ಬ್ರಹ್ಮಾವರ: ತಾಲ್ಕೂಕು ಪಂಚಾಯಿತಿ ಕೆಡಿಪಿ ಸಭೆ ಚಾಂತಾರು ಗ್ರಾಮ ಪಂಚಾ ಯತ್ ಸಭಾಂಗಣದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ ಬುಧವಾರ ಜರಗಿತು. ಜೆಜೆಎಂ, ಶವಪರೀಕ್ಷೆಗೆ ವೈದ್ಯರ ಸಮಸ್ಯೆ, ಅಸಮರ್ಪಕ ಕೆಎಸ್ಆರ್ಟಿಸಿ ಓಡಾಟ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಆರೂರು ಪಂಚಾಯಿತಿಯಲ್ಲಿ ಪರಿಶೀಲನೆ ಆಗದೇ ಪಂಚಾಯಿತಿ ಜೆಜೆಎಮ್ ಹಸ್ತಾಂತರ ಮಾಡಲಾಗಿದೆ. ಇದು ಸರಿಯಲ್ಲ. ಜೆಜೆಎಂ ಉಡುಪಿ ಜಿಲ್ಲೆಗೆ ವಿಫಲ ಯೋಜನೆಯಾಗಿದೆ. ಉತ್ತಮ ಯೋಜನೆಯನ್ನು ಕಳಪೆ ಮಾಡಲಾಗುತ್ತದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಆರೋಪಿಸಿದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಎಷ್ಟೋ ಕಡೆ ಪೈಪ್ಲೈನ್ ಆಗಿದೆ ಆದರೆ ನೀರು ಬಂದಿಲ್ಲ. ವಾರಾಹಿಯೋಜನೆಯಲ್ಲಿ ಕೆಲವು ಕಡೆಗಳಲ್ಲಿ ಅರಣ್ಯ ಇಲಾಖೆಯಿಂದ ಆಕ್ಷೇಪಗಳಿವೆ. ಈ ಆಕ್ಷೇಪ ತೆರವುಗೊಳ್ಳುವ ಮುನ್ನವೇ ಪೈಪ್ಲೈನ್ ಅಳವಡಿಸಲಾಗಿದೆ ಶೇ. 90 ಕಾಮಗಾರಿ ಪೂರ್ಣಗೊಂಡಿದೆ ಎಂದು ಹಣವನ್ನು ಬಿಡುಗಡೆಗೊಳಿಸಬಹುದಲ್ಲ! ಆ ಮೇಲೆ ಸಾರ್ವಜನಿಕರಿಗೆ ನಾವು ಉತ್ತರ ಕೊಡುವ ಪರಿಸ್ಥಿತಿ ಉಂಟಾಗಿದೆ ಎಂದರು.

ಕೆಎಸ್ಆರ್ಟಿಸಿಯ ಸಹಾಯಕ ಸಂಚಾರ ಅಧಿಕಾರಿ ರವೀಂದ್ರ ಮೊದಲು ನರ್ಮ್ನಲ್ಲಿ 36 ಬಸ್ಗಳಿದ್ದವು ಈಗ 26 ಬಸ್ಗಳಿವೆ ಎಂದು ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಯಶ್ಪಾಲ್ ಸುವರ್ಣ, ಬಸ್ಗಳನ್ನು ಖಾಸಗಿ ಬಸ್ ಮಾಲೀಕರ ಉಪಯೋಗಕ್ಕೆ ಓಡಿಸುತ್ತಿದ್ದಿರಾ ಎಂದು ಪ್ರಶ್ನಿಸಿದರು. ಶಾಲಾ ಮಕ್ಕಳಿಗೆ ಅನುಕೂಲವಾಗುವ ಸಮಯದಲ್ಲಿ ಬಸ್ ಇಲ್ಲ. ಬೆಳಿಗ್ಗೆ ಮತ್ತು ಸಂಜೆ ಹೆಚ್ಚು ಬಸ್ ಓಡಿಸಿ ಎಂದು ಎಷ್ಟು ಬಾರಿ ಹೇಳಿದರೂ ಕ್ರಮ ಕೈಗೊಂಡಿಲ್ಲ ಎಂದರು.

ಬೇಡಿಕೆ ಇರುವಲ್ಲಿ ಮೊದಲು ಪ್ರಾಯೋಗಿಕವಾಗಿ ಬಸ್ ಓಡಿಸಿ, ಆದಾಯವಿಲ್ಲ ಎಂದಾದರೆ ವಾಪಸ್ ತೆಗೆದರೆ ಸರಿ, ಮಟಪಾಡಿ ರೂಟ್ನಲ್ಲಿನ ಬಸ್ ಶಾಲಾ ಮಕ್ಕಳ ಉಪಯೋಗಕ್ಕೆ ಸಿಗುತ್ತಿಲ್ಲ ಎಂದರು.

ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷೆ ಸುನೀತಾ ಶೆಟ್ಟಿ ಮಾತನಾಡಿ, ಹೆಬ್ರಿಯಿಂದ ಉಡುಪಿಗೆ ಮೊದಲು ಬ್ರಹ್ಮಾವರ ಮೂಲಕ ಬಸ್ ಇತ್ತು. ಅದನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ಆದಾಯ ನೀಡುತ್ತಿದ್ದ ರೂಟ್ಗಳನ್ನು ಖಾಸಗಿ ಒತ್ತಡಕ್ಕೆ ಬದಲಾಯಿಸಲಾಗುತ್ತಿದೆ. ಇದು ಸರಿಯಲ್ಲ ಜನರ ಅನುಕೂಲಕ್ಕೆ ಕೆಎಸ್ಆರ್ಟಿಸಿ ಇರುವುದು ಖಾಸಗಿಯವರ ಅನುಕೂಲಕ್ಕೆ ಅಲ್ಲ ಎಂದರು.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಹೇಶ್ ಐತಾಳ್ ಆರೋಗ್ಯ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಡಯಾಲಿಸಿಸ್ಗೆ ಎಷ್ಟುಮಂದಿ ಕಾಯುತ್ತಾ ಇದ್ದಾರೆ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಪ್ರಶ್ನಿಸಿದರು. ದಿನಕ್ಕೆ ಮೂರು ಹಂತದಲ್ಲಿ 9 ಡಯಾಲಿಸಿಸ್ ಮಾಡಲಾಗುತ್ತಿದೆ. 7 ಮಂದಿ ಕಾಯುವಿಕೆಯಲ್ಲಿ ಇದ್ದಾರೆ. ಅವರಿಗೆ ಬೇರೆಡೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ ಎಂದರು. ಡಯಾಲಿಸಿಸ್ ಸಾಮರ್ಥ್ಯ ಹೆಚ್ಚಿಸಲು ಅಗತ್ಯದ ಪಟ್ಟಿ ಕೊಡಿ. ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡು ವುದಾಗಿ ಶಾಸಕ ಕೊಡ್ಗಿ ತಿಳಿಸಿದರು.

ಶವಪರೀಕ್ಷೆಗೆ ಸ್ಥಳೀಯ ವೈದ್ಯರು ಲಭ್ಯವಿರದ ಸಂದರ್ಭದಲ್ಲಿ ವಿಳಂಬ ಮಾಡುವ ಬಗ್ಗೆ ಶಾಸಕ ಕೊಡ್ಗಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಡಾ. ಐತಾಳ್ ವಿಳಂಬ ಮಾಡುವುದಿಲ್ಲ. ಅಲಭ್ಯತೆ ಇದ್ದಾಗ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಇರುವ ವೈದ್ಯರು ಶವಪರೀಕ್ಷೆ ಮಾಡುತ್ತಾರೆ ಎಂದರು. ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಶವಪರೀಕ್ಷೆ ವಿಳಂಬ ಮಾಡುತ್ತಿರುವ ಬಗ್ಗೆ ಚರ್ಚೆಯಾಯಿತು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುವಂತೆ ಸೂಚಿಸಲಾಯಿತು.

ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ವಾಹನ ಪಾರ್ಕಿಂಗ್ ಸ್ಥಳವಾಗಿರುವ ಬಗ್ಗೆ ಚರ್ಚಿಸಲಾಯಿತು. ಬ್ರಹ್ಮಾವರ ಠಾಣಾ ಉಪನಿರೀಕ್ಷಕ ಅಶೋಕ್ ಅಲ್ಲಿ ಸಿಬ್ಬಂದಿಯನ್ನು ನೇಮಕಗೊಳಿಸುವುದಾಗಿ ತಿಳಿಸಿದರು.

ಗ್ರೆಡ್ 2 ತಹಶೀಲ್ದಾರ್ ಅಶೋಕ್ ಭಟ್, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಕ್ಷಮಾ ಪಾಟೀಲ್, ಇಒ ಎಚ್.ವಿ ಇಬ್ರಾಹಿಂಪುರ ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ ಮಹೇಶ್ ಕೆ. ಕಾರ್ಯಕ್ರಮ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-28-1768140980

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.