ಶಿರಸಿ: ‘ಭಟ್ಕಳದ ನದಿಯಲ್ಲಿ ಮುಳುಗಿ 11 ಮಂದಿ ದುರ್ಮರಣ ಹೊಂದಿದ ಭೀಕರ ದುರಂತದ ಸೂತಕದ ನಡುವೆಯೂ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜ್ಯ ಮಟ್ಟದ ನಾಯಕರನ್ನು ಕರೆತಂದು ಪ್ರತಿಭಟನೆ ನಡೆಸಿರುವುದು ಖೇದಕರ ಮತ್ತು ಇದು ಕೇವಲ ರಾಜಕೀಯ ಲಾಭದ ತಂತ್ರ’ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿಯ ಮಾಧ್ಯಮ ವಕ್ತಾರ ಪ್ರಸನ್ನ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಮರೆತಿರುವ ಸಂಸದರು, ಇಂತಹ ಸೂಕ್ಷ್ಮ ಹಾಗೂ ದುರಂತದ ಘಟನೆಗಳನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಹವಣಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಹಿಂದಿನ ಸಂಸದ ಅನಂತಕುಮಾರ ಹೆಗಡೆ ಅವರು ತಮ್ಮ ಇಡೀ ಅಧಿಕಾರಾವಧಿಯಲ್ಲಿ ಯಾವುದೇ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡದೇ, ಕೇವಲ ವಿವಾದಾತ್ಮಕ ಮತ್ತು ಇಲ್ಲಸಲ್ಲದ ಹೇಳಿಕೆ ನೀಡುವುದರಲ್ಲೇ ಮಗ್ನರಾಗಿದ್ದರು. ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಅದೇ ಹಳೆಯ ದಾರಿಯನ್ನೇ ಹಿಡಿದು ಸಾಗುತ್ತಿದ್ದಾರೆ. ಭಟ್ಕಳದ ಮುರಿನಕಟ್ಟೆ ಧ್ವಂಸ ಪ್ರಕರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಈಗಾಗಲೇ ಕಠಿಣ ಪದಗಳಲ್ಲಿ ಖಂಡಿಸಿದ್ದಾರೆ. ಆದಾರೂ, ಬಿಜೆಪಿ ನಾಯಕರು ಸಚಿವರ ಮೇಲೆಯೇ ಇಲ್ಲದ ಆರೋಪಗಳನ್ನು ಹೊರಿಸುತ್ತಿರುವುದು ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ’ ಎಂದರು.

‘ಭಟ್ಕಳದ ಸ್ವತಃ ಬಿಜೆಪಿ ಮುಖಂಡರೇ ಮಂಕಾಳ ವೈದ್ಯ ಅವರನ್ನು ಭಜರಂಗಿ ಎಂದು ಕರೆದ ಇತಿಹಾಸವಿದೆ. ಅಸಂಖ್ಯಾತ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸಚಿವರು ವೈಯಕ್ತಿಕವಾಗಿ ಅಪಾರ ಸಹಾಯ ಹಸ್ತ ಚಾಚಿದ್ದಾರೆ. ಆದರೆ, ಈ ಯಾವುದೇ ಸತ್ಕಾರ್ಯಗಳು ಸಂಸದ ಕಾಗೇರಿ ಅವರ ಕಣ್ಣಿಗೆ ಕಾಣಿಸುತ್ತಿಲ್ಲ’ ಎಂದು ಕಿಡಿಕಾರಿದರು.

‘ಕಾಗೇರಿ ಅವರು ಈ ಹಿಂದೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾಗಿದ್ದ ಸುದೀರ್ಘ ಅವಧಿಯಲ್ಲಿ ಅನೇಕ ಹಳ್ಳಿಗಳನ್ನು ಅಭಿವೃದ್ಧಿಪಡಿಸದೇ ಸಂಪೂರ್ಣವಾಗಿ ಅಲಕ್ಷಿಸಿ, ಅವುಗಳನ್ನು ಕುಗ್ರಾಮಗಳನ್ನಾಗಿ ಪರಿವರ್ತಿಸಿದ್ದರು. ಆದರೆ, ಈಗ ಭೀಮಣ್ಣ ನಾಯ್ಕ ಅವರು ಶಾಸಕರಾದ ಬಳಿಕ ಈ ಭಾಗದ ಹಳ್ಳಿಗಳು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿವೆ. ಗಂಗಾವಳಿಯಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ಘೋಷಣೆಯಾಗಿದ್ದ ಪರಿಹಾರ ಧನ ಇದುವರೆಗೂ ತಲುಪಿಲ್ಲ’ ಎಂದರು.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಸಹಕರಿಸುತ್ತಿಲ್ಲ ಎಂಬ ಸುಳ್ಳು ನೆಪಗಳನ್ನು ಒಡ್ಡುತ್ತಾ ಕಾಲಹರಣ ಮಾಡುತ್ತಿರುವ ಕಾಗೇರಿ ಅವರು, ಇನ್ನು ಮುಂದಾದರೂ ಇಂತಹ ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಟ್ಟು ಸಂಸದರಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ’ ಎಂದು ಎಚ್ಚರಿಸಿದರು.

ಪಕ್ಷದ ಪ್ರಸನ್ನ ಶೆಟ್ಟಿ, ಜಗದೀಶ ಗೌಡ, ರಘು ಕಾನಡೆ, ಜ್ಯೋತಿ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-20-1377040110

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.