ಬೆಂಗಳೂರು: ಮುಖ್ಯಮಂತ್ರಿಗೆ ಮೀಸಲಾದ ಆಸನದಲ್ಲಿ ಕುಳಿತುಕೊಳ್ಳಲು ಬಿಜೆಪಿಯ ಉದಯ ಗರುಡಾಚಾರ್ ಮುಂದಾಗುತ್ತಿದ್ದಂತೆ, ಕೈ ಅಡ್ಡ ಇಟ್ಟು ತಡೆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅವರನ್ನು ಪಕ್ಕಕ್ಕೆ ಎಳೆದ ಪ್ರಸಂಗ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.

ಶಿವಕುಮಾರ್ ಜೊತೆ ಮಾತನಾಡಲು ಆಡಳಿತ ಪಕ್ಷದ ಸಾಲಿಗೆ ತೆರಳಿದ ಉದಯ್ ಗರುಡಾಚಾರ್, ಶಿವಕುಮಾರ್ ಅವರ ಎಡಭಾಗದಲ್ಲಿನ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಮುಂದಾದರು. ತಕ್ಷಣ ಎಚ್ಚೆತ್ತ ಶಿವಕುಮಾರ್, ಅವರ ಕೈ ಹಿಡಿದು ತಮ್ಮ ಬಲಭಾಗದಲ್ಲಿದ್ದ ಖಾಲಿ ಆಸನದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು.

ತಮ್ಮ ತಪ್ಪು ಅರಿವಿಗೆ ಬರುತ್ತಿದ್ದಂತೆ ತಲೆ ಚಚ್ಚಿಕೊಂಡ ಉದಯ್ ಗರುಡಾಚಾರ್, ವಿರೋಧ ಪಕ್ಷದ ಸದಸ್ಯರ ಕಡೆಗೆ ನೋಡಿ, ಏನೂ ಮಾತನಾಡಬೇಡಿ ಶ್ಶ್...! ಶ್ಶ್...! ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡು ಸನ್ಹೆ ಮಾಡಿದರು.

ಆದರೂ ಬಿಜೆಪಿಯ ಸುನಿಲ್ ಕುಮಾರ್, ‘ಯಾರೊ ಕೂರಬೇಕು ಎಂದುಕೊಂಡಿರುವ ಕುರ್ಚಿಯಲ್ಲಿ ಹೋಗಿ ನೀವು ಕೂರುತ್ತಿದ್ದೀರಲ್ಲಾ?’ ಎಂದು ಉದಯ್ ಮತ್ತು ಶಿವಕುಮಾರ್ ಇಬ್ಬರನ್ನೂ ಕಿಚಾಯಿಸಿದರು.

ಬಳಿಕ ವಿರೋಧ ಪಕ್ಷದ ಸಾಲಿನತ್ತ ಬಂದ ಉದಯ್ ಗರುಡಾಚಾರ್ ಅವರಿಗೆ ಬುದ್ದಿವಾದ ಹೇಳಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ನೀವು ಆ ಸಾಲಿಗೆ ಹೋಗಿದ್ದೇ ತಪ್ಪು. ಹೋಗಿ ಆ ರೀತಿ ಮಾಡೋದಾ?’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.