ನಿಡಗುಂದಿ: ಲಿಂಗವಂತರು, ವೀರಶೈವರು ನಾವೆಲ್ಲರೂ ಒಂದೇ ಎನ್ನುವುದನ್ನು ಮರೆಯಬಾರದು. ಹಲವು ಕಾರಣಗಳಿಂದ ಬೇರೆ ಬೇರೆ ಉಪಜಾತಿಗಳಾಗಿದ್ದರೂ ನಾವೆಲ್ಲಾ ವೀರಶೈವ ಲಿಂಗಾಯತ ಎಂಬ ಒಂದೇ ತೋಟದ ಹಲವು ಹೂಗಳಿದ್ದಂತೆ ಎಂದು ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಮುದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಂಡೆ ಅರಸ ಹನುಮಪ್ಪನಾಯಕನ 540ನೇ ರಾಜ್ಯಮಟ್ಟದ ಜಯಂತ್ಯುತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಹಂಡೆ ಹನುಮಪ್ಪನಾಯಕ ಅದಿಲ್ ಶಾಹಿ ವೀರಶೈವ ಲಿಂಗಾಯತರು ಹಾಗೂ ಹಿಂದೂಗಳ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯನ್ನು ವಿರೋಧಿಸಿದ ಮೊದಲ ಅರಸ. ಹನುಮಪ್ಪನಾಯಕ ವಿಜಯನಗರ ಸಾಮ್ರಾಜ್ಯದ ಮಾಂಡಲಿಕ ಅರಸನಾಗಿದ್ದ ಹೊರತು ಅದಿಲ್ ಶಾಹಿ ಸಾಮಂತನಾಗಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಹಂಡೆವಜೀರ ಸಮಾಜಕ್ಕೆ ನಿಗಮ ಸ್ಥಾಪನೆಗೆ ಪ್ರಯತ್ನಿಸಲಾಗಿತ್ತು. ತಡವಾಗಿ ಹೋದ ಕಾರಣ ಆಗಲಿಲ್ಲ. 2028ರಲ್ಲಿ ನಮ್ಮ ಎನ್ಡಿಎ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಹಂಡವಜೀರ ನಿಗಮ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಯುವ ಮುಖಂಡ ಸತ್ಯಜೀತ ಎಸ್. ಪಾಟೀಲ ಮಾತನಾಡಿದರು. ಉಪನ್ಯಾಸಕ ಐ.ಜಿ.ಹಿರೇಮಠ ಹನುಮಪ್ಪನಾಯಕರ ಕುರಿತು ಉಪನ್ಯಾಸ ನೀಡಿದರು. ಸಮಾಜದ ರಾಜ್ಯ ಸಹ ಕಾರ್ಯದರ್ಶಿ ದೇವೇಂದ್ರ ಗೋನಾಳ ಪ್ರಾಸ್ತಾವಿಕ ಮಾತುಗಳಾಡಿದರು. ಸಮಾಜದ ರಾಜ್ಯಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು.

ನಿಡಗುಂದಿಯ ರುದ್ರೇಶ್ವರ ಮಠದ ರುದ್ರಮುನಿ ಸ್ವಾಮೀಜಿ, ಕರಭಂಟನಾಳದ ಶಿವಕುಮಾರ ಸ್ವಾಮೀಜಿ, ಬ್ಯಾಲಾಳದ ಶ್ರೀಶೈಲ ಮುತ್ಯಾ, ಮುತ್ತಗಿಯ ವೀರ ರುದ್ರಮುನಿ ಸ್ವಾಮೀಜಿ, ಇಟಗಿಯ ಶಾಂತವೀರ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಸಮಾಜದ ಜಿಲ್ಲಾಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾಟೀಲ, ಹಿರಿಯ ನ್ಯಾಯವಾದಿ ಎಸ್.ಆರ್.ಕೋರಿ, ಜಿ.ಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಮುಖಂಡರಾದ ಬಸವರಾಜ ವಂದಾಲ, ಶಂಕರಗೌಡ ಶಿವಣಗಿ, ಭೀಮನಗೌಡ ಕೊಡಗಾನೂರ, ಎಸ್. ಸಿ. ಬಿರಾದಾರ, ಸಿದ್ದನಗೌಡ ಜೀರಲಬಾವಿ ,ಹಣಮಗೌಡ ಕಿರಸೂರ, ನಾಗರಾಜ್ ತಂಗಡಗಿ, ವಿಜಯ ಕಿರಸೂರ, ಶೇಖರಗೌಡ ಬಿರಾದಾರ, ಸಂಗನಗೌಡ ಯಂಕಂಚಿ ಉಪಸ್ಥಿತರಿದ್ದರು. ಮುಖಂಡ ಅವಣ್ಣ ಗ್ವಾತಗಿ ಹಾಗೂ ಪ್ರಭಾಕರ ಖೇಡದ ನಿರೂಪಿಸಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-26-890595245

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.