ತುಮಕೂರು: ಹಿಂದೂ ಧರ್ಮ ಬದಲಾವಣೆ ಆಗಬೇಕು. ಜಾತಿ ವ್ಯವಸ್ಥೆ ಹೋಗುವ ತನಕ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸಲಹೆ ಮಾಡಿದರು.

ನಗರದಲ್ಲಿ ಮಂಗಳವಾರ ಜಿಲ್ಲಾ ಆಡಳಿತ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್ರಾಮ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಇಳಿ ವಯಸ್ಸಿನಲ್ಲಿ ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮ ಸೇರ್ಪಡೆಯಾದರು. ಹಿಂದೂ ಧರ್ಮದಲ್ಲಿ ಬದಲಾವಣೆ ತರಲು ಶ್ರಮಿಸಿದರು. ಕೊನೆಗೆ ಅವರು ಬೌದ್ಧ ಧರ್ಮ ಸೇರಿದರು. ಬುದ್ಧನ ತತ್ವ ಅಳವಡಿಸಿಕೊಂಡು ಎಲ್ಲರು ಸಮಾನರಾಗಿ ಬಾಳಬೇಕು ಎಂಬ ಸಂದೇಶ ಸಾರಿದರು. ಪ್ರತಿಯೊಬ್ಬರಲ್ಲೂ ನಾವೆಲ್ಲ ಒಂದೇ, ಸಹೋದರರು ಎಂಬ ಭಾವನೆ ಬರುವ ತನಕ ರಾಷ್ಟ್ರದ ಪ್ರಗತಿ ಆಗುವುದಿಲ್ಲ ಎಂದು ಪ್ರತಿಪಾದಿಸಿದರು.

ಅಸಮಾನತೆ ಕೂಗು 5 ಸಾವಿರ ವರ್ಷಗಳ ಹಳೆಯದು. ಮನುಷ್ಯ- ಮನುಷ್ಯರ ಮಧ್ಯೆ ಕಂದಕ, ಅಸಮಾನತೆ, ಮೇಲು-ಕೀಳು ಎಂಬ ಭಾವನೆ ಸೃಷ್ಟಿಸಿ, ಸಮಾಜವನ್ನು ಒಡೆದ ಇತಿಹಾಸ ಪ್ರಪಂಚದ ಬೇರೆ ಯಾವುದೇ ರಾಷ್ಟ್ರಕ್ಕೆ ಇಲ್ಲ. ದುರ್ದೈವದ ಸಂಗತಿ ಭಾರತದಲ್ಲಿ ಅದು ನಡೆದು ಹೋಗಿದೆ ಎಂದು ವಿಷಾದಿಸಿದರು.

ಹುಟ್ಟಿನಿಂದ ಸಾಯುವ ತನಕ ಅಸಮಾನತೆ ಅನುಭವಿಸಿದ ಅಂಬೇಡ್ಕರ್ ಅವರು ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದರು. ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕು ಕೊಟ್ಟರು. ಕರ್ತವ್ಯ ಜ್ಞಾಪಕ ಮಾಡಿದರು. ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಲು ಸಂವಿಧಾನ ಮುಖ್ಯ ಕಾರಣ. ಪ್ರಸ್ತುತ ದೇಶದ ಆರ್ಥಿಕತೆ ಬದಲಾವಣೆ ಆಗಿದೆ. ಅದಕ್ಕೆ ಮೂಲ ಅಡಿಪಾಯ ಹಾಕಿದವರು ಅಂಬೇಡ್ಕರ್ ಎಂದು ಬಣ್ಣಿಸಿದರು.

ಬಾಬೂಜಿ ರಕ್ಷಣಾ ಸಚಿವರಾಗಿ, ಕೃಷಿ ಮಂತ್ರಿಯಾಗಿ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿದರು. ಹಸಿರು ಕ್ರಾಂತಿಯಿಂದ ಆಹಾರದಲ್ಲಿ ಸ್ವಾವಲಂಬಿ ಸಾಧಿಸಲು ಸಾಧ್ಯವಾಯಿತು. ಅದಕ್ಕೆ ಬಾಬೂಜಿ ಮೂಲ ಕಾರಣ ಎಂದು ಸ್ಮರಿಸಿದರು.

ಲೇಖಕ ಪ್ರೊ.ಮೋಹನ್ ಚಂದ್ರಗುತ್ತಿ ವಿಶೇಷ ಉಪನ್ಯಾಸ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಜಿ.ಚಂದ್ರಶೇಖರ್ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ, ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಸೋನಿಯಾ ವರ್ಣೇಕರ್ ಮೊದಲಾದವರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-17-1033533876

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.