ನವದೆಹಲಿ: ‘ಆಯ್ಕೆಯಾದ ಅಭ್ಯರ್ಥಿಯು ನೇಮಕಾತಿ ಪೂರ್ವ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ವಿಫಲವಾದಲ್ಲಿ ಅಥವಾ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದರೆ ಅದೇ ಆಯ್ಕೆ ಪಟ್ಟಿಯಿಂದ ನೇಮಕಾತಿಯನ್ನು ಹಕ್ಕಿನ ವಿಷಯವಾಗಿ ಪಡೆಯಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಪ್ರತಿವಾದಿಯನ್ನು ಉಪ
ವಿಭಾಗಾಧಿಕಾರಿ (ಕೆಎಎಸ್) ಹುದ್ದೆಗೆ ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ವಿಕ್ರಮ್ನಾಥ್ ಹಾಗೂ ಸಂದೀಪ್ ಮೆಹ್ತಾ ಅವರ ಪೀಠ ರದ್ದುಪಡಿಸಿದೆ.

‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಪ್ರಕ್ರಿಯೆಯಲ್ಲಿ
ವೇಯ್ಟಿಂಗ್ ಲಿಸ್ಟ್ (ನಿರೀಕ್ಷಣಾ ಪಟ್ಟಿ) ಅಥವಾ ಹೆಚ್ಚುವರಿ ಪಟ್ಟಿಗಾಗಿ ನಿರ್ದಿಷ್ಟ ಶಾಸಕಾಂಗ ನಿಯಮಗಳಿಲ್ಲ. ಹೀಗಾಗಿ, ಆಯ್ಕೆಯಾದ ಅಭ್ಯರ್ಥಿಯು ಹುದ್ದೆಗೆ ವರದಿ ಮಾಡಿಕೊಳ್ಳದಿದ್ದರೆ ಬೇರೆ ಅಭ್ಯರ್ಥಿಯು ಆ ಹುದ್ದೆಯನ್ನು ಕೇಳುವಂತಿಲ್ಲ‘ ಎಂದು ಪೀಠ ಸ್ಪಷ್ಟಪಡಿಸಿದೆ.

‘ಅಂತಹ ಖಾಲಿ ಹುದ್ದೆಯನ್ನು ಆಡಳಿತ ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ಭರ್ತಿ ಮಾಡಬೇಕು. ಶಾಸನಬದ್ಧ ಚೌಕಟ್ಟನ್ನು ಮೀರಿ ಅದೇ ಆಯ್ಕೆ ಪಟ್ಟಿಯನ್ನು ನಿರ್ವಹಿಸುವ ಮೂಲಕ ಪ್ರಕ್ರಿಯೆ ನಡೆಸುವಂತಿಲ್ಲ‘ ಎಂದು ಪೀಠ ಒತ್ತಿ ಹೇಳಿದೆ.

‘ಆಯ್ಕೆ ಪಟ್ಟಿಯು ಆಡಳಿತ ನಿಯಮಗಳಿಗೆ ಅನುಸಾರವಾಗಿ ಅಭ್ಯರ್ಥಿಯನ್ನು ಪರಿಗಣನೆಗೆ ಅರ್ಹರನ್ನಾಗಿ ಮಾಡುತ್ತದೆ. ಇದು ಶಾಸನಬದ್ಧ ಚೌಕಟ್ಟನ್ನು ಉಲ್ಲಂಘಿಸಿ ಹುದ್ದೆ ಪಡೆಯಲು ಸ್ಥಾಪಿತ ಹಕ್ಕನ್ನು ಸೃಷ್ಟಿಸುವುದಿಲ್ಲ‘ ಎಂದು ನ್ಯಾಯಪೀಠ ಹೇಳಿದೆ.

‘ಆಯ್ಕೆ ಪಟ್ಟಿಯಲ್ಲಿ ನಾನೇ ಮುಂದಿನ ಅಭ್ಯರ್ಥಿಯಾಗಿದ್ದೇನೆ. ಹುದ್ದೆ ಖಾಲಿ ಉಳಿದಿರುವುದರಿಂದ, ಉನ್ನತ ಹುದ್ದೆಗೆ ನನ್ನನ್ನು ನೇಮಕಾತಿ ಮಾಡಬೇಕು‘ ಎಂಬ ಪ್ರತಿವಾದಿಯ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.

ಪ್ರಕರಣವೇನು?

362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕೆಪಿಎಸ್ಸಿ 2011ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಪ್ರತಿವಾದಿಯೂ ಆಗಿರುವ ಮಾಜಿ ಸೈನಿಕ ಸಂತೋಷ್ ಕುಮಾರ್ ಸಿ. ಪರೀಕ್ಷೆ ಬರೆದಿದ್ದರು.

ಆಯೋಗವು 2014ರ ಮಾರ್ಚ್ನಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಸಾಮಾನ್ಯ ಅರ್ಹತೆ/ ಮಾಜಿ ಸೈನಿಕ ವಿಭಾಗದಲ್ಲಿ ಅಯ್ಯಪ್ಪ ಎಂ.ಎ. ಅವರಿಗೆ ಆಯೋಗವು ಉಪವಿಭಾಗಾಧಿಕಾರಿ (ದರ್ಜೆ ಎ) ಹುದ್ದೆ ಕೊಟ್ಟಿತ್ತು. ಸಂತೋಷ್ ಕುಮಾರ್ ಅವರಿಗೆ ಸಹಾಯಕ ಆಯುಕ್ತ (ವಾಣಿಜ್ಯ ತೆರಿಗೆ) ಹುದ್ದೆ ಕೊಡಲಾಗಿತ್ತು.

ಆದರೆ, ಅಯ್ಯಪ್ಪ ಅವರು ಕಡ್ಡಾಯ ವೈದ್ಯಕೀಯ ಪರೀಕ್ಷೆಗೆ ಹಾಜರಾಗಿರಲಿಲ್ಲ ಹಾಗೂ ಪೊಲೀಸ್ ದೃಢೀಕರಣ ನಡೆಸಿರಲಿಲ್ಲ. ಜತೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಈ ನಡುವೆ, ಸಂತೋಷ್ ಕುಮಾರ್ 2022ರಲ್ಲಿ ಸೇವೆಗೆ ವರದಿ ಮಾಡಿಕೊಂಡಿದ್ದರು. ಮೆರಿಟ್ ಆಧಾರದಲ್ಲಿ ತಮಗೆ ಈ ಕೆಎಎಸ್ ಹುದ್ದೆ ನೀಡಬೇಕು ಎಂದು ಸಂತೋಷ್ ಅವರು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಗೆ ಮನವಿ ಮಾಡಿದ್ದರು. ‘ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು– 1997’ರಲ್ಲಿ ನಿರೀಕ್ಷಣಾ ಪಟ್ಟಿ ಎಂಬ ಪರಿಕಲ್ಪನೆಯೇ ಇಲ್ಲ ಎಂಬ ಕಾರಣ ನೀಡಿ ಈ ಮನವಿಯನ್ನು ಇಲಾಖೆ ತಿರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿ ಸಂತೋಷ್ ಅವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ನ್ಯಾಯಮಂಡಳಿ ವಜಾಗೊಳಿಸಿತ್ತು. ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರನ್ನು ಕೆಎಎಸ್ ಹುದ್ದೆಗೆ ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

‘ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದ ನಂತರ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಂಡಂತೆ. ಕೆಪಿಎಸ್ಸಿಯು ಖಾಲಿ ಹುದ್ದೆಗಳ ಸಂಖ್ಯೆಗೆ ಸಮಾನವಾದ ಪಟ್ಟಿಯನ್ನು ಮಾತ್ರ ಸಿದ್ಧಪಡಿಸುತ್ತದೆ. ಆಯ್ಕೆಯಾದವರು ಸೇವೆಗೆ ಸೇರದ ಕಾರಣ ಉದ್ಭವಿಸುವ ಯಾವುದೇ ಖಾಲಿ ಹುದ್ದೆಯನ್ನು ಭವಿಷ್ಯದ ನೇಮಕಾತಿಗಾಗಿ ಹೊಸ ಖಾಲಿ ಹುದ್ದೆ ಎಂದು ಪರಿಗಣಿಸಲಾಗುತ್ತದೆ‘ ಎಂದು ರಾಜ್ಯ ಸರ್ಕಾರದ ವಕೀಲರು ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.