ಕೊಪ್ಪಳ: ಪಕ್ಷದ ವರಿಷ್ಠರ ಎದುರು ಅಧಿಕಾರ ತ್ಯಾಗದ ಬಗ್ಗೆ ಒಪ್ಪಿಕೊಂಡು ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನಸ್ಸು ಬದಲಾಯಿಸಿದ್ದರೂ ಬದಲಾಯಿಸಿರಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ತಾಲ್ಲೂಕಿನ ನಾರಾಯಣ ಪೇಟೆಯ ಲೀ ವುಡ್ ರೆಸಾರ್ಟ್ ನಲ್ಲಿ ಗುರುವಾರ ಆರಂಭವಾದ ಬಳ್ಳಾರಿ ಜಿಲ್ಲಾಮಟ್ಟದ ಬಿಜೆಪಿ ಪ್ರಶಿಕ್ಷಣ ಕಾರ್ಯಕ್ರಮಕ್ಕೂ ಮೊದಲು ಮಾಧ್ಯಮದವರ ಜೊತೆ ಮಾತನಾಡಿದ ಅವರು ಸಿ.ಎಂ. ಪ್ರವಾಸ ಪಟ್ಟಿಯಲ್ಲಿ ರಾಜ್ಯಪಾಲರ ಭೇಟಿಯ ಬಗ್ಗೆ ಉಲ್ಲೇಖವಿಲ್ಲ ಎಂದರು.

ಸಿಎಂ ರಾಜೀನಾಮೆ ಕೊಡುತ್ತಾರೊ ಇಲ್ಲವೊ, ಬೇರೆಯವರು ಸಿಎಂ ಆಗುತ್ತಾರೊ ಬಿಡುತ್ತಾರೊ ಅದು ಕಾಂಗ್ರೆಸ್ ಆಂತರಿಕ ವಿಚಾರ. ಗೊಂದಲ ಮುಂದುವರೆದಿದೆ. ಆದರೆ ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಆಂತರಿಕ ಕಚ್ಚಾಟದಿಂದ ಆಡಳಿತ ವ್ಯವಸ್ಥೆ ಕುಸಿದುಹೋಗಿದೆ. ಆಡಳಿತ ನಡೆಸಲು ಬಡಿದಾಡುತ್ತಿದ್ದಾರೆ. ರಸಗೊಬ್ಬರ ಕೊರತೆ ಇದ್ದರೂ ರೈತರ ಸಮಸ್ಯೆ ಪರಿಹರಿಸುತ್ತಿಲ್ಲ. ನಿರುದ್ಯೋಗ ವಿಷಯದ ಬಗ್ಗೆ ಮಾತನಾಡುತ್ತಿಲ್ಲ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಯಾರೇ ಆದರೂ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ರಾಜ್ಯದ ಜನರ ಪರಿಸ್ಥಿತಿಯ ಬಗ್ಗೆ ಮಾತ್ರ ತಡೆಗೆಡಿಸಿಕೊಳ್ಳುತ್ತಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.