ತೀರ್ಥಹಳ್ಳಿ: ‘ವಾಕ್ಸಿನ್, ತಪಾಸಣೆಯ ಭರವಸೆ ಇದ್ದಾಗ್ಯೂ ಕ್ಯಾನ್ಸರ್ ಮಹಾಮಾರಿಯಾಗಿ ಕಾಡುತ್ತಿದೆ. ಎಳೆಯ ಮಕ್ಕಳಿಂದ ಹಿಡಿದು ಆರ್ಥಿಕ ಸ್ಥಿತಿವಂತರನ್ನೂ ಉಳಿಸುವುದು ಸವಾಲಾಗಿದೆ. ವೇಗವಾಗಿ ಹರಡುತ್ತಿರುವುದರಿಂದ ಮನುಕುಲದ ಆಪೋಷಣ ಪಡೆಯುತ್ತದೆಯೋ ಎಂಬ ಭಯದ ವಾತಾವರಣ ಸೃಷ್ಟಿಯಾಗಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಆರಗದ ಎಂಐಒ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಮ್ಯಾಮೋಗ್ರಫಿ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ಆರಂಭದ ದಿನಗಳಲ್ಲಿ ಉದಾಸೀನ ಧೋರಣೆಯಿಂದ ಮೂರು, ನಾಲ್ಕನೇ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ನನ್ನ ಆತ್ಮೀಯ ವಲಯದಲ್ಲಿಯೇ ಅನೇಕರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೆಲವರು ಆರ್ಥಿಕ ಪರಿಸ್ಥಿತಿ, ಭಯದ ಕಾರಣಕ್ಕೆ ತಪಾಸಣೆಗೆ ಒಳಗಾಗುತ್ತಿಲ್ಲ. ಜನಜಾಗೃತಿ ಕಾರ್ಯಕ್ರಮಗಳ ಮೂಲಕ ರೋಗದ ಬಗ್ಗೆ ಹೆಚ್ಚು ಮಾಹಿತಿ ಹಂಚಿಕೆಯಾಗಬೇಕು. ಆಸ್ಪತ್ರೆಗಳಲ್ಲಿ ಇನ್ನಷ್ಟು ಆಧುನಿಕ ಯಂತ್ರಗಳನ್ನು ಪರಿಚಯಿಸಬೇಕು’ ಎಂದು ಸಲಹೆ ನೀಡಿದರು.

‘ಹಸಿವು, ಆರೋಗ್ಯ, ಶಿಕ್ಷಣದ ಸೂಚ್ಯಂಕ ಸುಸ್ಥಿತಿಯಲ್ಲಿ ಇದ್ದರೆ ದೇಶ ಸುಭದ್ರವಾಗಿರುತ್ತದೆ. ಸರ್ಕಾರಗಳು ಈ ಬಗ್ಗೆ ಇನ್ನಷ್ಟು ಗಮನ ಹರಿಸಬೇಕು. ಕುಟುಂಬದವರೊಬ್ಬರಿಗೆ ಕ್ಯಾಲ್ಸಿಯಂ ಡೆಪಾಸಿಟ್ ಪರೀಕ್ಷೆ ಮಾಡಿಸಬೇಕು ಎಂದು ಬೆಂಗಳೂರಿನ ವಿವಿಧ ಆಸ್ಪತ್ರೆ ಅಲೆದಾಡಿದ್ದೇನೆ. ಆದರೆ, ನಮ್ಮ ರಾಜ್ಯದಲ್ಲಿ ಎಲ್ಲೂ ಸಿಗಲಿಲ್ಲ. ಪಕ್ಕದ ಚೆನ್ನೈ ಹೊರತುಪಡಿಸಿದರೆ ಸಿಂಗಾಪುರಕ್ಕೆ ಹೋಗಿ ಎಂಬ ಸಲಹೆ ಬಂದಿದೆ. ಯಂತ್ರದ ಬೆಲೆ ₹ 30 ಕೋಟಿ ಇದ್ದರೆ ರೋಗಿಗಳ ಆರೈಕೆ ಮಾಡಬೇಕಾದ ಆಸ್ಪತ್ರೆಗಳು ಕೈಚೆಲ್ಲುತ್ತವೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿದರು. ಎಂಐಒ ಆಸ್ಪತ್ರೆ ನಿರ್ದೇಶಕ ಡಾ.ಸುರೇಶ್ ರಾವ್, ಟ್ರಸ್ಟಿ ಡಾ.ರೋಹನ್ ಚಂದ್ರ ಕಟ್ಟಿ, ಪ್ರಮುಖರಾದ ಅನಿತಾ ನಾಗರಾಜ್, ರವಿರಾಜ್ ವೈದ್ಯ, ವಿಜೇಂದ್ರ ರಾವ್, ಟಿ.ಕೆ.ರಮೇಶ್ ಶೆಟ್ಟಿ, ಪ್ರತಿಮಾ ಎಸ್. ರಾವ್, ಡಾ.ಜ್ಯೋತಿ, ಡಾ.ಸುಹಾಸ್ ವಿ. ನಾವಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-42-1021916693

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.