ಬೆಂಗಳೂರು: ರಾಜ್ಯದಲ್ಲಿನ ಕೆಲವು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯ ಜವಾಬ್ದಾರಿಯನ್ನು ದಿ ಟಾಟಾ ಪವರ್ ಕಂಪನಿ ಲಿಮಿಟೆಡ್ಗೆ ವಹಿಸುವ ತಯಾರಿ ನಡೆದಿದೆ. ಆದರೆ, ವಿದ್ಯುತ್ ದರ ನಿಗದಿಯ ಹೊಣೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಇರಲಿದೆ.

‘ವಿದ್ಯುತ್ ಕಾಯ್ದೆ–2003ರ ಸೆಕ್ಷನ್ 14 ಮತ್ತು 15ರ ಅಡಿ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಲು ಅವಕಾಶ ಇದೆ. ಅದಕ್ಕೆ ಅನುಗುಣವಾಗಿ ಟಾಟಾ ಕಂಪನಿಯು 19 ಜಿಲ್ಲೆಗಳಲ್ಲಿನ ವಿತರಣಾ ಜವಾಬ್ದಾರಿಯನ್ನು ತಮಗೆ ವಹಿಸುವಂತೆ ಕೋರಿ ಕೆಇಆರ್ಸಿಗೆ ಅರ್ಜಿ ಸಲ್ಲಿಸಿದೆ. ಆಯೋಗ ಇದಕ್ಕೆ ಒಪ್ಪಿದರೂ, ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಮೂಲಗಳು ತಿಳಿಸಿವೆ.

ಆಯೋಗವು ಅನುಮತಿ ನೀಡಿದರೆ, ಕೆಪಿಟಿಸಿಎಲ್ನ ವಿತರಣಾ ಜಾಲವನ್ನು ಬಳಸಿಕೊಂಡು ಖಾಸಗಿಯವರು ವಿದ್ಯುತ್ ಪೂರೈಕೆ ಮಾಡಲಿದ್ದಾರೆ. ಆದರೆ, ಕೆಪಿಟಿಸಿಎಲ್ನ ಮೂಲಸೌಕರ್ಯವನ್ನು ಬಳಸಿಕೊಳ್ಳುವುದರಿಂದ ಇದಕ್ಕೆ ಪ್ರತ್ಯೇಕ ಶುಲ್ಕವನ್ನು ಖಾಸಗಿಯವರು ಪಾವತಿಸಬೇಕಾಗಬಹುದು ಅಥವಾ ಸರ್ಕಾರ ಈ ಎಲ್ಲ ಸೌಲಭ್ಯಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಬೊಕ್ಕಸಕ್ಕೆ ಹಣ ಪಡೆಯಬಹುದು ಎನ್ನಲಾಗಿದೆ.

ಖಾಸಗಿಯವರೇ ವಿದ್ಯುತ್ ಅನ್ನು ಉತ್ಪಾದಿಸಿ ಗ್ರಾಹಕರಿಗೆ ಸರಬರಾಜು ಮಾಡಬಹುದು ಅಥವಾ ಈಗಿರುವ ವಿದ್ಯುತ್ ಉತ್ಪಾದನಾ ಸಂಸ್ಥೆಗಳಿಂದ ಖರೀದಿ ಮಾಡಿ, ವಿತರಣೆ ಮಾಡಬಹುದು. ವಿದ್ಯುತ್ ಉತ್ಪಾದನೆ ಅಥವಾ ಖರೀದಿಗೆ ತಗಲುವ ವೆಚ್ಚ, ನಿರ್ವಹಣೆ, ಸಿಬ್ಬಂದಿಯ ವೇತನ ಇತ್ಯಾದಿ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಆಯೋಗವು ದರ ನಿಗದಿ ಮಾಡಲಿದೆ.

ಒಂದಕ್ಕಿಂತ ಹೆಚ್ಚು ಕಂಪನಿಗಳಿಗೆ ವಿದ್ಯುತ್ ವಿತರಣೆಯ ಜವಾಬ್ದಾರಿ ವಹಿಸಲು ವಿದ್ಯುತ್ ಕಾಯ್ದೆಯಲ್ಲಿ ಅವಕಾಶ ಇದೆ. ಖಾಸಗಿಯವರಿಗೆ ವಹಿಸುವುದರಿಂದ ಏಕಸ್ವಾಮ್ಯ ತಪ್ಪಲಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ಖಾಸಗಿ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಡುವುದರಿಂದ ಗ್ರಾಹಕರು ಗುಣ
ಮಟ್ಟದ ಸೇವೆಯನ್ನು ನಿರೀಕ್ಷಿಸಬಹುದು ಎಂದು ಕೆಇಆರ್ಸಿಯ ಮಾಜಿ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದರಿಂದ ಒಳ್ಳೆಯದು ಆಗಬಹುದು. ಕೆಲವೊಮ್ಮೆ ಕೆಟ್ಟದ್ದೂ ಆಗಬಹುದು. ಮುಂಬೈ, ದೆಹಲಿಯಲ್ಲಿ ಖಾಸಗಿಯವರಿಗೆ ಕೊಟ್ಟಿರುವುದರಿಂದ ಒಳ್ಳೆಯದಾಗಿದೆ. ಆದರೆ, ಒಡಿಶಾದಲ್ಲಿ ಈ ಪ್ರಯೋಗ ಯಶಸ್ವಿಯಾಗಲಿಲ್ಲ. ಖಾಸಗಿಯವರಿಂದ ಸರ್ಕಾರ ವಾಪಸ್ ಪಡೆಯಿತು. ದೆಹಲಿಯಲ್ಲಿ ಖಾಸಗಿಯ
ವರಿಗೆ ಕೊಟ್ಟ ನಂತರ ನಷ್ಟ ಕಡಿಮೆ ಆಗಿದೆ. ಹೊಸತನದ ಬಗ್ಗೆ ಯೋಚಿಸುವುದರಲ್ಲಿ ತಪ್ಪಿಲ್ಲ’ ಎಂಬುದು ಅವರ ಅಭಿಪ್ರಾಯ.

‘ಸುಮಾರು 25 ವರ್ಷಗಳ ಹಿಂದೆ ಖಾಸಗಿಯವರಿಗೆ ವಹಿಸಲು ಜಾಗತಿಕಮಟ್ಟದ ಟೆಂಡರ್ ಕರೆಯಲಾಗಿತ್ತು. ಆಗ ಯಾರೂ ಟೆಂಡರ್ನಲ್ಲಿ ಭಾಗವಹಿಸಿರಲಿಲ್ಲ. ಖಾಸಗಿಯವರಿಗೆ ವಹಿಸುವುದರಿಂದ ಗ್ರಾಹಕರಿಗೆ ತೊಂದರೆ ಆಗುವುದಿಲ್ಲ. ಆದರೆ, ಆಡಳಿತಾತ್ಮಕ ಸಮಸ್ಯೆಗಳು ಎದುರಾಗಲಿವೆ. ಈಗಿರುವ ಸಿಬ್ಬಂದಿಯನ್ನು ಖಾಸಗಿಯವರು ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕಾಗುತ್ತದೆ’ ಎಂದು ಇಂಧನ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದರು.

ಕೈಗಾರಿಕೆಗಳಿಗೆ ಅನುಕೂಲ: ‘ಭಾಗಶಃ ಖಾಸಗೀಕರಣ ಮಾಡುವುದರಿಂದ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಲಂಚದ ಹಾವಳಿ ತಪ್ಪಲಿದೆ. ದರ ಕಡಿಮೆಯಾಗಲಿದೆ. ಎಸ್ಕಾಂಗಳ ಸಿಬ್ಬಂದಿ ಅತಿ ಹೆಚ್ಚು ಸಂಬಳ ಪಡೆಯುತ್ತಾರೆ. ಆದರೆ, ಗುಣಮಟ್ಟದ ಸೇವೆ ನೀಡುತ್ತಿಲ್ಲ. ಹೇಗಿದ್ದರೂ ಸರ್ಕಾರ ಹಣ ನೀಡುತ್ತದೆ ಎಂಬ ಧೋರಣೆಯಿಂದ ಬೇಕಾಬಿಟ್ಟಿ ಕೆಲಸ ಮಾಡುತ್ತಾರೆ. ಇದಕ್ಕೆಲ್ಲ ಕಡಿವಾಣ ಬೀಳಲಿದೆ’ ಎಂದು ಕೆಇಆರ್ಸಿ ಸಲಹಾ ಮಂಡಳಿಯ ಮಾಜಿ ಸದಸ್ಯ ಎಂ.ಜಿ.ಪ್ರಭಾಕರ್ ತಿಳಿಸಿದರು.

‘ಖಾಸಗಿಯವರದ್ದು ಲಾಭದ ಉದ್ದೇಶ’

ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂಬ ಲೆಕ್ಕಾಚಾರದಲ್ಲಿ ನಾವು ಈಗ ಗ್ರಾಹಕರಿಗೆ ಸೇವೆ ನೀಡುತ್ತಿದ್ದೇವೆ. ಆದರೆ, ಖಾಸಗಿಯವರು ಲಾಭದ ಉದ್ದೇಶ ಇಟ್ಟುಕೊಂಡೇ ಬರುತ್ತಾರೆ. 1902ರಿಂದ ಇಲ್ಲಿಯವರಿಗೆ ಮೂಲ ಸೌಕರ್ಯ ಕಲ್ಪಿಸಲು ಲಕ್ಷಾಂತರ ಕೋಟಿ ವೆಚ್ಚ ಮಾಡಲಾಗಿದೆ. ಇದೆಲ್ಲವೂ ಈಗ ಖಾಸಗಿಯವರ ಪಾಲಾಗಲಿದೆ.

ನೌಕರರಿಗೆ ಸೇವಾ ಭದ್ರತೆ, ವೇತನ, ಪಿಂಚಣಿಯ ಗ್ಯಾರಂಟಿ ಇರುವುದಿಲ್ಲ. ರೈತರ ಪಂಪ್ಸೆಟ್ಗಳಿಗೆ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಕಡಿವಾಣ ಬೀಳಬಹುದು

-ಕೆ.ಬಲರಾಮ್, ಅಧ್ಯಕ್ಷರು, ಕ.ವಿ.ಮಂ. ನೌಕರರ ಸಂಘಗಳ ಒಕ್ಕೂಟ

ವಿದ್ಯುತ್ ದರವನ್ನು ಕೆಇಆರ್ಸಿ ನಿಗದಿ ಮಾಡಲಿದೆ. ಖಾಸಗಿಯವರು ಮನಬಂದಂತೆ ಗ್ರಾಹಕರಿಂದ ವಿದ್ಯುತ್ ಶುಲ್ಕ ವಸೂಲಿ ಮಾಡಲು ಕಾಯ್ದೆ ಪ್ರಕಾರ ಅವಕಾಶ ಇಲ್ಲ.
-ಎಂ.ಆರ್.ಶ್ರೀನಿವಾಸಮೂರ್ತಿ, ಕೆಇಆರ್ಸಿ ಮಾಜಿ ಅಧ್ಯಕ್ಷರು

ಖಾಸಗೀಕರಣ ಒಳ್ಳೆಯದು. ರೈತರಿಗೆ ಉಚಿತ ವಿದ್ಯುತ್, ಸಹಾಯಧನದಂತಹ ವಿಚಾರಗಳನ್ನು ಮುಂದೆಯೂ ಸರ್ಕಾರವೇ ನೋಡಿಕೊಳ್ಳಬೇಕಾಗುತ್ತದೆ.
-ಎಂ.ಕೆ.ಶಂಕರಲಿಂಗೇಗೌಡ, ಮಾಜಿ ಅಧ್ಯಕ್ಷರು, ಕೆಇಆರ್ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.