ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಕೀಲ ಸಮುದಾಯಕ್ಕೆ ಸುಂದರಸ್ವಾಮಿ ಪ್ರಭಾವ ಅಪಾರ

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ಬೋಪಣ್ಣ ಅಭಿಮತ
Published : 13 ಸೆಪ್ಟೆಂಬರ್ 2024, 21:05 IST
Last Updated : 13 ಸೆಪ್ಟೆಂಬರ್ 2024, 21:05 IST
ಫಾಲೋ ಮಾಡಿ
Comments

ಬೆಂಗಳೂರು: ‘ಕರ್ನಾಟಕದ ವಕೀಲ ಸಮುದಾಯದ ಮೇಲೆ ದಿವಂಗತ ಎಸ್‌.ಜಿ.ಸುಂದರಸ್ವಾಮಿ ಅವರ ಪ್ರಭಾವ ಅಪಾರವಾದುದು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಬಣ್ಣಿಸಿದರು.

ಕರ್ನಾಟಕದ ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಹೈಕೋರ್ಟ್‌ನ ಹಿರಿಯ ವಕೀಲರಾಗಿದ್ದ ದಿವಂಗತ ಎಸ್.ಜಿ. ಸುಂದರಸ್ವಾಮಿ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ, 'ಕರ್ನಾಟಕ ಜ್ಯೂರಿಸ್ಟ್ಸ್ ಟ್ರಸ್ಟ್' ಹಾಗೂ 'ಕರ್ನಾಟಕ (ಇಂಡಿಯಾ) ಸೆಕ್ಷನ್ ಆಫ್ ಇಂಟರ್‌ ನ್ಯಾಷನಲ್ ಕಮಿಷನ್ ಆಫ್ ಜ್ಯೂರಿಸ್ಟ್ಸ್' ವತಿಯಿಂದ ಹೈಕೋರ್ಟ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಕಿರಿಯ ವಕೀಲರಿಗೆ ಮಾದರಿಯಾಗಿ ಬಾಳಿದ ಸುಂದರಸ್ವಾಮಿ ಸಂವೇದನಾಶೀಲ ಮತ್ತು ಅಗಾಧ ಜ್ಞಾನವಂತರಾಗಿದ್ದರು. ಅಂಥವರ ನಡೆನುಡಿಯ ಸಂಪ್ರದಾಯ ನ್ಯಾಯಾಂಗಕ್ಕೆ ಮಾರ್ಗದರ್ಶಿ’ ಎಂದು ಬಣ್ಣಿಸಿದರು.

'ಡಿಜಿಟಲ್ ಜಗತ್ತಿನಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಸವಾಲುಗಳು' ಎಂಬ ವಿಷಯದ ಕುರಿತು ಸುದೀರ್ಘ ಉಪನ್ಯಾಸ ನೀಡಿದ ‘ಲಾ ಏಷ್ಯಾ' ಸಂಸ್ಥೆಯ ಅಧ್ಯಕ್ಷರೂ ಆದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಶ್ಯಾಮ್‌ ದಿವಾನ್‌, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆಯಲ್ಲಿ ಡಿಜಿಟಲ್‌ ಮಾಧ್ಯಮ ವಹಿಸಿರುವ ಪಾತ್ರ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನು ವ್ಯಾಪ್ತಿಗಳನ್ನು ಕೂಲಂಕಷವಾಗಿ ವಿವರಿಸಿದರು.

ಸುಂದರಸ್ವಾಮಿ ಅವರ ಪುತ್ರ ಹಾಗೂ ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT