕನಾಗಿರುವ ರುದ್ರೇಶ್ ಎಂಬಾತ ಸುದ್ದಿಗೋಷ್ಠಿ ನಡೆಸಿದ್ದಾನೆ. ‘ಬಿಜೆಪಿಯಲ್ಲಿ ಯಾರ ಬೂಟ್ ನೆಕ್ಕಲು ಬರುತ್ತೀಯಾ’ ಎಂದು ನನ್ನನ್ನು ಪ್ರಶ್ನಿಸಿದ್ದಾನೆ. ಆ ವ್ಯಕ್ತಿ ಯಾರು? ಬೂಟ್ ನೆಕ್ಕುವವರಿಗೆ ಮಾತ್ರ ನಿಮ್ಮಲ್ಲಿ ಅವಕಾಶವೇ’ ಎಂದು ಸೋಮಶೇಖರ್ ಪ್ರಶ್ನಿಸಿದ್ದಾರೆ.

‘ನನ್ನ ಕ್ಷೇತ್ರದಲ್ಲಿ ಪಕ್ಷದ ನಾಯಕರುಗಳಿಂದಾದ ಸಮಸ್ಯೆಗಳು ಮತ್ತು ಗೊಂದಲಗಳಿಂದ ಬೇಸತ್ತು, ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದೆ. ವಿಜಯೇಂದ್ರ ಎಲ್ಲವನ್ನೂ ಸರಿಪಡಿಸುತ್ತಾನೆ ಎಂದು ನೀವು ಹೇಳಿದ್ದರಿಂದ ಪಕ್ಷದಲ್ಲಿ ಉಳಿದಿದ್ದೆ. ಆದರೆ ನನ್ನನ್ನು ಉಚ್ಚಾಟನೆ ಮಾಡಲಾಯಿತು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನನ್ನ ರಾಜಕೀಯ ಜೀವನವನ್ನು ಒತ್ತೆ ಇಟ್ಟು ನಿಮ್ಮೊಂದಿಗೆ ಬಂದೆ. ಆದರೆ ಉಪಕಾರ ಸ್ಮರಣೆ ಇಲ್ಲದೆ, ನನ್ನ ಕ್ಷೇತ್ರದಲ್ಲಿ ನನ್ನ ವಿರುದ್ಧ ರುದ್ರೇಶ್ ಎಂಬಾತನನ್ನು ಛೂಬಿಟ್ಟಿದ್ದೀರಿ. ಕ್ಷೇತ್ರದಲ್ಲಿ ಈಗಲೂ ನನ್ನ ಹಿಡಿತ ಇದೆ ಎಂಬುದು ನಿಮಗೆ ತಿಳಿದಿದ್ದರೆ ಸಾಕು’ ಎಂದಿದ್ದಾರೆ.

‘ಈ ಪತ್ರದಲ್ಲಿ ನಾನು ಎತ್ತಿರುವ ಪ್ರಶ್ನೆಗಳಿಗೆ ನೀವು ಉತ್ತರ ನೀಡಬೇಕು. ನನ್ನ ಮುಂದಿನ ನಿರ್ಣಯ ಏನಾಗಿರಬೇಕು ಎಂಬ ದೃಷ್ಟಿಯಲ್ಲಿ ನಿಮ್ಮ ಉತ್ತರ ಬಹಳ ಮುಖ್ಯವಾಗಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.