ಬೆಂಗಳೂರು: ಬ್ರಿಟನ್ನ ಪ್ರತಿಷ್ಠಿತ ಸೂಪರ್ ಮಾರ್ಕೆಟ್ ಕಂಪನಿ ಟೆಸ್ಕೊ, ಬೆಂಗಳೂರಿನಲ್ಲಿ ವಹಿವಾಟು ವಿಸ್ತರಣೆ ಮತ್ತು ಹೊಸಕೋಟೆಯಲ್ಲಿ ದೊಡ್ಡ ವಿತರಣಾ ಕೇಂದ್ರ ಸ್ಥಾಪನೆಗೆ ಸಿದ್ಧತೆ ನಡೆಸಿದೆ. 18,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ.

ಜಾಗತಿಕ ಹೂಡಿಕೆ ಸಮಾವೇಶ ಪೂರ್ವಸಿದ್ಧತೆಯ ಭಾಗವಾಗಿ ಬ್ರಿಟನ್ ಪ್ರವಾಸದಲ್ಲಿರುವ ಅವರು, ಅಲ್ಲಿನ ಉದ್ಯಮಿಗಳ ಜತೆಗೆ ನಡೆದ ಮಾತುಕತೆಯ ನಂತರ ಈ ಮಾಹಿತಿ ನೀಡಿದ್ದಾರೆ.

‘ಟೆಸ್ಕೊ ಕಂಪನಿ ಬೆಂಗಳೂರಿನಲ್ಲಿ ಈಗಾಗಲೇ ಸಣ್ಣ ಘಟಕ ಹೊಂದಿದೆ. ಅದನ್ನು ವಿಸ್ತರಿಸಲು ಮುಂದಾಗಿದ್ದು, ಬೆಂಗಳೂರಿನಲ್ಲೇ 1,500 ನೇಮಕಾತಿ ನಡೆಯಲಿದೆ. ಹೊಸಕೋಟೆಯ ವಿತರಣಾ ಕೇಂದ್ರದಲ್ಲಿ 16,500 ಉದ್ಯೋಗ ಸೃಷ್ಟಿಯಾಗಲಿವೆ’ ಎಂದಿದ್ದಾರೆ.

ವೈಮಾನಿಕ ಸಂಸ್ಥೆಗಳೊಂದಿಗೆ ಮಾತುಕತೆ: ಈ ಭೇಟಿಯ ವೇಳೆ ಸಚಿವ ಎಂ.ಬಿ.ಪಾಟೀಲ ಅವರು ರೋಲ್ಸ್ ರಾಯ್ಸ್, ಮೆಗೆಲ್ಲನ್ ಏರೋಸ್ಪೇಸ್ ಕಂಪನಿಗಳ ಪ್ರತಿನಿಧಿಗಳ ಜತೆಗೆ ಚರ್ಚಿಸಿದರು.

ಕರ್ನಾಟಕದಲ್ಲಿ ವೈಮಾಂತರಿಕ್ಷ ಕ್ಷೇತ್ರದಲ್ಲಿ ಹೂಡಿಕೆ ಅವಕಾಶಗಳು ಮತ್ತು ಅನುಕೂಲಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಪಿಯರ್ಸನ್ ಕಂಪನಿಯ ಅಧಿಕಾರಿಗಳಿಗೆ ವಿವರಿಸಿದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.