ಬೆಂಗಳೂರು: ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದ (ಯುವಿಸಿಇ) ಹಳೆಯ ವಿದ್ಯಾರ್ಥಿಗಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸುವ ಕುರಿತು ಕೈಗೊಳ್ಳಲಾಗಿರುವ ಸಂಘದ ಠರಾವಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಚುನಾವಣೆ ನಡೆಸಲು ಹಾಲಿ ಪದಾಧಿಕಾರಿಗಳ ಸಂಘದ ಅಡಿಯಲ್ಲಿ ಕೈಗೊಂಡ ಠರಾವನ್ನು ಪ್ರಶ್ನಿಸಿ ಸಂಘದ ಸದಸ್ಯರೂ ಆದ ಮಾಗಡಿ ರಸ್ತೆಯಲ್ಲಿರುವ ವೃಷಭ ಅಷ್ಟಗ್ರಾಮ ಬಡಾವಣೆಯ ಹಿರಿಯ ನಾಗರಿಕ ಬಿ.ಎನ್.ಆನಂದ ಅವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ನ ಹಿರಿಯ ವಕೀಲ ಎ.ವಿ.ಅಮರನಾಥನ್ ವಾದ ಆಲಿಸಿದ ನ್ಯಾಯಪೀಠ; ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಹಕಾರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಹಕಾರ ಸಂಘಗಳ ಜಿಲ್ಲಾ ರಿಜಿಸ್ಟ್ರಾರ್, ಮಲ್ಲೇಶ್ವರ ವಿಭಾಗದ ಸಹಕಾರ ಅಭಿವೃದ್ಧಿ ಅಧಿಕಾರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದ್ದು, ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ.

‘ಠರಾವು ಸ್ವೀಕರಿಸಿದ 2024ರ ಡಿಸೆಂಬರ್ 7ರಂದು ಕೈಗೊಂಡ ನಿರ್ಣಯಗಳನ್ನು ದಾಖಲಿಸಿಕೊಂಡ ದಸ್ತಾವೇಜು ಪುಸ್ತಕವನ್ನು ಇದೇ 6ರೊಳಗೆ ಕೋರ್ಟ್ಗೆ ಹಾಜರುಪಡಿಸಬೇಕು’ ಎಂದು ಪ್ರತಿವಾದಿಯೂ ಆದ ಸಂಘದ ಕಾರ್ಯದರ್ಶಿಗೆ ನಿರ್ದೇಶಿಸಿದೆ.

ಅರ್ಜಿಯಲ್ಲಿ ಏನಿದೆ?: ‘ಯುವಿಸಿಇ (ಯೂನಿವರ್ಸಿಟಿ ಆಫ್ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು) ಹಳೆಯ ವಿದ್ಯಾರ್ಥಿಗಳ ಈ ಸಂಘವು 1950ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯದ ಮೊದಲ ಎಂಜಿನಿಯರಿಂಗ್ ಕಾಲೇಜಾಗಿದ್ದು ಇಲ್ಲಿನ ಹಳೆಯ ವಿದ್ಯಾರ್ಥಿಗಳ ಸಂಘವು ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಗಳ ಸಂಘಗಳಲ್ಲಿ ಒಂದೆನಿಸಿದೆ. ಸಂಘದ ಸದಸ್ಯರಲ್ಲಿ ಹಲವು ಪ್ರತಿಭಾನ್ವಿತ ಮತ್ತು ಖ್ಯಾತನಾಮರು ಇದ್ದು, ಅವರೆಲ್ಲಾ ವಿಶ್ವದೆಲ್ಲೆಡೆ ನೆಲೆಸಿದ್ದು ತಂತಮ್ಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ರಾಜ್ಯಕ್ಕೆ ಕೀರ್ತಿಪ್ರಾಯರಾಗಿದ್ದಾರೆ. ಇಂತಹ ಸಂಘದ ಹಾಲಿ ಕಾರ್ಯದರ್ಶಿ ನೇತೃತ್ವದಲ್ಲಿ ಸಂಘದ ಬೈ–ಲಾಗೆ ತರಲಾಗಿರುವ ತಿದ್ದುಪಡಿ; ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆ–1960ಕ್ಕೆ ವಿರುದ್ಧವಾಗಿದೆ. ಆದ್ದರಿಂದ, ಸಾಮಾನ್ಯ ಸಭೆ ಮತ್ತು ಚುನಾವಣಾ ಅಧಿಸೂಚನೆ ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

‘ಕಳೆದ 26 ವರ್ಷಗಳಿಂದ ಸಂಘದ ಕೆಲವು ಸದಸ್ಯರು ತಮ್ಮದೇ ಆದ ಸ್ವಹಿತಾಸಕ್ತಿಯ ವರ್ತುಲವೊಂದನ್ನು ಸೃಷ್ಟಿಸಿಕೊಂಡು ಸಂಘದ ಪದಾಧಿಕಾರಿಗಳ ಆಯ್ಕೆಯಲ್ಲಿ ಪ್ರಜಾಸತ್ತಾತ್ಮಕ ನಡವಳಿಕೆಗೆ ತಿಲಾಂಜಲಿ ಇರಿಸಿದ್ದಾರೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.