ತುಮಕೂರು: ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಪಕ್ಷದ ಮಹಿಳಾ ಘಟಕದ ಪ್ರಮುಖರು ಒತ್ತಾಯಿಸಿದ್ದಾರೆ.

ನಗರದ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಮಂಗಳವಾರ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಹಿಳಾ ಕಾರ್ಯಕರ್ತರಿಂದ ಈ ಬೇಡಿಕೆ ವ್ಯಕ್ತವಾಯಿತು.

ಇತ್ತೀಚೆಗೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಸುಮತಿ ಅವರನ್ನು ನೇಮಕ ಮಾಡಲಾಗಿದೆ. ಅವರು ಯಾರು ಎಂಬುದು ಜಿಲ್ಲೆಯ ಬಹುತೇಕರಿಗೆ ಗೊತ್ತಿಲ್ಲ. ತುಮಕೂರು ಲೋಕಸಭಾ ಕ್ಷೇತ್ರದವರಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ನಿವಾಸಿ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಗಮನಕ್ಕೂ ತಂದಿಲ್ಲ ಎಂದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರು ನೇರವಾಗಿ ನೇಮಕಾತಿ ಪತ್ರ ವಿತರಿಸಿದ್ದಾರೆ. ನೇಮಕಾತಿ ತಡೆಹಿಡಿಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸೂಚಿಸಿದ್ದರೂ ಅದಕ್ಕೂ ಬೆಲೆ ಕೊಟ್ಟಿಲ್ಲ. ತಕ್ಷಣ ಅಧ್ಯಕ್ಷರನ್ನು ಬದಲಾಣೆ ಮಾಡಬೇಕು. ತುಮಕೂರು ಕ್ಷೇತ್ರದವರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರ್ಗೌಡ ಮಾತನಾಡಿ, ‘ಇಂದು ವಿಶ್ವ ಸಂಸ್ಥೆಯಿಂದ ಅಂಬೇಡ್ಕರ್ ಜಯಂತಿಯನ್ನು ಜ್ಞಾನದ ಸಂಕೇತವಾಗಿ ಆಚರಿಸುತ್ತಿರುವುದು ಇಡೀ ಭಾರತೀಯರು ಹೆಮ್ಮೆ ಪಡುವಂತಹ ವಿಚಾರ’ ಎಂದು ಹೇಳಿದರು.

ಮಾಜಿ ಶಾಸಕ ಎಸ್.ಷಪಿಅಹಮದ್, ‘ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಸ್ವಾಯತ್ತ ಸಂಸ್ಥೆಗಳನ್ನು ಮನ ಬಂದಂತೆ ಬಳಕೆ ಮಾಡಿಕೊಂಡು ಸಂವಿಧಾನದ ಆಶಯಗಳನ್ನೇ ಮಣ್ಣು ಪಾಲು ಮಾಡಲು ಹೊರಟಿದೆ’ ಎಂದು ಆರೋಪಿಸಿದರು.

ರಾಜ್ಯ ಮಟ್ಟದ ಬಾಬೂ ಜಗಜೀವನ್ರಾಮ್ ಪ್ರಶಸ್ತಿ ಪುರಸ್ಕೃತ ನರಸೀಯಪ್ಪ, ಜಿಲ್ಲಾ ಮಟ್ಟದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಇಕ್ಬಾಲ್ ಅಹಮದ್ ಅವರನ್ನು ಗೌರವಿಸಲಾಯಿತು.

ಮುಖಂಡರಾದ ಆರ್.ರಾಮಕೃಷ್ಣ, ಜಿ.ಎಚ್.ಷಣ್ಮುಗಪ್ಪ, ಮಹೇಶ್, ಫಯಾಜ್, ಪ್ರಸನ್ನ ಕುಮಾರ್, ಶಿವಾಜಿ, ಜಯಮೂರ್ತಿ, ನಿಂಗರಾಜು, ಕುಮಾರಸ್ವಾಮಿ, ಅನಿಕುಮಾರ್, ಶ್ರೀನಿವಾಸ ಕುಮಾರ್, ಸಂಜೀವ ಕುಮಾರ್, ಅಂಬರೀಷ್, ಇರ್ಫಾನ್ ಅಹಮದ್, ನಯಾಜ್ ಅಹಮದ್, ಮೆಹಬೂಬ್ ಪಾಷ, ಗುರುಪ್ರಸಾದ್, ನಾಗಮಣಿ, ವಿಜಯಲಕ್ಷ್ಮಿ, ಸುವರ್ಣಮ್ಮ, ಸುಜಾತ, ಸೈಯದ್ ದಾದಾಪೀರ್, ಸಿದ್ದಲಿಂಗೇಗೌಡ, ತರುಣೇಶ್, ಪಂಚಾಕ್ಷರಯ್ಯ, ಲಕ್ಷ್ಮಣಯ್ಯ, ಮಂಜುನಾಥ್, ರೇವಣ್ಣಸಿದ್ದಯ್ಯ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-17-52779159

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.