l ತುಳು, ರಾಜ್ಯದ ಅಧಿಕೃತ ಭಾಷೆ ಆಗಬೇಕು ಏಕೆ?

ಪ್ರೊ.ಬಿ.ಶಿವರಾಮ ಶೆಟ್ಟಿ: ಯಾವುದೇ ರಾಜ್ಯವು ಒಂದಕ್ಕಿಂತ ಹೆಚ್ಚು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾನ್ಯ ಮಾಡಲು ಸಂವಿಧಾನದ 345ನೇ ಅನುಚ್ಚೇದ ಅವಕಾಶ ಕಲ್ಪಿಸುತ್ತದೆ. ಈಗಾಗಲೇ ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಅಧಿಕೃತ ಭಾಷೆಯಾಗಿ ಮಾನ್ಯಲಾಗಿದೆ.

ತುಳು ನಿರ್ದಿಷ್ಟ ಜಾತಿ ಅಥವಾ ಧಾರ್ಮಿಕ ಸಮುದಾಯದ ಭಾಷೆ ಅಲ್ಲ. ಅದೊಂದು ನಾಡ ನುಡಿ. ಪ್ರಜಾಪ್ರಭುತ್ವದಲ್ಲಿ ಆಡಳಿತ ಜನರ ಆಶಯಕ್ಕೆ ಪೂರಕವಾಗಿರಬೇಕು. ನಾವು ಕನ್ನಡ ಕಲಿತದ್ದು ಶಾಲೆಗೆ ಹೋಗಿ. ಇಲ್ಲಿ ಬಹುತೇಕರ ಮನೆ ಭಾಷೆ ತುಳು. ಬ್ಯಾರಿ, ಕೊಂಕಣಿ, ಹವ್ಯಕ, ಗೌಡ ಕನ್ನಡ ಸಮುದಾಯದವರು ಮನೆಯಲ್ಲಿ ಅವರ ಭಾಷೆ ಮಾತನಾಡಿದರೂ ಸಂಪರ್ಕ ಭಾಷೆಯಾಗಿ ವ್ಯಾವಹಾರಿಕ ಭಾಷೆಯಾಗಿ ತುಳು ಬಳಸುತ್ತಾರೆ. ಹಾಗಾಗಿ ಇದು ಜಾತ್ಯತೀತ ಭಾಷೆ. ಸೌಹಾರ್ದದ ಜನ ನುಡಿ. ಎಲ್ಲರನ್ನು ಒಳಗೊಳ್ಳುವ, ಧರ್ಮ ನಿರಪೇಕ್ಷವಾದ ಭಾಷೆಯಾದ ತುಳು, ರಾಜ್ಯವನ್ನು, ಭಾರತವನ್ನು ಪ್ರತಿನಿಧಿಸಬಲ್ಲದು. ದೇಶದ ಬಹುತ್ವವನ್ನು ಎತ್ತಿಹಿಡಿಯಬಲ್ಲದು.

l ತುಳುವನ್ನು ಅಧಿಕೃತ ಭಾಷೆಯನ್ನಾಗಿಸುವ ನೆಲೆಯಲ್ಲಿ ಆಗಿರುವ ತಯಾರಿಗಳೇನು?

ತಾರಾನಾಥ ಗಟ್ಟಿ ಕಾಪಿಕಾಡ್: ತುಳುನಾಡಿನ ಯು.ಟಿ.ಖಾದರ್ ಅವರೇ ವಿಧಾನಸಭಾಧ್ಯಕ್ಷರಾದ ಬಳಿಕ ವಿಧಾನಸಭೆಯಲ್ಲಿ ಚರ್ಚೆ ವೇಳೆ ಶಾಸಕರು ತುಳುವಿನಲ್ಲೇ ಮಾತನಾಡಲು ಅವಕಾಶ ಸಿಕ್ಕಿದೆ. ಶಾಸಕರು ಪಕ್ಷ ಭೇದ ಮರೆತು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಡಾ.ಎಂ. ಮೋಹನ ಆಳ್ವ ನೇತೃತ್ವದ ಸಮಿತಿ ಈ ಕುರಿತು ವರದಿ ಸಲ್ಲಿಸಿದೆ. ಆಂಧ್ರ ಪ್ರದೇಶದಲ್ಲಿ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಜಾರಿಗೊಳಿಸಿದ ಬಗ್ಗೆ ಅಧ್ಯಯನ ಕೈಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಗಾಯತ್ರಿ ನೇತೃತ್ವದಲ್ಲಿ ಸಮಿತಿ ಈ ಬಗ್ಗೆ ವರದಿ ಸಲ್ಲಿಸಿದೆ. ಆಂಧ್ರದಲ್ಲಿ ಉರ್ದು ಅಧಿಕೃತ ಭಾಷೆಯಾದ ಬಳಿಕ ತೆಲುಗರಿಗೆ ಯಾವ ನಷ್ಟವೂ ಆಗಿಲ್ಲ. ತುಳು ಅಧಿಕೃತ ಭಾಷೆಯಾದರೂ ಕನ್ನಡಕ್ಕೆ ಯಾವುದೇ ಆತಂಕ ಇಲ್ಲ.

l ತುಳುವಿಗೆ ಅಧಿಕೃತ ಭಾಷೆ ಸ್ಥಾನಮಾನ ಸಿಕ್ಕರೆ ಏನೆಲ್ಲ ಅನುಕೂಲಗಳು ಆಗಲಿವೆ?

ತಾರಾನಾಥ ಗಟ್ಟಿ: ಸರ್ಕಾರದ ಅಧಿಕೃತ ಭಾಷೆಯ ಮುದ್ರೆ ಬಿದ್ದಾಗ ಖಂಡಿತಾ ಭಾಷೆಯ ಬಗ್ಗೆ ಧೈರ್ಯದಿಂದ ಹೇಳಿಕೊಳ್ಳುವ ಗೌರವಯುತ ವಾತಾವರಣ ಸೃಷ್ಟಿಯಾಗುತ್ತದೆ. ಹಿಂದೆಲ್ಲ ಶಾಲೆಯಲ್ಲಿ ತುಳು ಮಾತನಾಡಿದರೆ ಶಿಕ್ಷೆ ಕೊಡುತ್ತಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾದ ಬಳಿಕ ಅದು ನಿಂತಿದೆ. ಶಾಲಾ ಕಾಲೇಜುಗಳಲ್ಲಿ ತುಳು ಸಂಘಗಳು ಹುಟ್ಟಿಕೊಂಡಿವೆ. ಅಕಾಡೆಮಿಯು 300ಕ್ಕೂ ಹೆಚ್ಚು ಕೃತಿಗಳನ್ನು ತುಳುವಿನಲ್ಲಿ ಪ್ರಕಟಿಸಿದೆ. ವಿಶ್ವವಿದ್ಯಾಲಯದಲ್ಲಿ ತುಳು ಎಂ.ಎ. ಕೋರ್ಸ್ಗಳು ಆರಂಭವಾಗಿವೆ. ತುಳು ಕುರಿತ ಸಂಶೋಧನೆ ಹೆಚ್ಚಿದೆ. ಶಾಲೆಯಲ್ಲಿ ಭಾಷೆಯಾಗಿ ತುಳು ಕಲಿಕೆ ಆರಂಭವಾಗಿದೆ. ತುಳುವಿಗೆ ಉನ್ನತ ಶಿಕ್ಷಣವರೆಗೂ ಶೈಕ್ಷಣಿಕ ಅವಕಾಶಗಳು ಸಿಕ್ಕಿವ. ಇದು ಇನ್ನಷ್ಟು ಹೆಚ್ಚಲಿದೆ.

l ಸಾಂಸ್ಕೃತಿಕವಾಗಿ ಶ್ರೀಮಂತವಾದ ತುಳುವನ್ನು ಕಾಲಮಾನದ ಅಗತ್ಯಕ್ಕೆ ತಕ್ಕಂತೆ ಬೆಳೆಸಲು ಅಧಿಕೃತ ಭಾಷೆಯ ಸ್ಥಾನ ಹೇಗೆ ನೆರವಾಗಬಲ್ಲದು?.

ಶಿವರಾಮ ಶೆಟ್ಟಿ: ಇದುವರೆಗೆ ತುಳುವಿನ ಕುರಿತು ಬಿಡಿಯಾಗಿ ಅಧ್ಯಯನ ನಡೆದಿದೆ. ಇಲ್ಲಿನ ನಾಗಾರಾಧನೆ, ದೈವಾರಾಧನೆ, ಯಕ್ಷಗಾನ.. ಅವುಗಳಲ್ಲಿನ ಆಂಗಿಕ ಚಲನೆ, ವೇಷಭೂಷಣ ಎಲ್ಲದರಲ್ಲೂ ಸಾಮ್ಯತೆ ಇದೆ. ಮನುಷ್ಯ ಸತ್ತ ಮೇಲೆ ಸ್ವರ್ಗ ಅಥವಾ ನರಕಕ್ಕೆ ಹೋಗುವ ಕಲ್ಪನೆ ತುಳುವರಲ್ಲಿಲ್ಲ. ಸತ್ತವರನ್ನು ಮನೆ ಒಳಗೆ ಕರೆಸಿಕೊಳ್ಳುವ ಸಂಪ್ರದಾಯ ತುಳುವರದು. ನಿಸರ್ಗಕ್ಕೆ ಹತ್ತಿರವಾದ ಇಲ್ಲಿನ ಸಂಸ್ಕೃತಿಯಲ್ಲೇ ಸಹಬಾಳ್ವೆ ಇದೆ. ರಾಜಕೀಯ, ಅಸಮಾನತೆಗಳೆಲ್ಲವನ್ನು ಮೀರಿ ಎಲ್ಲವನ್ನು ಒಳಗೊಳ್ಳುವ ಸಂಸ್ಕೃತಿ ತುಳುವಿನದು. ತುಳುವಿನ ಸೌಹಾರ್ದ, ಸಹಬಾಳ್ವೆ, ವೈವಿಧ್ಯ, ಸಮೃದ್ಧತೆ ಪಸರಿಸಲು ಅವಕಾಶ ಹೆಚ್ಚಲಿದೆ. ಗ್ರಾಮ ಸಭೆ, ಜಿಲ್ಲಾ ಪಂಚಾಯಿತಿ ಸಭೆ ತುಳುವಿನಲ್ಲೇ ನಡೆಯಬಹುದು. ನ್ಯಾಯಾಲಯದಲ್ಲಿ, ಶಿಕ್ಷಣದಲ್ಲಿ ಮಾಧ್ಯಮವಾಗಿ ತುಳು ಬರಬಹುದು.

l ಸಂವಿಧಾನದ 8ನೇ ಪರಿಚ್ಚೇದಕ್ಕೆ ತುಳು ಸೇರ್ಪಡೆ ಇನ್ನೂ ಆಗಿಲ್ಲ ಏಕೆ?

ತಾರಾನಾಥ ಗಟ್ಟಿ: ರಾಜ್ಯ ಸರ್ಕಾರ 2001ರಲ್ಲೇ ಕೇಂದ್ರದ ಮುಂದೆ ಈ ಬೇಡಿಕೆಯನ್ನು ಇಟ್ಟಿತು. 2003ರಲ್ಲಿ ಬೇಡಿಕೆ ಮತ್ತಷ್ಟು ಗಟ್ಟಿಯಾಯಿತು. ನವದೆಹಲಿಯಲ್ಲಿ ತುಳುವರು ‘ತುಳು ಸಿರಿ’ ಸಮ್ಮೇಳನ ಹಮ್ಮಿಕೊಂಡರು. ತುಳುವರೇ ಆದ ಆಗಿನ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ನೇತೃತ್ವದಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಸಂಸತ್ ಅಧಿವೇಶನದಲ್ಲಿ ಆಗಿನ ಗೃಹ ಸಚಿವ ಎಲ್.ಕೆ.ಅಡ್ವಾಣಿ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಭರವಸೆ ನೀಡಿದ್ದರು. ಡೋಗ್ರಿ ಮೈಥಿಲಿ ಸೇರಿ ನಾಲ್ಕು ಭಾಷೆಗಳಿಗೆ 8ನೇ ಪರಿಚ್ಚೇದದಲ್ಲಿ ಸ್ಥಾನ ಸಿಕ್ಕರೂ ತುಳು ಸೇರಲಿಲ್ಲ. ಏಕೆಂಬುದು ಇನ್ನೂ ನಿಗೂಢ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-29-314157059

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.