ಬೆಂಗಳೂರು: 2026ರ ಮುಂಗಾರು ಹಂಗಾಮಿನ ರಸಗೊಬ್ಬರಗಳ ಸಮರ್ಪಕ ಪೂರೈಕೆ ಮತ್ತು ಪರಿಣಾಮಕಾರಿ ನಿರ್ವಹಣೆಗೆ ಕೃಷಿ ಇಲಾಖೆ ಹಲವು ಕ್ರಮಗಳನ್ನು ಜಾರಿಗೊಳಿಸಿದೆ.

ಪಶ್ಚಿಮ ಏಷ್ಯಾದ ಅಸ್ಥಿರತೆ ಹಿನ್ನಲೆ ಗೊಬ್ಬರ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಆಮದು ವ್ಯತ್ಯಯವಾಗುವ ಸಾಧ್ಯತೆ ಕಂಡುಬಂದಿದ್ದು, ರಾಜ್ಯದಲ್ಲಿ ಗೊಬ್ಬರ ಪೂರೈಕೆಗೆ ಅಡ್ಡಿಯಾಗುವ ಆತಂಕ ವ್ಯಕ್ತವಾಗಿದೆ. ಈ ಹಿನ್ನಲೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರ ಉಸ್ತುವಾರಿಯಲ್ಲಿ ಕೃಷಿ ಇಲಾಖೆ ಬಹುಮುಖ ಕ್ರಮಗಳನ್ನು ಅನುಷ್ಠಾನಗೊಳಿಸಿದೆ.

ಕೇಂದ್ರ ಸರ್ಕಾರವು ರಾಜ್ಯಕ್ಕೆ ಒಟ್ಟು 30.05 ಲಕ್ಷ ಮೆಟ್ರಿಕ್ ಟನ್ ವಿವಿಧ ಗೊಬ್ಬರಗಳನ್ನು ಹಂಚಿಕೆ ಮಾಡಿದ್ದು, ಏಪ್ರಿಲ್ 1ರ ವೇಳೆಗೆ 11.42 ಲಕ್ಷ ಮೆಟ್ರಿಕ್ ಟನ್ ಸಂಗ್ರಹ ಲಭ್ಯವಿದೆ.

ರಾಜ್ಯವು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ (KSCMF) ಮತ್ತು ಕರ್ನಾಟಕ ರಾಜ್ಯ ಬೀಜ ನಿಗಮ(KSSC) ಮುಖಾಂತರ ದಾಸ್ತಾನು ವ್ಯವಸ್ಥೆಯನ್ನು ಬಲಪಡಿಸಿದೆ. ಪ್ರಸ್ತುತ 28,224 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿನಲ್ಲಿ ಲಭ್ಯವಿದ್ದು, ಯೂರಿಯಾ ಮತ್ತು ಡಿ.ಎ.ಪಿ ಗೊಬ್ಬರವನ್ನು ಶೇ 25ರಷ್ಟು ಕಡ್ಡಾಯವಾಗಿ ಸಂಗ್ರಹಿಸಲು ನಿರ್ದೇಶಿಸಲಾಗಿದೆ..

ಜಿಲ್ಲಾವಾರು ಗೊಬ್ಬರ ಹಂಚಿಕೆಯನ್ನು ಕಳೆದ ಮೂರು ವರ್ಷಗಳ ಸರಾಸರಿ ಬಳಕೆಯನ್ನು ಆಧಾರಿಸಿ ಮರು ನಿರ್ಧಾರ ಮಾಡಲಾಗಿದೆ. ಜೊತೆಗೆ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸೂಕ್ಷ್ಮ ಯೋಜನೆ ರೂಪಿಸಿ ಪೂರೈಕೆ ಸಮಾತೋಲನ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಯುರಿಯಾ ಬಳಕೆಯನ್ನು ನಿಯಂತ್ರಿಸಲು ಡೇಟಾ ಬೇಸ್ ಆಧಾರಿತ ಯೂರಿಯಾ ವಿತರಣೆ ಆ್ಯಫ್ ಅಭಿವೃದ್ದಿ ಪಡಿಸಲಾಗಿದ್ದು, ರೈತರ ಭೂ ಹಿಡುವಳಿ ಮತ್ತು ಬೆಳೆ ಮಾದರಿಯನ್ನು ಆಧಾರಿಸಿ ಯೂರಿಯಾ ಮಾರಾಟವನ್ನು ನಿಯಂತ್ರಿಸಲಾಗುತ್ತಿದೆ. ಈ ಆಪ್ಲಿಕೇಷನ್ ಈಗಾಗಲೇ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ಮುಂದಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ್ಯಾಂತ ವಿಸ್ತಾರಗೊಳ್ಳಲಿದೆ..

ಕೃಷಿ ಹೊರತಾದ ಚಟುವಟಿಕೆಗಳಿಗೆ ಸಹಾಯಧನದ ಯೂರಿಯಾ ದುರುಪಯೋಗವನ್ನು ತಡೆಯಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ..

ಅಂತರಾಜ್ಯ ಗಡಿಗಳಲ್ಲಿ ಚೆಕ್ಪೋಸ್ಟ್ ಗಳ ಮೂಲಕ ಯೂರಿಯಾ ಅನಧಿಕೃತ ಸಾಗಣೆಯನ್ನು ತಡೆಯಲು ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ. ಜೊತೆಗೆ ಪ್ರತಿ ವಾರ ವಿಡಿಯೋ ಕಾನ್ಪರೆನ್ಸ್ ಸಭೆಗಳ ಮೂಲಕ ಗೊಬ್ಬರ ಪೂರೈಕೆ, ಮಾರಾಟ ಮತ್ತು ಸಂಗ್ರಹ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

ಮುಖ್ಯಾಂಶಗಳು:

* 30.05 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಹಂಚಿಕೆ.

* 11.42 ಲಕ್ಷ ಮೆಟರಿಕ್ ಟನ್ ಪ್ರಸ್ತುತ ರಸಗೊಬ್ಬರ ಸಂಗ್ರಹ

* 28224 ಮೆಟ್ರಿಕ್ ಟನ್ ಕಾಪು ದಾಸ್ತಾನು ಲಭ್ಯ.

* ಯೂರಿಯಾ ಮತ್ತು ಡಿ.ಎ.ಪಿ ಶೇ 25ರಷ್ಟು ಕಡ್ಡಾಯ ಸಂಗ್ರಹ.

* ಅಕ್ರಮ ಬಳಕೆ ತಡೆಗೆ ಜಿಲ್ಲಾ ಸಮಿತಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.