ಮಂಗಳೂರು: ‘ವಿಧಾನಸಭಾಧ್ಯಕ್ಷರಿಗೆ ಯಾವ ಹೈಕಮಾಂಡ್ ಕೂಡಾ ಇಲ್ಲ. ನನಗೆ ನಾನೇ ಹೈಕಮಾಂಡ್. ಸದ್ಯಕ್ಕೆ ನನಗೆ ಯಾವ ಪಕ್ಷವೂ ಇಲ್ಲ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಇಲ್ಲಿ ಮಂಗಳವಾರ ಹೇಳಿದರು.

ಸಚಿವ ಸ್ಥಾನ ಗಿಟ್ಟಿಸಲು ಪಕ್ಷದ ಹೈಕಮಾಂಡ್ ಭೇಟಿಯಾಗಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.

‘ಈ ಹಿಂದೆ ಸರ್ಕಾರ ರಚನೆಯಾಗುವಾಗಲೂ ಸಚಿವ ಸ್ಥಾನಕ್ಕೆ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ನಾನು ವಿಧಾನಸಭಾಧ್ಯಕ್ಷನಾದೆ. ಈಗಲೂ ಅದೇ ಹುದ್ದೆಯಲ್ಲಿರುವುದರಿಂದ ರಾಜಕೀಯ ಮಾತನಾಡುವುದಿಲ್ಲ. ಸದ್ಯಕ್ಕೆ ಪಕ್ಷದ ವಿಚಾರವೇ ನನ್ನ ತಲೆಯಲ್ಲಿ ಇಲ್ಲ. ಆ ಬಗ್ಗೆ ಆಲೋಚನೆ ಮಾಡಲು ಹೋಗುವುದಿಲ್ಲ’ ಎಂದರು.

‘ಸ್ಪೀಕರ್ ಆಗಿರುವ ಕಾರಣ, ಮುಖ್ಯಮಂತ್ರಿಯವರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ವೇದಿಕೆಯ ಮೇಲೆ ಇರುತ್ತೇನೆ. ಒಂದು ವೇಳೆ ಮಂತ್ರಿಯಾದರೂ ವೇದಿಕೆ ಏರಬಹುದು. ಕೇವಲ ಶಾಸಕನಾದರೆ ವೇದಿಕೆ ಮುಂದುಗಡೆ ಕುಳಿತುಕೊಳ್ಳಬೇಕು ಅಷ್ಟೆ. ಸಚಿವನಾಗುತ್ತೇನೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಬೇಕಾದ ಪ್ರಮೇಯ ಎದುರಾದರೆ, ಉಪಸಭಾಧ್ಯಕ್ಷರಿಗೆ ಅಥವಾ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಅವರಿಗೆ ಸಲ್ಲಿಸಬೇಕಾಗುತ್ತದೆ’ ಎಂದರು.

‘ಸಚಿವ ಸ್ಥಾನದ ವಿಚಾರದಲ್ಲಿ ಜಮೀರ್ ಅಹಮದ್ ಖಾನ್ಗೂ ನನಗೂ ಯಾವುದೇ ಪೈಪೋಟಿ ಇಲ್ಲ. ನಾವಿಬ್ಬರೂ ಪರಸ್ಪರ ಚೆನ್ನಾಗಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪ್ರತಿಯೊಂದು ಖಾತೆಗೂ ಅದರದ್ದೇ ಅದ ಮಹತ್ವ ಹಾಗೂ ವೈಶಿಷ್ಟ್ಯ ಇದೆ. ಸಚಿವನಾದರೆ, ಹೊಸ ಯೋಜನೆಗಳನ್ನು ರೂಪಿಸಿ ಜನರಿಗೆ ಪ್ರಯೋಜನವಾಗುವಂತಹ ಕೆಲಸಗಳನ್ನು ಮಾಡಲು ಅವಕಾಶ ಸಿಗುತ್ತದೆ. ವಿಧಾನಸಭಾಧ್ಯಕ್ಷನಾದರೆ ಶಾಸಕರಿಗೆ ಬೇಕಾಗುವ ಕೆಲಸ ಹಾಗೂ ಕಾನೂನು ರೂಪಿಸುವ ಪ್ರಕ್ರಿಯೆಗಷ್ಟೇ ಸೀಮಿತವಾಗಬೇಕಾಗುತ್ತದೆ. ಆದರೆ ಅದೊಂದು ಗೌರವಯುತ ಸ್ಥಾನ. ತನ್ನದೇ ಆದ ಮಹತ್ವವನ್ನು ಹಾಗೂ ವಿಶೇಷಾಧಿಕಾರವನ್ನು ಹೊಂದಿರುವ ಹುದ್ದೆಯದು. ಅದಕ್ಕೆ ಕೆಲವೊಂದು ಮಿತಿಗಳೂ ಇವೆ’ ಎಂದರು.

‘ಸ್ಪೀಕರ್ ಆದರೆ ಜನರಿಂದ ದೂರವಾಗುವ ಹೆದರಿಕೆ ಕೆಲವರಿಗೆ ಇರುತ್ತದೆ. ಅಂತಹ ಹೆದರಿಕೆಯ ಅಗತ್ಯವಿದೆಯೇ ಎಂಬುದನ್ನು ನಾವೇ ನಿರ್ಧರಿಸಬೇಕು. ಕ್ಷೇತ್ರಕ್ಕೆ ಭೇಟಿ ನೀಡಿದಾಗ ನಾನು ವಿಧಾನಸಭಾಧ್ಯಕ್ಷ ಎಂಬುದನ್ನೇ ಮರೆತು ಜನರ ಜೊತೆ ಬೆರೆಯುತ್ತೇನೆ. ಅಧಿಕಾರ ಯಾವತ್ತೂ ತಲೆಯಲ್ಲಿ ಇರಬಾರದು. ಅದನ್ನು ಕೆಲಸದಲ್ಲಿ ತೋರಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.