ಬೆಂಗಳೂರು: ‘ಕಾಡುಗಳ್ಳ ವೀರಪ್ಪನ್ ಹಿಡಿಯಲು ನೇಮಕಗೊಂಡಿದ್ದ ವಿಶೇಷ ಕಾರ್ಯಾಚರಣೆ ಪಡೆಯ (ಎಸ್ಟಿಎಫ್) ಭಾಗವಾಗಿದ್ದ 72 ಮಂದಿಗೆ ಬಹುಮಾನದ ಮೊತ್ತವನ್ನು ಮೂರು ತಿಂಗಳಲ್ಲಿ ಪಾವತಿಸಿ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ನಿರ್ದೇಶಿಸಿದೆ.

ಚಾಮರಾಜನಗರದ ಹನೂರು ತಾಲ್ಲೂಕಿನ ಎ.ಶ್ರೀನಿವಾಸ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘2005ರ ಜುಲೈ 8ರ ಸರ್ಕಾರಿ ಆದೇಶದ ಅನುಸಾರ ಫಲಾನುಭವಿಗಳಿಗೆ ಬಹುಮಾನ ವಿತರಿಸಬೇಕು’ ಎಂದು ಆದೇಶಿಸಿದೆ.

‘ಹೈಕೋರ್ಟ್ನ ಸಮನ್ವಯ ನ್ಯಾಯಪೀಠವು 2024ರ ಆಗಸ್ಟ್ 12ರಂದು ನೀಡಿರುವ ತೀರ್ಪಿನ ಪ್ರಕಾರ ಈಗಾಗಲೇ ಪರಿಹಾರ ಪಡೆದಿರುವವರು ಮತ್ತು ಹಾಲಿ ಅರ್ಜಿದಾರರ ನಡುವೆ ತಾರತಮ್ಯ ಮಾಡಲಾಗದು. ಈಗಾಗಲೇ ಯಾರೆಲ್ಲಾ ಪರಿಹಾರ ಪಡೆದಿದ್ದಾರೋ ಅವರಂತೆಯೇ ಅರ್ಜಿದಾರರೂ ಬಹುಮಾನಕ್ಕೆ ಅರ್ಹರಾಗಿದ್ದಾರೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈ ಹಿಂದೆ ಸಮನ್ವಯ ನ್ಯಾಯಪೀಠ 17 ಮಂದಿಗೆ ಪರಿಹಾರ ಬಿಡುಗಡೆ ಮಾಡಲು ಆದೇಶಿಸಿತ್ತು. ‘ವೀರಪ್ಪನ್ನನ್ನು ಒಂದು ದಿನದಲ್ಲಿ ಯಾರೋ ಕೆಲವು ಸಿಬ್ಬಂದಿ ಮಾತ್ರವೇ ಹತ್ಯೆ ಮಾಡಿಲ್ಲ. ಇದಕ್ಕೂ ಮುನ್ನ ಹಲವರು ತಮ್ಮ ಜೀವ ಪಣಕ್ಕಿಟ್ಟು ಮಾಹಿತಿ ಸಂಗ್ರಹಿಸಿ, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ’ ಎಂದಿತ್ತು.

ವೀರಪ್ಪನ್ನನ್ನು 2004ರ ಅ.18ರಂದು ಹತ್ಯೆ ಮಾಡಲಾಗಿತ್ತು. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗೆ ಬಹುಮಾನ ನೀಡುವಂತೆ ಪೊಲೀಸ್ ಮಹಾನಿರ್ದೇಶಕರು 2005ರ ಜ.24 ರಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಇದನ್ನು 2005ರ ಜುಲೈ 8ರಂದು ಸರ್ಕಾರ ಒಪ್ಪಿಕೊಂಡಿತ್ತು.

ಇದರ ಭಾಗವಾಗಿ ರೂಪಿಸಿದ ಯೋಜನೆಯ ಪ್ರಕಾರ ಎಸ್ಟಿಎಫ್ನಲ್ಲಿ ಮೂರು ವರ್ಷಕ್ಕೂ ಹೆಚ್ಚು ಕೆಲಸ ಮಾಡಿದವರಿಗೆ ₹3 ಲಕ್ಷ, ಎರಡು ಅಥವಾ ಮೂರು ವರ್ಷದೊಳಗೆ ಕೆಲಸ ಮಾಡಿದವರಿಗೆ ₹2 ಲಕ್ಷ ಮತ್ತು ಒಂದು ಅಥವಾ ಎರಡು ವರ್ಷ ಕೆಲಸ ಮಾಡಿದ ಸಿಬ್ಬಂದಿಗೆ ₹1 ಲಕ್ಷ ಹಾಗೂ ಒಂದು ವರ್ಷದ ಒಳಗೆ ಕೆಲಸ ಮಾಡಿದ ಸಿಬ್ಬಂದಿಗೆ ₹50 ಸಾವಿರ ನೀಡಲಾಗುವುದು’ ಎಂದು ಘೋಷಿಸಲಾಗಿತ್ತು.

ವೀರಪ್ಪನ್ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ನಿವೃತ್ತ ಅರಣ್ಯ ರಕ್ಷಕರು, ವಾಚರ್, ಚಾಲಕರು, ಉಪ ಅರಣ್ಯ ಸಂರಕ್ಷಕರು, ಸಹಾಯಕ ಅರಣ್ಯ ರಕ್ಷಕರು, ಕ್ಷೇತ್ರ ಅರಣ್ಯ ರಕ್ಷಕರೂ ಭಾಗಿಯಾಗಿದ್ದರು.

ಏತನ್ಮಧ್ಯೆ, ‘ಬಹುಮಾನದ ಮೊತ್ತ ಖಾಲಿಯಾಗಿರುವುದರಿಂದ ವೀರಪ್ಪನ್ ಹತ್ಯೆಯಾದ ದಿನ ಸ್ಥಳದಲ್ಲಿದ್ದ ಆರು ಮಂದಿ ಎಸ್ಟಿಎಫ್ ಸಿಬ್ಬಂದಿಗೆ ಮಾತ್ರ ಬಹುಮಾನದ ಮೊತ್ತವನ್ನು ನೀಡಲಾಗುವುದು’ ಎಂದು ರಾಜ್ಯ ಸರ್ಕಾರ ಹೇಳಿತ್ತು. ಈ ವಾದವನ್ನು ಹೈಕೋರ್ಟ್ ತಿರಸ್ಕರಿಸಿತ್ತು.

‘ಸರ್ಕಾರ ಮಾಡುವ ವಾಗ್ದಾನಕ್ಕೆ ಮಹತ್ವವಿದೆ’

‘ವೀರಪ್ಪನ್ ಸದೆಬಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಕೆಲವರಿಗೆ ಮಾತ್ರವೇ ಬಹುಮಾನದ ಮೊತ್ತವನ್ನು ಸೀಮಿತಗೊಳಿಸಿದ್ದ
ರಾಜ್ಯ ಸರ್ಕಾರದ ನಿಲುವನ್ನು ಈ ಹಿಂದೆ ನ್ಯಾಯಾಲಯವು ಕಟುವಾಗಿ ಟೀಕಿಸಿತ್ತು. ‘ನೀಡಿರುವ ಮಾತನ್ನು ಉಳಿಸಿಕೊಳ್ಳಬೇಕೆ ವಿನಾ ಅದನ್ನು ಮುರಿಯಬಾರದು. ಅದರಲ್ಲೂ ಸಾರ್ವಭೌಮ ರಾಜ್ಯವು ನೀಡುವ ವಾಗ್ದಾನಕ್ಕೆ ತನ್ನದೇ ಆದ ಮಹತ್ವ ಇರುತ್ತದೆ’ ಎಂದು ನ್ಯಾಯಪೀಠ ಕುಟುಕಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-4-1823441520

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.