ತುರುವೇಕೆರೆ: ‘ಎಚ್.ಡಿ. ದೇವೇಗೌಡ ಬದುಕಿದ್ದಾಗಲೇ ರಾಜ್ಯದಲ್ಲಿ ರೈತಪರ ಸರ್ಕಾರ ತರಬೇಕು ಎಂದು ಬಯಸಿದ್ದೇನೆ. ಅದಕ್ಕೆ ನೀವು ಶಕ್ತಿ ತುಂಬಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ಮಾಯಸಂದ್ರ ಹೋಬಳಿ ಟಿ.ಕ್ರಾಸ್ ಸಮೀಪದ ಕೋಡಿನಾಗಸಂದ್ರ ವಿನಾಯಕ ಮಾರುತಿ ದೇವಾಲಯದ ವಿಗ್ರಹ ಪ್ರತಿಷ್ಠಾಪನೆ ವಿಮಾನಗೋಪುರ ಕಳಸ ಸ್ಥಾಪನೆ ಮತ್ತು ಮಾರುತಿ ಸ್ವಾಮಿ 31 ಅಡಿ ಎತ್ತರದ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಜೆಡಿಎಸ್ ಬಗ್ಗೆ ಯಾವುದೇ ಗೋಂದಲ ಬೇಡ. 25 ವರ್ಷಗಳಿಂದ ಎಂ.ಟಿ.ಕಷ್ಣಪ್ಪ ಈ ಕ್ಷೇತ್ರದಲ್ಲಿ ದುಡಿದಿರುವ ಬಗ್ಗೆ ಅರಿವಿವೆ ಎಂದರು.

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಜನ ಕಷ್ಟದ ಸಂದರ್ಭಗಳಲ್ಲಿ ಜೆಡಿಎಸ್ ಪಕ್ಷವನ್ನು ಕೈಹಿಡಿದಿದ್ದಾರೆ. ಇಲ್ಲಿನ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಪಕ್ಷದ ಮೇಲಿನ ನಿಯತ್ತನ್ನು ನೋಡಿದ್ದೇನೆ. ಆದ್ದರಿಂದ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಗೆ ಅವಕಾಶ ಇಲ್ಲ. ಟಿಕೆಟ್ ಬಗ್ಗೆಯೂ ಕಾರ್ಯಕರ್ತರಿಗೆ ಗೊಂದಲ ಬೇಡ ಎಂದರು.

‘ಚುನಾವಣಾ ಪ್ರಚಾರದ ವೇಳೆಯೇ ತುರುವೇಕೆರೆ ಕ್ಷೇತ್ರದ ಪರಿಚಯವಿದೆ. ಎಚ್.ಡಿ. ದೇವೇಗೌಡರ ಮತ್ತು ಎಚ್.ಡಿ.ಕುಮಾರ ಸ್ವಾಮಿ ಬಗ್ಗೆ ಇಲ್ಲಿನವರು ಇಟ್ಟುಕೊಂಡಿರುವ ಪ್ರೀತಿ ಅಪಾರ. ಆ ಋಣವನ್ನು ಕೊನೆಯ ಉಸಿರು ಇರುವವರೆಗೂ ತೀರಿಸಲು ಯತ್ನಿಸುವೆ. ನಿಮ್ಮೆಲ್ಲರ ಆಶೀರ್ವಾದದಿಂದ ಐದನೇ ಬಾರಿ ಸಾವನ್ನು ಗೆದ್ದು ಬಂದಿದ್ದು, ನೀವೇ ನನಗೆ ನಿಜವಾದ ದೇವರು’ ಎಂದರು.

ತುಮಕೂರು ಜಿಲ್ಗೆಗೆ 25 ಟಿಎಂಸಿ. ಹೇಮಾವತಿ ನೀರು ದೊರಕಲು ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರು ಕಾರಣ. ಆದರೆ ಹೇಮಾವತಿ ನೀರಿನ ವಿಚಾರವಾಗಿ ದೇವೇಗೌಡರೆ ಜಿಲ್ಲೆಗೆ ಅನ್ಯಾಯ ಎಸಗಿದ್ದಾರೆ ಎಂದು ಅಪಪ್ರಚಾರ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಮಂಡ್ಯ, ತುಮಕೂರು ಜಿಲ್ಲೆ ಯುವಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳ್ಳೂರು ಕ್ರಾಸ್ ಬಳಿ ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಈ ಕಾರ್ಖಾನೆಯಿಂದ ಐಟಿಐ, ಡಿಪ್ಲೊಮಾ ಮಾಡಿದವರಿಗೆ ಅನುಕೂಲವಾಗುತ್ತಿತ್ತು ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಟಿ. ಕೃಷ್ಣಪ್ಪ, ಸುರೇಶ್ ಬಾಬು, ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ನಿಂಗಪ್ಪ, ಶಿರಾ ಕ್ಷೇತ್ರದ ಉಗ್ರೇಶ್, ತುಮುಲ್ ನಿರ್ದೇಶಕ ಮಹಾಲಿಂಗಯ್ಯ ಹಾಗೂ ದೊಡ್ಡಾಘಟ್ಟ ಚಂದ್ರೇಶ್, ಶಂಕರೇಗೌಡ, ರಮೇಶ್ ಗೌಡ, ಸುಬ್ರಮಣಿಶ್ರೀಕಂಠೇಗೌಡ, ರಾಜೀವ್, ವಿನಾಯಕ ಮಾರುತಿ ದೇವಾಲಯ ಸಮಿತಿಯ ಅಧ್ಯಕ್ಷ ಎನ್.ಲೋಕೇಶ್, ಕಾರ್ಯಕರ್ತರು, ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-17-392876406

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.