ತರೀಕೆರೆ: ತಾಲ್ಲೂಕಿನ ಎಚ್.ರಂಗಾಪುರ(ದೋರನಾಳು) ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಆವರಣದಲ್ಲಿ ಗೋಧಿ ಹೂತಿದ್ದ ಪ್ರಕರಣದಲ್ಲಿ ಹಿಂದಿನ ಪ್ರಾಂಶುಪಾಲ ಬಿ.ಜೆ. ಹರೀಶ್ ಅವರನ್ನು ಸೇವೆಯಿಂದ ವಜಾ ಮಾಡದೆ ಅಮಾನತು ಮಾಡಿರುವುದು ಇಲಾಖೆಯ ವೈಫಲ್ಯ ಎಂದು ವಿಶ್ವ ಮಾನವ ಡಾ. ಭೀಮರಾವ್ ಅಂಬೇಡ್ಕರ್ ರಕ್ಷಣಾ ವೇದಿಕೆ ಉಪಾಧ್ಯಕ್ಷ ಎಸ್.ಶಿವಮೂರ್ತಿ ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಆಹಾರಕ್ಕಾಗಿ ಸರ್ಕಾರದಿಂದ ವಿತರಿಸಲಾದ ಗೋಧಿ ಚೀಲಗಳನ್ನು ಬಿ.ಜೆ. ಹರೀಶ್ ಅವರ ಅವಧಿಯಲ್ಲೇ ಅಕ್ರಮವಾಗಿ ಹೂತು ಹಾಕಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಮೇಲಾಧಿಕಾರಿಗಳ ಅನುಮತಿ ಪಡೆಯದೆ, ನಿಯಮಗಳನ್ನು ಲೆಕ್ಕಿಸದೆ ಈ ಕೃತ್ಯ ಎಸಗಲಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶ ಕರು, ಹರೀಶ್ ಅವರನ್ನು ಅಮಾನತು ಮಾಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಬಿ.ಎಂ. ರವಿ ಅವರನ್ನು ಈ ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲದಿದ್ದರೂ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧವಿಲ್ಲದ ಹೊರಗುತ್ತಿಗೆ ನೌಕರರಾದ ವಿಶಾಲಮ್ಮ ಅವರನ್ನು ಸೇವೆಯಿಂದ ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.

ಅಕ್ಟೋಬರ್ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ನಡೆಸಿದ ಸಭೆಯಲ್ಲಿ ಪ್ರಾಂಶುಪಾಲರ ವಿರುದ್ಧ ವಿಶಾಲಮ್ಮ ದೂರು ಹೇಳಿದ್ದರು. ಹುಳ ಆಗಿರುವ ಕಾಳು, ಅಕ್ಕಿ ನೀಡುತ್ತಿದ್ದು, ಕೊಡುವ ಪ್ರಮಾಣವು ತುಂಬಾ ಕಡಿಮೆ ಇದೆ. ಉಪ್ಪಿಟ್ಟಿಗೆ ಖಾರದ ಪುಡಿ ಹಾಕಿ ಮಾಡಿ ಎಂದು ಹೇಳುತ್ತಾರೆ. ಈ ಸಭೆ ನಡೆದ ಬಳಿಕ ಅಡಿಗೆ ಸಿಬ್ಬಂದಿ ತೇಜೋ ವಧೆಗೆ ಪ್ರಭಾರ ಪ್ರಾಂಶುಪಾಲರು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ತನಿಖೆ ಸಂದರ್ಭದಲ್ಲಿ ದೂರುದಾ ರರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಿಸುವ ಜೊತೆಗೆ ಅಮಾಯಕ ಇಬ್ಬರನ್ನು ಶಿಕ್ಷಿಸಿ ದ್ದಾರೆ. ವಸತಿ ಶಾಲೆಯ ಕರ್ಮಕಾಂಡಗಳ ಬಗ್ಗೆ ಹಲವು ದೂರುಗಳಿದ್ದು, ನಿವೃತ್ತ ನ್ಯಾಯಮೂರ್ತಿಗಳಿಂದ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ. ತಪ್ಪಿಲ್ಲದವರ ಮೇಲೆ ಕ್ರಮ ಕೈಗೊಂಡಿರುವ ಆದೇಶ ವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-126-176968417

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.