ತುಮಕೂರು: ‘ತುಮಕೂರು ದಸರಾ’ ಆಚರಣೆಗೆ ಮುಖ್ಯ ವೇದಿಕೆ ಸೇರಿ ಇತರೆ ವೇದಿಕೆ ಸಿದ್ಧಪಡಿಸಿದ್ದ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ‘ರಾಜ್ ಇವೆಂಟ್ಸ್’ಗೆ ಜಿಲ್ಲಾ ಆಡಳಿತ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದೆ.

2024 ಮತ್ತು 2025ರಲ್ಲಿ ಸರ್ಕಾರದಿಂದಲೇ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವಿಜೃಂಭಣೆಯಿಂದ ದಸರಾ ಆಚರಿಸಲಾಯಿತು. ಮೈಸೂರು ದಸರಾ ಮಾದರಿಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 10ಕ್ಕೂ ಹೆಚ್ಚು ದಿನ ಹಲವು ಕಾರ್ಯಕ್ರಮ ನಡೆಸಲಾಯಿತು. ದಸರಾ ಯಶಸ್ವಿಗೆ ಹಗಲಿರುಳು ಶ್ರಮಿಸಿದ ಸಂಸ್ಥೆಗೆ ಎರಡು ವರ್ಷ ಕಳೆದರೂ ಸಂಪೂರ್ಣ ಹಣ ಕೊಟ್ಟಿಲ್ಲ.

2023–24ನೇ ಸಾಲಿನಲ್ಲಿ ನಡೆದ ದಸರಾ ತಯಾರಿಗೆ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯಿಂದ ₹2.49 ಕೋಟಿ ಖರ್ಚು ಮಾಡಲಾಗಿದೆ. ಜಿಲ್ಲಾ ಆಡಳಿತ ಮುಂಗಡ ಹಣವಾಗಿ ₹1,23,65,935 ಬಿಡುಗಡೆ ಮಾಡಿತ್ತು. ಬಾಕಿ ಹಣ ₹1,25,34,065 ಇದುವರೆಗೆ ಸಂದಾಯವಾಗಿಲ್ಲ. ‘ಹಣ ಬಿಡುಗಡೆ ಮಾಡುತ್ತೇವೆ, 2025ರಲ್ಲಿ ದಸರಾ ಹಬ್ಬಕ್ಕೆ ತಯಾರಿ ನಡೆಸಿ’ ಎಂದು ಅಧಿಕಾರಿಗಳು ಖಾಸಗಿ ಸಂಸ್ಥೆಗೆ ಭರವಸೆ ನೀಡಿದ್ದರು.

2025–26ನೇ ಸಾಲಿನಲ್ಲಿ ‘ರಾಜ್ ಇವೆಂಟ್ಸ್’ ಸಂಸ್ಥೆ ₹3,28,62,466 ವ್ಯಯಿಸಿದೆ. ಜಿಲ್ಲಾ ಆಡಳಿತ ₹1,99,86,726 ಪಾವತಿಸಿದ್ದು, 1,28,75,740 ಬಾಕಿ ಉಳಿಸಿಕೊಳ್ಳಲಾಗಿದೆ. 2024, 2025 ಎರಡು ವರ್ಷದ ₹3,25,20,791 ಸಂಸ್ಥೆಗೆ ಜಮಾ ಆಗಬೇಕಿದೆ. 2025ರಲ್ಲಿ ಮುಖ್ಯ ವೇದಿಕೆ ಸಿದ್ಧಪಡಿಸಲು ₹78.54 ಲಕ್ಷ ವೆಚ್ಚವಾಗಿದೆ. ದೇವಸ್ಥಾನದ ಮಾದರಿ ತಯಾರಿಗೆ ₹28.60 ಲಕ್ಷ, ಫಲ ಪುಷ್ಪ ಪ್ರದರ್ಶನಕ್ಕೆ ₹21.36 ಲಕ್ಷ ವ್ಯಯಿಸಲಾಗಿದೆ.

ಆಹಾರ ಮಳಿಗೆ, ಯುವ ದಸರಾ, ಮುಖ್ಯ ವೇದಿಕೆ, ವಸ್ತು ಪ್ರದರ್ಶನ, ದೇವಸ್ಥಾನದ ಮಾದರಿ ತಯಾರಿ, ಫಲಪುಷ್ಪ ಪ್ರದರ್ಶನ, ಟೌನ್ಹಾಲ್ ಬಳಿ ಜಂಬೂ ಸವಾರಿ ದಿನದ ವೇದಿಕೆ ಸಿದ್ಧತೆ, ದಾಂಡಿಯ ನೃತ್ಯದ ವೇದಿಕೆ, ಆಟೊ ರ್ಯಾಲಿ ವೇದಿಕೆ, ಇತರೆ ಕೆಲಸಗಳನ್ನು ಇವೆಂಟ್ಸ್ ಸಂಸ್ಥೆಯಿಂದ ಮಾಡಿಸಲಾಗಿತ್ತು. ಇವು ದಸರಾ ಸಂಭ್ರಮದ ಕಳೆ ಹೆಚ್ಚಿಸಿದ್ದವು.

ಕಳೆದ ಎರಡು ವರ್ಷಗಳ ಬಾಕಿ ಹಣ ಬಿಡುಗಡೆ ಮಾಡುವಂತೆ ಈವೆಂಟ್ ಸಂಸ್ಥೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಅಲೆಯುತ್ತಿದ್ದಾರೆ. ಅಧಿಕಾರಿಗಳು ಅವರನ್ನು ಇಂದು, ನಾಳೆ ಎಂದು ವಾಪಸ್ ಕಳುಹಿಸುತ್ತಿದ್ದಾರೆ. ಕುಟುಂಬ ನಿರ್ವಹಣೆಗಾಗಿ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲು ಆಗದೆ ಪರದಾಡುತ್ತಿದ್ದಾರೆ.

‘ಕಾರ್ಯಕ್ರಮದ ಸಿದ್ಧತೆಗೆ ಬಂದಿದ್ದ ಕೂಲಿ ಕಾರ್ಮಿಕರು ಹಣ ಪಾವತಿಸುವಂತೆ ಮನೆ ಹತ್ತಿರ ಬರುತ್ತಿದ್ದಾರೆ. ಕೆಲಸ ಮಾಡಿದ ನಂತರ ಕೂಲಿ ಕೊಡಲು ಆಗದಷ್ಟು ಅಸಹಾಯಕರಾಗಿದ್ದೇವೆ. ಮನೆಯಲ್ಲಿದ್ದ ಚಿನ್ನಾಭರಣ ಅಡವಿಟ್ಟು, ಬೀದಿಗೆ ಬಂದಿದ್ದೇವೆ’ ಎಂದು ರಾಜ್ ಇವೆಂಟ್ಸ್ ಸಂಸ್ಥೆ ಮಾಲೀಕ ಸಿದ್ದರಾಜು ಪ್ರತಿಕ್ರಿಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-17-518608059

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.