ರಾಜ್ಯ, ದೇಶ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಟಾಪ್ 10 ಸುದ್ದಿಗಳು ಇಲ್ಲಿವೆ...

ಇರಾನ್ ಬಂದರುಗಳಿಂದ ಹೊರಡುವ ಮತ್ತು ಲಂಗರು ಹಾಕುವ ಯಾವುದೇ ಹಡಗನ್ನು ಮುಳುಗಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಚೀನಾ, ಇರಾನ್ ಬಂದರುಗಳ ಸುತ್ತ ಅಮೆರಿಕದ ನಿರ್ಬಂಧವು ಅಪಾಯಕಾರಿ ಮತ್ತು ಬೇಜವಾಬ್ದಾರಿ ವರ್ತನೆ ಎಂದು ಹೇಳಿದೆ.
.ಇರಾನ್ ಬಂದರುಗಳಿಗೆ ಅಮೆರಿಕದ ನಿರ್ಬಂಧ ಅಪಾಯಕಾರಿ, ಬೇಜವಾಬ್ದಾರಿ ನಡೆ; ಚೀನಾ ಕಿಡಿ.
ಸೌರಶಕ್ತಿ ಮಾರುಕಟ್ಟೆ ವಿಚಾರದಲ್ಲಿ ಭಾರತವು ಇದೀಗ ಮಹತ್ವದ ದಾಪುಗಾಲು ಇಟ್ಟಿದ್ದು, ಇದೇ ವರ್ಷ ಭಾರತ ವಿಶ್ವದ ಎರಡನೇ ಅತಿದೊಡ್ಡ ಸೌರಶಕ್ತಿ ಮಾರುಕಟ್ಟೆಯಾಗಿ ಬೆಳೆದಿದೆ.
.ಭಾರತ ಇದೀಗ ವಿಶ್ವದ ಎರಡನೇ ದೊಡ್ಡ ಸೌರಶಕ್ತಿ ಮಾರುಕಟ್ಟೆಯಾಗಿ ದಾಪುಗಾಲು.
ಪಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಟ್ನಾದ ಲೋಕ ಭವನಕ್ಕೆ ಆಗಮಿಸಿದ ಅವರು ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸಿದ ಬಳಿಕ ನಿತೀಶ್ ಕುಮಾರ್ ಎಕ್ಸ್ ಖಾತೆಯಲ್ಲಿ ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
.ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ನಿತೀಶ್ ಕುಮಾರ್ ಭಾವುಕ ಪೋಸ್ಟ್.
ಪಟ್ನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಚೌಧರಿ ಅವರು ಬಿಹಾರವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಸದಾ ಬದ್ಧರಿರುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.
.ಬಿಹಾರವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಬದ್ಧ: ಸಾಮ್ರಾಟ್ ಚೌಧರಿ.
ಪಟ್ನಾ: ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ ನೂತನ ಸಿಎಂ ಆಗಿ ಸಾಮ್ರಾಟ್ ಚೌಧರಿ ಅವರು ಆಯ್ಕೆಯಾಗಿದ್ದಾರೆ.
.ನಿತೀಶ್ ಕುಮಾರ್ ರಾಜೀನಾಮೆ, ಬಿಹಾರದ ನೂತನ ಸಿಎಂ ಆಗಿ ಸಾಮ್ರಾಟ್ ಚೌಧರಿ ಆಯ್ಕೆ.
ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇರಾನ್ ಮತ್ತು ಅಮೆರಿಕ ಇದೀಗ 2ನೇ ಸುತ್ತಿನ ಮಾತುಕತೆಗೆ ಸಿದ್ಧವಾಗಿದ್ದು, ಹೀಗಾಗಿ ಈ ವಾರದ ಅಂತ್ಯದೊಳಗೆ ಅಮೆರಿಕ ಮತ್ತು ಇರಾನ್ ಇಸ್ಲಾಮಾಬಾದ್ಗೆ ಮರಳಬಹುದು ಎಂದು ಮೂಲಗಳು ತಿಳಿಸಿವೆ.
.ಅಮೆರಿಕ–ಇರಾನ್ ಮಧ್ಯೆ ಶೀಘ್ರ 2ನೇ ಹಂತದ ಮಾತುಕತೆ?.
ಬೆಂಗಳೂರು: ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ವಜಾಗೊಳಿಸಲಾಗಿದೆ.
.ಸಿ.ಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ .
ಮುಂಬೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಮಿತಿಮೀರಿ ಮಾದಕ ದ್ರವ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
.ಮುಂಬೈ: ಮಿತಿಮೀರಿ ಡ್ರಗ್ಸ್ ಸೇವಿಸಿ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಸಾವು.
ಲಖನೌ: ವೇತನ ಹೆಚ್ಚಳ ಹಾಗೂ ಇತರೆ ಸೌಲಭ್ಯಗಳಿಗೆ ಆಗ್ರಹಿಸಿ ಹಲವು ಖಾಸಗಿ ಕಂಪನಿಗಳ ಕಾರ್ಮಿಕರು ನೊಯ್ಡಾದ ಕೈಗಾರಿಕಾ ಪ್ರದೇಶದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಮಂಗಳವಾರವೂ ಮುಂದುವರೆದಿದೆ.
.ನೊಯ್ಡಾದಲ್ಲಿ ಮುಂದುವರೆದ ಪ್ರತಿಭಟನೆ: ಪೊಲೀಸ್ ಸರ್ಪಗಾವಲಿನ ನಡುವೆ ಕಲ್ಲು ತೂರಾಟ.
ವಿಶ್ವಸಂಸ್ಥೆ: ಯಾವುದೇ ಒಪ್ಪಂದಗಳು ಕೂಡ ರಾತ್ರೋರಾತ್ರಿ ಆಗುವುದಿಲ್ಲ, ಅದಕ್ಕೆ ಸಮಯ ಬೇಕಾಗುತ್ತದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನವು ಯಶಸ್ವಿಯಾಗುವ ವಿಶ್ವಾಸವಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಹೇಳಿದ್ದಾರೆ.
.Iran war| ಒಪ್ಪಂದಗಳು ರಾತ್ರೋರಾತ್ರಿ ಆಗುವುದಿಲ್ಲ; ಸಮಯ ಬೇಕಾಗುತ್ತದೆ: ಗುಟೆರಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.